newsics.com
ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಹಲವರಿಂದ ಸೂಕ್ತ ತನಿಖೆಗೆ ಒತ್ತಡ ಹೆಚ್ಚಿದ ಹಿನ್ನೆಲೆ ಸರ್ಕಾರ ಪ್ರಕರಣದ ಎಸ್ಐಟಿ ರಚಿಸಿದೆ. 4 ಐಪಿಎಸ್ ಅಧಿಕಾರಿಗಳನ್ನ ಒಳಗೊಂಡ ಎಸ್‌ಐಟಿ ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಇಂದಿನಿಂದಲೇ ಅಧಿಕೃತವಾಗಿ ಎಸ್ಐಟಿ ತನಿಖೆ ಶುರುವಾಗಲಿದೆ ಎನ್ನಲಾಗ್ತಿದೆ.
ರಾತ್ರೋ ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ SIT ಅಧಿಕಾರಿಗಳು ಭೇಟಿ ನೀಡಿದ್ದರು ಎನ್ನಲಾಗ್ತಿದೆ. ಧರ್ಮಸ್ಥಳ ಠಾಣೆಯಿಂದ ಎಸ್ ಐ ಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಕೇಸ್ ಫೈಲ್ಗಳನ್ನ ಪಡೆದುಕೊಂಡಿದ್ದು, ಧರ್ಮಸ್ಥಳ ಇನ್ಸ್ ಪೆಕ್ಟರ್ ಸಮರ್ಥ್ ಅವ್ರಿಂದ ಕೆಲ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗ್ತಿದೆ.
ಧರ್ಮಸ್ಥಳದಿಂದಲೇ ಕಾರ್ಯಾಚರಣೆ ಶುರು
ಇದಕ್ಕೂ ಮುನ್ನ ಮಂಗಳೂರಿನಲ್ಲೇ ಕೇಸ್ ನನ್ನ ದಕ್ಷಿಣ ಕನ್ನಡ ಎಸ್ಪಿಯೇ SITಗೆ ಹಸ್ತಾಂತರ ಮಾಡಿದ್ದಾರೆ. ಇಂದಿನಿಂದ ಧರ್ಮಸ್ಥಳ ಹಾಗೂ ಬೆಳ್ತಂಗಡಿಯಲ್ಲಿ ಎಸ್ ಐ ಟಿ ಕಾರ್ಯಾಚರಣೆ ಶುರುವಾಗಲಿದೆ ಎನ್ನಲಾಗ್ತಿದೆ.
ಆರೋಪ ಮಾಡ್ತಿರುವ ಅನಾಮಿಕನನ್ನ ಅತೀ ಶೀಘ್ರದಲ್ಲಿ ನ್ಯಾಯಾಲಯದ ಮೂಲಕ SIT ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಅನಾಮಿಕನನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಧರ್ಮಸ್ಥಳದ ಅರಣ್ಯ ಭಾಗಗಳಲ್ಲಿ ಅಕ್ರಮವಾಗಿ ಶವಗಳನ್ನ ಹೂತಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ದೂರಿನ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆಗೆ ಅನೇಕರು ಆಗ್ರಹಿಸಿದ ಹಿನ್ನೆಲೆ ಸರ್ಕಾರ ಎಸ್ಐಟಿ ತಂಡ ರಚಿಸಿದ್ದು ತನಿಖೆ ಕೂಡ ಶುರುವಾಗಿದೆ.
SIT ತಂಡ ಅಧಿಕೃತವಾಗಿ ಪ್ರಕರಣದ ತನಿಖೆಯನ್ನು ಶುರು ಮಾಡಿದೆ. ವಿಶೇಷ ತನಿಖಾ ತಂಡದ (ಎಸ್‌ಐಟಿ) ಜೊತೆಗೆ ಕಾರ್ಯನಿರ್ವಹಿಸಲು ಹೆಚ್ಚುವರಿ 20 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.