newsics.com
ಪ್ರೀತಿ ಮಾಡಲು ನಿರಾಕರಿಸಿದ ಬಾಲಕಿಯನ್ನು ತಡೆದು ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ ಸತಾರ್ ಜಿಲ್ಲೆ ನಡೆದಿದೆ.
ನಾನು ನಿನ್ನ ಪ್ರೀತಿ ಮಾಡುತ್ತಿದ್ದೇನೆ, ನೀನು ಯಾಕೆ ಪ್ರೀತಿಸುತ್ತಿಲ್ಲ ಎಂದು ಅಪ್ರಾಪ್ತೆಯ ಕುತ್ತಿಗೆಗೆ ಚಾಕು ಇರಿಯೋದಾಗಿ ಬೆದರಿಸಿದ್ದಾನೆ. ಹೀಗಾಗಿ ಆತನಿಂದ ಬಾಲಕಿಯನ್ನು ತಪ್ಪಿಸಲು ಜನ ಹಿಂದೇಟು ಹಾಕಿದ್ದಾರೆ. ಕೆಲವು ಹೊತ್ತು ಅದೇ ರೀತಿಯ ಹೈಡ್ರಾಮಾ ನಡೆಯಿತು. ನಂತರ ಹಿಂದಿನಿಂದ ಬಂದ ಯುವಕನೊಬ್ಬ ಆತನ ಕೈಯಲ್ಲಿದ್ದ ಚಾಕುವನ್ನ ಕಿತ್ಕೊಂಡಿದ್ದಾನೆ.
ನಂತರ ಆತನನ್ನು ಉಳಿದವರು ಹಿಡಿದು ಥಳಿಸಿದ್ದಾರೆ.ಕೊನೆಗೆ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ.ಪಾಗಲ್ ಪ್ರೇಮಿಯಿಂದ ಅಪ್ರಾಪ್ತ ಬಾಲಕಿಯನ್ನ ರಕ್ಷಣೆ ಮಾಡಿದ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.