newsics.com
ಚಿಕ್ಕಬಳ್ಳಾಪುರ: ಗುಜರಾತ್ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾರ್ವಾಡಿ ತಳಿಯ ದುಬಾರಿ ಕುದುರೆಯ ಆಗಮನವಾಗಿದೆ. ಈ ದುಬಾರಿ ಕುದುರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಮಾರ್ವಾಡಿ ಎಂಬ ಅಪರೂಪದ ಈ ತಳಿಯನ್ನು ಉದ್ಯಮಿ ಒಬ್ಬರು ಅತ್ಯಂತ ದುಬಾರಿ ಬೆಲೆಗೆ ಖರೀದಿಸಿದ್ದಾರೆ.
ಈ ಕುದುರೆಯನ್ನು ಬರೋಬ್ಬರಿ 1 ಕೋಟಿ 11 ಲಕ್ಷ ರೂ ಕೊಟ್ಟು ಖರೀದಿ ಮಾಡಲಾಗಿದೆ. ಕುದುರೆಯ ಮೈಕಟ್ಟು, ಎತ್ತರ, ನೋಟ ವೈಯಾರಕ್ಕೆ ಜನರು ಮನಸೋತಿದ್ದಾರೆ. ದುಬಾರಿ ಕುದುರೆ ತಮ್ಮೂರಿಗೆ ಬರ್ತಿದ್ದಂತೆ ರೆಡ್ ಕಾರ್ಪೆಟ್ ಹಾಕಿ, ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಮಾಡಿದ್ದಾರೆ. ಈ ಕುದುರೆ ಅವರ ಪಾರ್ಮ ಹೌಸ್ಗೆ ಹೊಸ ಕಳೆ ತಂದಿದೆ.
ರೋಲೆಕ್ಸ್ ಎಂಬ ಹೆಸರಿನ ಈ ಕುದುರೆ, ಮಾರ್ವಾಡಿ ತಳಿಯ ಕುದುರೆ ಆಗಿದೆ. ಸೇವಾಡಿಯಾ ಮಠ್ ಅನ್ನೋ ರಾಯಲ್ ಬ್ಲಡ್ ಲೈನ್ಗೆ ಸೇರಿದೆ. ಸದ್ಯ ಮೂರುವರೆ ವರ್ಷದ ಈ ಕುದುರೆಯ ಮಸ್ತಾದ ದೇಹಕಟ್ಟು ಹಾಗೂ ಸುರಸುಂದರಿಯರನ್ನ ಮೀರಿಸುವ ಅದರ ನಡಿಗೆ, ಕಾಲು ಪಾದ ಊರುವ ಭಂಗಿಗಳಿಂದಲೇ ಎಲ್ಲರನ್ನ ತನ್ನತ್ತ ಆಕರ್ಷಿಸುತ್ತದೆ.
ರೋಲೆಕ್ಸ್ ಎರಡು ಬಾರಿ ನ್ಯಾಷನಲ್ ಲೆವೆಲ್ ಕಾಂಪಿಟೇಶನ್ನಲ್ಲಿ ಚಾಂಪಿಯನ್ ಆಗಿದ್ದಾನೆ. ಪ್ರತಿದಿನ ಈ ಕುದುರೆಗೆ 12 ಲೀಟರ್ ಹಾಲು, 1 ಡಜನ್ ಮೊಟ್ಟೆ ಸೇರಿದಂತೆ ಹಸಿರು ಹುಲ್ಲು ಹಾಗೂ ಎರಡು ಬಾರಿ ಬಾಡಿ ಮಸಾಜ್, ಜಿಮ್ ವರ್ಕೌಟ್ ಎಲ್ಲವೂ ಮಾಡಿಸಲಾಗುತ್ತದೆ. ದೇಶದಲ್ಲಿ ನಶಿಸಿ ಹೋಗುತ್ತಿರುವ ಅಪರೂಪದ ಕುದುರೆ ತಳಿಗಳನ್ನ ಉಳಿಸುವ ಸಲುವಾಗಿಯೇ ಈ ಕುದುರೆಯನ್ನು ದುಬಾರಿ ಹಣ ಕೊಟ್ಟು ಖರೀದಿ ಮಾಡಿದ್ದಾಗಿ ಕುದುರೆ ಮಾಲೀಕರು ಹೇಳಿದ್ದಾರೆ.