newsics.com
ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರ್ತಿದ್ದ ಯುವತಿ ರಾತ್ರೋರಾತ್ರಿ ಸ್ಟಾರ್ ಆದ್ರು. ಸೋಶಿಯಲ್ ಮೀಡಿಯಾದಿಂದ ಫುಲ್ ಫೇಮಸ್ ಆದ್ರು. ಯೂಟ್ಯೂಬ್ ಚಾನೆಲ್ಗಳು ಮತ್ತು ಟಿವಿ ಚಾನೆಲ್ಗಳು ಮೊನಾಲಿಸಾ ಹಿಂದೆ ಬಿದ್ದಿದ್ರು. ಬಾಲಿವುಡ್ ನಿರ್ದೇಶಕರು ಆಕೆಯ ಮನೆಯ ಬಾಗಿಲು ಬಡಿದಿದ್ರು
ಇದೀಗ ಆಕೆ ತನ್ನ ಚೊಚ್ಚಲ ಚಿತ್ರೀಕರಣಕ್ಕಾಗಿ ಮಧ್ಯ ಪ್ರದೇಶ ಪಿಚೋರೆ ಪಟ್ಟಣಕ್ಕೆ ಆಗಮಿಸಿದ್ದಾಳೆ. ಈ ವೇಳೆ ಆಕೆಯನ್ನು ನೋಡಲು ನೂರಾರು ಮಂದಿ ಜಮಾಯಿಸಿದ್ದಾರೆ. ರಸ್ತೆಯುದ್ದಕ್ಕೂ ಜಮಾಯಿಸಿದ ಜನರು, ಮೊನಾಲಿಸಾಳನ್ನು ನೋಡಿ ಸಂಭ್ರಮಪಟ್ಟಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಒಂದು ಕಟ್ಟಡದ ಟೆರೇಸ್‌ನಿಂದ ಜನರನ್ನುದ್ದೇಶಿಸಿ ಮಾತನಾಡಿರುವ ಮೊನಾಲಿಸಾಗೆ ಭಾರಿ ಜನಸಮೂಹ ಹರ್ಷೋದ್ಗಾರ ಮಾಡುವುದನ್ನು ಕಾಣಬಹುದು. ನಿಮ್ಮನ್ನೆಲ್ಲ ನೋಡಿ ಬಹಳ ಸಂತೋಷವಾಯಿತು ಎಂದು ಮೊನಾಲಿಸಾ ತಿಳಿಸಿದ್ದಾಳೆ. ಈ ವೇಳೆ ತನ್ನತ್ತ ಕೈ ಬೀಸುತ್ತಿದ್ದ ಜನರನ್ನು ನೋಡಿ ಮೊನಾಲಿಸಾ ಮುಗುಳ್ನಗುತ್ತಲೇ ಇದ್ದಳು.
https://www.instagram.com/reel/DMNsEmZSlXF/?igsh=MXR3MWIzamZ0M3k5Mg==