newsics.com
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ತಮಾಷೆಯ ವಿಡಿಯೋಗಳು ಪ್ರತಿದಿನ ನಮ್ಮ ಗಮನವನ್ನು ಸೆಳೆಯುತ್ತವೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಮ್ಮೆಯ ವಿಡಿಯೋವೊಂದು ವೈರಲ್ ಆಗಿ ಗಮನ ಸೆಳೆ್ಇದೆ. ವ್ಯಕ್ತಿಯೊಬ್ಬ ಎಮ್ಮೆಯ ಕೊರಳಿಗೆ 10 ಕೆ.ಜಿ ಚಿನ್ನವನ್ನು ಹಾಕಿ ಸುದ್ದಿಯಾಗಿದ್ದಾರೆ. ಅವರು ಎಮ್ಮೆಗೆ ಚಿನ್ನ ಹಾಕಿದ್ದು ಎಷ್ಟು ದೊಡ್ಡ ಸುದ್ದಿಯಾಗಿದೆಯೋ ಆ ಎಮ್ಮೆಯನ್ನು ಅವರು ಹಸು ಎಂದು ತಪ್ಪಾಗಿ ಭಾವಿಸಿದ್ದರು ಎಂಬ ಸಂಗತಿಯೂ ಅಷ್ಟೇ ದೊಡ್ಡ ಸುದ್ದಿಯಾಗಿದೆ.
ತಮ್ಮ ಮನೆಯಲ್ಲಿರುವುದು ಹಸು ಎಂದು ತಪ್ಪಾಗಿ ಭಾವಿಸಿದ ವ್ಯಕ್ತಿ ಎಮ್ಮೆಗೆ 10 ಕೆಜಿ ಚಿನ್ನದಿಂದ ಅಲಂಕರಿಸಿದ್ದಾರೆ. ಅದನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನೆಟ್ಟಿಗರು ಅದು ಹಸುವಲ್ಲ ಎಮ್ಮೆ ಎಂದು ಹೇಳಿ ಲೇವಡಿ ಮಾಡಿದ್ದಾರೆ
.
ಇನ್‌ಸ್ಟಾಗ್ರಾಮ್ ಬಳಕೆದಾರ ಮುಹಮ್ಮದ್ ಡ್ಯಾನಿಶ್ ಯಾಕೂಬ್ ತನ್ನ ಮನೆಯಲ್ಲಿರುವ ಎಮ್ಮೆಗೆ ಬೆಲೆಬಾಳುವ ಚಿನ್ನದ ಸರವನ್ನು ಕಟ್ಟುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಯಾಕೂಬ್, “ಹಸುವಿಗೆ 10 ಕೆಜಿ ಚಿನ್ನದ ಸರ” ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದಕ್ಕೆ ಭಾರೀ ಟೀಕೆ ಹಾಗೂ ಕಮೆಂಟ್ಗಳು ಬಂದಿವೆ.
ಬರೀ ಎಮ್ಮೆಯಷ್ಟೇ ಅಲ್ಲ, ಕುರಿ, ಒಂಟೆಗಳಿಗೂ ಚಿನ್ನದ ಸರ ಹಾಕುವ ವಿಡಿಯೋಗಳೂ ಇವರ ಇನ್ಸ್ಟಾಗ್ರಾಂ ಖಾತೆಯಲ್ಲಿವೆ.
https://www.instagram.com/reel/C8BLmIvoLaW/?igsh=eWpzc3Vnd281Nmti
ಅಂಕೋಲಾ ಬಳಿ ಗುಡ್ಡ ಕುಸಿತ: ಕನಿಷ್ಠ 10 ಮಂದಿ ಸಾವು, ಗಂಗವಳ್ಳಿ ನದಿಯಲ್ಲಿ ಕೊಚ್ಚಿಹೋದ ಟ್ಯಾಂಕರ್
ಮುಂದಿನ ಮೆಟ್ರೋ ಮಾರ್ಗಗಳಲ್ಲಿ ಅಪರ್ಣಾ ಧ್ವನಿ ಕೇಳಲ್ಲ, ಹೊಸ ವಾಯ್ಸ್‌ಗಾಗಿ BMRCL ಅಧಿಕಾರಿಗಳಿಂದ ಶೋಧ