ಘಟಶ್ರಾದ್ಧ ರೂವಾರಿ, ಹಿರಿಯ ರಂಗ ತಪಸ್ವಿ ಸದಾನಂದ ಸುವರ್ಣ ಇನ್ನಿಲ್ಲ

newsics.com ಮಂಗಳೂರು: ಹಿರಿಯ ನಾಟಕಕಾರ, ಚಲನಚಿತ್ರ ರಂಗ ನಿರ್ದೇಶಕ, ಘಟಶ್ರಾದ್ಧ ನಿರ್ಮಾಪಕ ಸದಾನಂದ ಸುವರ್ಣ ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಕನ್ನಡ ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವೀ ನಾಟಕಗಳನ್ನು ರಚಿಸಿ ನಿರ್ದೇಶಿಸಿದ, ಘಟಶ್ರಾದ್ಧ, ಕುಬಿ ಮತ್ತು ಇಯಾಲದಂತಹ ಸದಭಿರುಚಿಯ ಸಿನಿಮಾಗಳನ್ನು, ಗುಡ್ಡೆದ ಭೂತದಂತಹ ಧಾರಾವಾಹಿ, ಶಿವರಾಮ ಕಾರಂತರ ಕುರಿತು ಆಪ್ತ ನೋಟವನ್ನು ನೀಡುವ ಸಾಕ್ಷ್ಯಚಿತ್ರ, ಧಾರಾವಾಹಿಗಳನ್ನು ಕೊಟ್ಟ ರಂಗಭೂಮಿಯ ಹಿರಿಯಜ್ಜ – ಸದಾನಂದ ಸುವರ್ಣ. ಸ್ವತಃ ನಟ, ನಾಟಕಕಾರನಾಗಿ, … Continue reading ಘಟಶ್ರಾದ್ಧ ರೂವಾರಿ, ಹಿರಿಯ ರಂಗ ತಪಸ್ವಿ ಸದಾನಂದ ಸುವರ್ಣ ಇನ್ನಿಲ್ಲ