Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮುಂದಿನ ಮೆಟ್ರೋ ಮಾರ್ಗಗಳಲ್ಲಿ ಅಪರ್ಣಾ ಧ್ವನಿ ಕೇಳಲ್ಲ, ಹೊಸ ವಾಯ್ಸ್‌ಗಾಗಿ BMRCL ಅಧಿಕಾರಿಗಳಿಂದ ಶೋಧ
ಕರ್ನಾಟಕಪ್ರಮುಖಮನರಂಜನೆ

ಮುಂದಿನ ಮೆಟ್ರೋ ಮಾರ್ಗಗಳಲ್ಲಿ ಅಪರ್ಣಾ ಧ್ವನಿ ಕೇಳಲ್ಲ, ಹೊಸ ವಾಯ್ಸ್‌ಗಾಗಿ BMRCL ಅಧಿಕಾರಿಗಳಿಂದ ಶೋಧ

Share
2 Min Read
SHARE

newsics.com
ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್‌ನಿಂದ ಕಳೆದ ಶುಕ್ರವಾರ ಕೊನೆಯುಸಿರೆಳೆದ ಖ್ಯಾತ ನಿರೂಕಿ, ನಟಿ ಅಪರ್ಣಾ ಅವರ ಧ್ವನಿ ಹೊಸ ಮೆಟ್ರೋ ಮಾರ್ಗಗಳಲ್ಲಿ ಕೇಳಿಬರುವ ಸಾಧ್ಯತೆ ಕ್ಷೀಣಿಸಿದೆ.

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನ ಬಳಸಿ ಹೊಸ ಮೆಟ್ರೋ‌ ಮಾರ್ಗಗಳಲ್ಲೂ ಅಪರ್ಣಾ ಅವರ ಧ್ವನಿಯನ್ನೇ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿತ್ತು. ಆದರೀಗ ನಮ್ಮ ಮೆಟ್ರೋ ಅಧಿಕಾರಿಗಳು ಹೊಸ ಧ್ವನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಹದಿಮೂರು ವರ್ಷಗಳಿಂದ ಮೆಟ್ರೋದ ಹಸಿರು ಮತ್ತು ನೇರಳೆ ಮಾರ್ಗದ ಮೆಟ್ರೋ ರೈಲುಗಳಲ್ಲಿ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ಅವರ ವಾಯ್ಸ್ ಕೇಳಿಬರುತ್ತಿತ್ತು. ಆದರೆ ಅಪರ್ಣಾ ನಿಧನಾನಂತರ ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾಯ್ಸ್‌ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ವಾಯ್ಸ್‌ಗಳ ಹುಡುಕಾಟ ನಡೆಸುತ್ತಿದ್ದಾರೆ.

ಈ ಸಂಬಂಧ ಕನ್ನಡ ರೇಡಿಯೋ ಜಾಕಿಗಳು, ಆ್ಯಂಕರ್ ಗಳು ಹಾಗೂ ಸಿಂಗರ್‌ಗಳ ವಾಯ್ಸ್ ಸ್ಯಾಂಪಲ್ ಅನ್ನು ಮೆಟ್ರೋ ಅಧಿಕಾರಿಗಳು ಕೇಳಿದ್ದಾರೆ.

ಹಳದಿ ಮಾರ್ಗದ ಆರ್‌ವಿ ರೋಡ್ ಟು ಬೊಮ್ಮಸಂದ್ರ, ನಾಗಸಂದ್ರ ಟೂ ಮಾದಾವರ ಮಾರ್ಗ ಸಿದ್ಧವಾಗಿದೆ. ಈ ಮಾರ್ಗಕ್ಕೂ ಅಪರ್ಣಾ ವಾಯ್ಸ್ ಹಾಕುವ ಬಗ್ಗೆ ಬಿಎಂಆರ್ಸಿಎಲ್ ಸಿದ್ಧತೆ ನಡೆಸಿತ್ತು. ಅಪರ್ಣಾ ಮೃತಪಟ್ಟ ಹಿನ್ನೆಲೆ ಹೊಸ ವಾಯ್ಸ್ ಗಾಗಿ ಹುಡುಕಾಟ ನಡೆದಿದೆ. ಸಾಕಷ್ಟು ಜನರು ನಾವು ವಾಯ್ಸ್ ಕೊಡ್ತಿವಿ ಎಂದು ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮೆಟ್ರೋ ಹೊಸ ಮಾರ್ಗಗಳಿಗೆ ಯಾರ ವಾಯ್ಸ್ ಹಾಕಿದ್ರೆ ಸೂಕ್ತ ಎಂದು ಎಲ್ಲಾ ರೇಡಿಯೋ ಜಾಕಿ ಮತ್ತು ಕನ್ನಡ ಆ್ಯಂಕರ್ ಹಾಗೂ ಸಿಂಗರ್ ವಾಯ್ಸ್ ಗಳನ್ನು ಸರ್ಚ್ ಮಾಡುತ್ತಿರುವ ನಮ್ಮ ಮೆಟ್ರೋ ಅಧಿಕಾರಿಗಳು, ಸದ್ಯ ಉದ್ಘಾಟನೆ ಆಗಿರುವ ಎಲ್ಲಾ ಮಾರ್ಗದಲ್ಲಿ ಅಪರ್ಣಾ ಧ್ವನಿ ಬದಲಾಗುವುದಿಲ್ಲ. ಚಲ್ಲಘಟ್ಟ-ವೈಟ್ ಫೀಲ್ಡ್, ಸಿಲ್ಕ್ ಇನ್ಸ್ಟಿಟ್ಯೂಟ್ – ನಾಗಸಂದ್ರ ಮಾರ್ಗದಲ್ಲೂ ಅಪರ್ಣಾ ಧ್ವನಿ ಮುಂದುವರಿಯಲಿದೆ ಎಂದಿದ್ದಾರೆ.

ಅಪರ್ಣಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಧ್ವನಿಯನ್ನು ಸವಿಯುತ್ತಾ ಪ್ರಯಾಣಿಸಿ ಎಂದಿದೆ ನಮ್ಮ ಮೆಟ್ರೋ.

ಈ ಬಗ್ಗೆ ಪ್ರಯಾಣಿಕರು ಹೊಸ ಮಾರ್ಗದಲ್ಲಿ ಅಪರ್ಣಾ ಅವರ ಧ್ವನಿಯನ್ನು ನಾವು ಮಿಸ್ ಮಾಡಿಕೊಳ್ತೀವಿ. ಹೊಸ ಮಾರ್ಗದಲ್ಲಿ ಕನ್ನಡದವ್ರಿಗೆ ವಾಯ್ಸ್ ನೀಡಲು ಅವಕಾಶ ನೀಡಬೇಕು. ಕನ್ನಡ ಟ್ರಾನ್ಸ್ಲೆಟ್ ಮಾಡುವ ವಾಯ್ಸ್ ಗಳನ್ನು ಪ್ಲೇ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಆದರೆ, ಪ್ರತಿದಿನ ಮೆಟ್ರೋ ರೈಲಿನಲ್ಲಿ ಅಪರ್ಣಾ ಅವರ ಧ್ವನಿಯನ್ನು ಕೇಳಿ ಸಂತೋಷಪಡುತ್ತಿದ್ದ ಕನ್ನಡಿಗರಿಗೆ ಮೆಟ್ರೋದ ಮುಂದಿನ ಹೊಸ ಮಾರ್ಗದಲ್ಲಿ ಅವರ ಧ್ವನಿಯನ್ನು ಮಿಸ್ ‌ಮಾಡಿಕೊಳ್ಳುವುದಂತೂ ಗ್ಯಾರಂಟಿ.

ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಆಗಸ್ಟ್ 1ರಿಂದ ಏಳನೇ ವೇತನ ಆಯೋಗ ವರದಿ ಶಿಫಾರಸು ಜಾರಿ

ಶುಭೋದಯ… ಕ್ರೋಧಿ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದಶಮಿ, ಮಂಗಳವಾರ 16-07-2024

ಸೀರೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ ಬೈಸೆಪ್ಸ್ ಕಂಡು ದಂಗಾದ ಫ್ಯಾನ್ಸ್ 

TAGGED:Aparna voice not heard on next metro linessearch by BMRCL officials for new voice
Share This Article
Facebook Twitter Copy Link Print
Previous Article ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ: ಸಚಿವ ರಾಮಲಿಂಗಾರೆಡ್ಡಿ
Next Article ದಿನ ಭವಿಷ್ಯ 16-07-2024 … ಮೇಷ- ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುತ್ತದೆ, ಮಕರ- ಬಂಧು ಮಿತ್ರರೊಂದಿಗೆ ವಿವಾದ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?