newsics.com
ಶುಭೋದಯ
ನಿತ್ಯ ಪಂಚಾಂಗ
16 ಜುಲೈ 2024, ಮಂಗಳವಾರ
ದಕ್ಷಿಣಾಯನ ಪುಣ್ಯಕಾಲ ಪ್ರಾರಂಭ
ಕರ್ಕ ಸಂಕ್ರಾಂತಿ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ ದಕ್ಷಿಣಾಯನ
ದಿನಾಂಕ – 16/07/2024
ವಾರ – ಮಂಗಳವಾರ
ತಿಂಗಳು- ಜುಲೈ
ಬಣ್ಣ- ಕಿತ್ತಳೆ
ತಿಥಿ- ದಶಮಿ 20:33:19
ಪಕ್ಷ- ಶುಕ್ಲ
ನಕ್ಷತ್ರ- ವಿಶಾಖ 26:12:53*
ಯೋಗ- ಸಾಧ್ಯ 07:17:19
ಕರಣ- ತೈತುಲ08:01:26
ಕರಣ ಗರಜ20:33:19
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ತುಲಾ till 19:50:57
ಚಂದ್ರ ರಾಶಿ ವೃಶ್ಚಿಕ from 19:50:57
ಸೂರ್ಯ ರಾಶಿ ಮಿಥುನ till 11:16:54
ಸೂರ್ಯ ರಾಶಿ ಕರ್ಕಾಟಕ from 11:16:54
ಋತು ಗ್ರೀಷ್ಮ
ಸೂರ್ಯೋದಯ 06:02:37
ಸೂರ್ಯಾಸ್ತ 18:48:49
ಹಗಲಿನ ಅವಧಿ 12:46:12
ರಾತ್ರಿಯ ಅವಧಿ 11:14:03
ಚಂದ್ರೋದಯ 14:13:07
ಚಂದ್ರಾಸ್ತ 25:52:56*
ರಾಹು ಕಾಲ 15:37 – 17:13 ಅಶುಭ
ಯಮಗಂಡ ಕಾಲ 09:14 – 10:50 ಅಶುಭ
ಗುಳಿಕ ಕಾಲ 12:26 – 14:01
ಅಭಿಜಿತ್ 12:00 – 12:51 ಶುಭ
ದುರ್ಮುಹೂರ್ತ 08:36 – 09:27 ಅಶುಭ
ದುರ್ಮುಹೂರ್ತ 23:18 – 24:09* ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಬೀಗಿ ಹಾಳಾಗುವುದರ ಬದಲು, ಬಾಗಿ ಎಲ್ಲರೊಳಗೆ ಒಬ್ಬನಾಗಿ ಬಾಳಿ, ಬದುಕುವುದ ಕಲಿ. ಸರಳತೆಯ ಬದುಕೇ ಶ್ರೇಷ್ಠ ಎಂಬುದ ತಿಳಿ.
***
ಇಂದಿನ ಇತಿಹಾಸ
ಜುಲೈ 16
ಪ್ರಮುಖ ಘಟನೆಗಳು
* ಜುಲೈ 16, 1929 ರಂದು ಭಾರತೀಯ ಕೃಷಿ ಮಂಡಳಿಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು.
* ಭಾರತೀಯ ಕ್ರಿಕೆಟ್ ಬೌಲರ್ ವೆಂಕಟರಾಮನ್ ಸುಬ್ರಹ್ಮಣ್ಯ ಅವರು ಜುಲೈ 16, 1936 ರಂದು ಬೆಂಗಳೂರಿನಲ್ಲಿ ಜನಿಸಿದರು.
* ಅರುಣಾ ಅಸಫ್ ಅಲಿ – ಜುಲೈ 16, 1909 ರಂದು ಜನಿಸಿದರು. ಅರುಣಾ ಅಸಫ್ ಅಲಿ ಎಂದು ಪ್ರಸಿದ್ಧರಾದ ಅರುಣಾ ಗಂಗೂಲಿಯವರು ಸ್ವಾತಂತ್ರ್ಯ ಹೋರಾಟಗಾರರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ಧರು. ಜುಲೈ 29, 1996 ರಂದು ನಿಧನರಾದರು. ಇವರಿಗೆ 1997ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.
* ಜುಲೈ 16, 2004 ರಂದು ತಮಿಳುನಾಡು ಕುಂಭಕೋಣಂನ ಖಾಸತಿ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 91 ವಿದ್ಯಾರ್ಥಿಗಳು ಮೃತರಾದರು. ಮೂರನೇ ಮಹಡಿಯಲ್ಲಿ ಮಧ್ಯಾಹ್ನದ ಊಟಕ್ಕೆ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾರಿದ ಬೆಂಕಿ ಪಕ್ಕದಲ್ಲಿದ್ದ ಹುಲ್ಲಿನ ಛಾವಣಿಯ ಶಾಲಾ ಕೊಠಡಿಗೆ ಹರಡಿ ಈ ದುರಂತ ಸಂಭವಿಸಿತು.
* ಡಿ. ಕೆ. ಪಟ್ಟಮ್ಮಾಳ್ – ದಾಮಲ್ ಕೃಷ್ಣಸ್ವಾಮಿ ಪಟ್ಟಮ್ಮಾಳ್ ಅವರು ಕರ್ನಾಟಕ ಸಂಗೀತದ ಮೇರು ಗಾಯಕಿ ಮತ್ತು ಅನೇಕ ಭಾರತೀಯ ಭಾಷೆಯ ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕರು. ಈ ಮಹಾನ್ ಸಂಗೀತ ಸಾಧಕಿ ಪಟ್ಟಮ್ಮಾಳ್ ರವರು ಜುಲೈ 16, 2009ರ ವರ್ಷದಲ್ಲಿ ನಿಧನರಾದರು. ಡಿ.ಕೆ ಪಟ್ಟಮ್ಮಾಳ್ ಅವರಿಗೆ ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಸಂದಿದ್ದವು. ಟೈಗರ್ ವರದಾಚಾರ್ಯರು ಒಮ್ಮೆ ಡಿ.ಕೆ ಪಟ್ಟಮ್ಮಾಳ್ ಅವರನ್ನು ‘ಸಂಗೀತ ಸಾಗರ ರತ್ನ’ವೆಂದು ಸಭಿಕರಿಗೆ ಪರಿಚಯಿಸಿದ್ದರು. ಸಂಗೀತ ಕಲಾನಿಧಿ, ಪಲ್ಲವಿ ಪಟ್ಟಮ್ಮಾಳ್, ಗಾನಸರಸ್ವತಿ ಇವು ಅವರಿಗೆ ಸಂದ ಇನ್ನಿತರ ಗೌರವಗಳು.