newsics.com /ನ್ಯೂಸಿಕ್ಸ್
ಶುಭೋದಯ
ಇಂದಿನ ಪಂಚಾಂಗ/ ರಾಶಿ ಭವಿಷ್ಯ
11-06-2026, ಗುರುವಾರ
ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಅಧಿಕ ಜ್ಯೇಷ್ಠ ಮಾಸ ಕೃಷ್ಣ ಪಕ್ಷ ಏಕಾದಶಿ.
* ಕಮಲಾ / ಪರಮ ಏಕಾದಶಿ
* ಪಂಚಕ ಸಮಾಪ್ತಿ
ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಬಾಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:01 – 15:38, ಯಮಗಂಡ ಕಾಲ 05:57 – 07:34, ಗುಳಿಕ ಕಾಲ 09:10 – 10:47
====
ಇಂದಿನ ರಾಶಿ ಭವಿಷ್ಯ
ಮೇಷ
ಕಾಲಕ್ಕಾಗಿ ತಾಳ್ಮೆಯಿಂದ ಕುಳಿತುಕೊಳ್ಳಬೇಕಾಗಬಹುದು. ಕೂಡಿಟ್ಟ ಹಣವು ಇಂದು ನಿಮ್ಮ ಸಮಯಕ್ಕೆ ಸರಿಯಾಗಿ ಸಿಗುವುದು. ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಪ್ರೀತಿಯನ್ನು ಕೊಡಿ. ಅನಾರೋಗ್ಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸವಾಗಲಿದೆ. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ.
ವೃಷಭ
ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕಿ. ಬರಬೇಕಾದ ಹಣವು ಮಧ್ಯದಲ್ಲೇ ನಿಲ್ಲಬಹುದು. ಧನಾತ್ಮಕ ಅಂಶಗಳನ್ನು ಹುಡುಕಿ ಮುನ್ನಡೆಯಿರಿ. ದಾರಿ ತಾನಾಗಿಯೇ ತೆರದುಕೊಳ್ಳುವುದು. ಮಕ್ಕಳಿಗೆ ಜವಾಬ್ದಾರಿ ಕೊಡಲು ಭಯ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ಖುಷಿ ಕೊಡಲಿದೆ.
ಮಿಥುನ
ದೇಹ ಸೌಂದರ್ಯವನ್ನು ಬೆಳೆಸಿಕೊಳ್ಳಲು ಸಮಯವನ್ನು ಮೀಸಲಿಡುವಿರಿ. ವಿಧಿಯನ್ನು ಹಳಿದು ನಿಮಗೆ ಸಮಾಧಾನವನ್ನು ತಂದುಕೊಳ್ಳುವಿರಿ. ನಿಮ್ಮ ಮಾತುಗಳಿಂದ ಕೆಲವರು ಪ್ರೇರಣೆ ಪಡೆದರೆ, ಕೆಲವರು ನಿಮ್ಮ ಮಾತನ್ನೇ ಆಡಿಕೊಳ್ಳುವರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತಲ್ಲೀನರಾಗಿ ಹೊರ ಜಗತ್ತನ್ನು ಮರೆಯುವರು. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು.
ಕರ್ಕಾಟಕ
ಅನಾರೋಗ್ಯದಿಂದ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಒತ್ತಾಯ ಪೂರ್ವಕವಾಗಿ ನಿಮಗೆ ಇಚ್ಛೆಯಿರುವ ವಿಷಯವನ್ನು ಹೇರಬೇಡಿ. ಹಂಚಿಕೆಯ ವಿಚಾರದಲ್ಲಿ ನಿಮಗೆ ಪೂರ್ಣವಾದ ಮನಸ್ಸಿರದು. ಆಯ್ಕೆ ಮಾಡಲು ಅವರಿಗೆ ಸ್ವಾತಂತ್ರ್ಯವಿರಲಿ. ಇದರಿಂದ ನಿಮಗೆ ನಿರಾಸೆಯಾಗಲಿದೆ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಅನ್ಯರಿಮಂದ ಕಿರಿಕಿರಿ.
ಸಿಂಹ
ವಿದೇಶಕ್ಕೆ ಹೋಗಲು ಆಲೋಚನೆ ಮಾಡದಿದ್ದರೂ ಹೋಗುವ ಅನಿವಾರ್ಯ ಬರಲಿದೆ. ಆನಾರೋಗ್ಯದಿಂದ ಮುಕ್ತಿಸಿಗಲಿದೆ. ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ಆಪ್ತರ ಚಿಕಿತ್ಸೆಗೆ ಧನಸಹಾಯ ಮಾಡಬೇಕಾಗುವುದು. ರಾಜಕಾರಣಿಗಳು ಗೆಲ್ಲುವ ತಂತ್ರವನ್ನು ಹೂಡುವರು. ದೈಹಿಕ ಶ್ರಮವು ಇಂದು ಅಧಿಕವಾಗುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಲಿದೆ.
ಕನ್ಯಾ
ಆಪ್ತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಸರ್ಕಾರದ ಕೆಲಸಗಳು ನಿಧಾನವಾಗಲಿದೆ. ಮತ್ತೆ ಮತ್ತೆ ಬರುವ ಸಂಕಷ್ಟಕ್ಕೆ ದೈವಕ್ಕೆ ಮೊರೆ ಹೋಗಬೇಕಾಗುವುದು. ಭಾರವಾದುದನ್ನು ಎತ್ತಿ ಅಪಾಯ ತಂದುಕೊಳ್ಳುವಿರಿ. ಪ್ರತಿಕೂಲ ವಾತಾವರಣದಲ್ಲಿಯೂ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ಕುಟುಂಬದಲ್ಲಿ ನಿಮ್ಮನ್ನು ಸರಿಯಾಗಿ ಆದರಿಸದೇ ಇರಬಹುದು. ಸುತ್ತಾಟದಿಂದ ಆಯಾಸವಿದೆ. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು.
ತುಲಾ
ಮನೆಯವರ ಜತೆ ಖುಷಿಯಿಂದ ಕಾಲ ಕಳೆಯುವಿರಿ. ಪ್ರವಾಹದ ವಿರುದ್ಧ ಈಜಲು ಸಾಧ್ಯವಾಗದು. ವಾಹನ ಅಪಘಾತವು ಆಗಬಹುದು. ಜಾಗರೂಕತೆಯಿಂದ ಇರಿ. ಕೃಷಿಕರು ತಾವು ಬೆಳೆದ ಬೆಳೆಯಿಂದ ನಷ್ಟವನ್ನು ಅನುಭವಿಸುವಿರಿ. ನಿಮ್ಮನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ ವ್ಯಕ್ತಿಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ.
ವೃಶ್ಚಿಕ
ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಧನವು ಕೈಗೆಟುಕದ ದ್ರಾಕ್ಷಿಯಂತೆ ಅನ್ನಿಸಬಹುದು. ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ಅನಾರೋಗ್ಯವು ನಿರ್ಲಕ್ಷ್ಯದಿಂದ ಹೆಚ್ಚಾಗುವುದು. ನಿಮಗೆ ಬರಬೇಕಾದ ಹಣದ ಕುರಿತು ಲೆಕ್ಕವಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಮನಸ್ಸಿನ ನೆಮ್ಮದಿಯು ಕೆಡಬಹುದು. ಆಗದೇ ಇರುವ ಕೆಲಸಕ್ಕೆ ಬೇಸರ ಬೇಡ. ವೃತ್ತಿಯಲ್ಲಿ ಆತಂಕವು ಇರಲಿದೆ.
ಧನುಸ್ಸು
ಅನಿರೀಕ್ಷಿತ ಎದುರಾದ ಖರ್ಚಿನಿಂದಾಗಿ ಸ್ನೇಹಿತರಲ್ಲಿ ಹಣವನ್ನು ಕೇಳುವಿರಿ. ನಿಮ್ಮ ಬಳಿ ಅತಿಯಾದ ಕೆಲಸವನ್ನು ಪಡೆಯಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ವಿವಾದಗಳೂ ತಾರಕಕ್ಕೆ ಹೋಗಬಹುದು. ಅತಿಯಾದ ಸೌಖ್ಯವನ್ನು ಪಡೆಯಲು ಹೋಗಿ ಅನಾಹುತವನ್ನು ಮಾಡಿಕೊಳ್ಳಬಹುದು. ತಪ್ಪಿನಿಂದ ಹೊಬರಲಾಗದು. ಇಂದು ನಿಮ್ಮ ಸಹಾಯದಿಂದ ಕುಟುಂಬವು ಸಂತೋಷಗೊಳ್ಳುವುದು. ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಲಿದ್ದೀರಿ.
ಮಕರ
ನಿಮ್ಮ ವೇಗಕ್ಕೆ ಸಕಾಲದಲ್ಲಿ ಆಗುವ ಕಾರ್ಯಗಳೂ ತುಂಬ ದೀರ್ಘವೆನಿಸುತ್ತದೆ. ಹಣಕಾಸಿನ ವಿಚಾರವಾಗಿ ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ತಾತ್ಕಾಲಿಕ ಜವಬ್ದಾರಿಯೇ ಪೂರ್ಣಾವಧಿಯಾಗಿ ಮಾಡಬೇಕಾಗುವುದು. ಯಾರದೋ ಮಾತಿನ ಆಧಾರದ ಮೇಲೆ ನೀವು ನಿಮ್ಮವರನ್ನು ದ್ವೇಷಿಸಬಹುದು. ಉದ್ಯೋಗದಲ್ಲಿ ಒತ್ತಡವಿದ್ದು ಅದನ್ನು ನಿಭಾಯಿಸುವ ಕ್ರಮವನ್ನು ಕಲಿತುಕೊಳ್ಳಿ. ನಿಮ್ಮೊಳಗೆ ಸಿಟ್ಟಿನಿಂದ ಕುದಿಯುವಿರಿ. ಆಪ್ತರ ಜೊತೆ ಒಂದಿಷ್ಟು ಸಮಯವನ್ನು ಕಳೆಯಬಹುದು.
ಕುಂಭ
ದೂರದಲ್ಲಿರುವ ನಿಮಗೆ ಸಂಗಾತಿಯ ಸಂಗ ಸಿಗುವ ಸಾಧ್ಯತೆ ಇದೆ. ನಟನೆಯಲ್ಲಿ ಆಸಕ್ತಿಯಿರುವವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಬಡ್ತಿಯನ್ನು ಪಡೆಯಲು ನಾನಾ ಪ್ರಯತ್ನ ನಡೆಯಲಿದೆ. ಇಂದು ನ್ಯಾಯಾಲಯದಲ್ಲಿ ತೀರ್ಪು ಬರಲಿದೆ. ಎಂತಹದೇ ತೀರ್ಮಾನ ಬಂದರೂ ಸ್ವೀಕರಿಸಿ. ಹಿರಿಯರಿಂದ ಆಶೀರ್ವಾದವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಲಾಭಗಳಿಸಬಹುದಾಗಿದೆ. ಆಪ್ತರೇ ನಿಮ್ಮ ಬಗ್ಗೆ ಹಗುರಾಗಿ ಮಾತನಾಡುವರು.
ಮೀನ
ಸ್ವಬುದ್ಧಿಯನ್ನು ಬಳಸಿಯೇ ಕಾರ್ಯಗಳನ್ನು ಮಾಡಿ. ನಿಮ್ಮ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗದು. ಜಾಗೃತಿ ಮೊದಲಾದ ಸಾಮಾಜಿಕ ಕಾರ್ಯಗಳಿಗೆ ತೆರಳಿ ಒಂಟಿತನವನ್ನು ದೂರಮಾಡಿಕೊಳ್ಳುವಿರಿ. ಇಂದು ನಿಮಗೆ ಹೊಸತನ್ನೇನಾದರೂ ಮಾಡುವ ಮನಸ್ಸಿದ್ದರೂ ಬೇಕಾದ ವ್ಯವಸ್ಥೆ, ಪರಿಸ್ಥಿತಿಗಳು ಇಲ್ಲದೇ ನಿಲ್ಲಿಸಬೇಕಾದೀತು. ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಮಾತನ್ನು ಹಿತವೂ ಮಿತವೂ ಆಗುವಂತೆ ಮಾಡಿ.
Numerology ನಿಮ್ಮ ಮೊಬೈಲ್ ನಂಬರ್ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?
Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು
samudrika shastra 6 ಬೆರಳುಗಳಿದ್ದರೆ ಒಳ್ಳೆಯದಾ? ಕೆಟ್ಟದ್ದಾ..? ಸಾಮುದ್ರಿಕಾ ಶಾಸ್ತ್ರ ಹೇಳೋದೇನು?