newsics.com
ಒಮ್ಮೆ ಮಿಲನ ಮಹೋತ್ಸವದ ಬಳಿಕ ತಕ್ಷಣವೇ ಮತ್ತೊಮ್ಮೆ ಮಿಲನ ಹೊಂದುವುದು ಪುರುಷನಿಂದ ಸಾಧ್ಯವಾಗಲಾರದು. ಆದರೆ ಸ್ತ್ರೀಗೆ ಇದು ಸಾಧ್ಯ. ಯಾಕೆಂದರೆ ಆಕೆ ಬಹು ತುರೀಯಾವಸ್ಥೆಗಳನ್ನು ಅನುಭವಿಸಬಲ್ಲಳು.
ಪುರುಷ ಒಮ್ಮೆ ಸ್ಖಲನಗೊಂಡ ಬಳಿಕ ಕೆಲಕಾಲದವರೆಗೆ ಮತ್ತೊಮ್ಮೆ ಲೈಂಗಿಕ ಸಂಪರ್ಕದಲ್ಲಿ ಪಾಲ್ಗೊಳ್ಳಲಾರ. ಯಾಕೆಂದರೆ ಆತನ ಜನನಾಂಗ ನಿಮಿರುವುದಿಲ್ಲ. ಎಷ್ಟೇ ಪ್ರಚೋದಿಸಿದರೂ ಜನನಾಂಗ ಸಹಕರಿಸದು.
ವೈದ್ಯರು ಇದನ್ನು ವಕ್ರೀಭವನದ ಸಮಯ (refractory period) ಎನ್ನುತ್ತಾರೆ. ಲೈಂಗಿಕ ಮಿಲನದ ತುತ್ತ ತುದಿಯಲ್ಲಿ ಗಂಡಸು ತನ್ನ ವೀರ್ಯವನ್ನು ಚಿಮ್ಮಿಸುತ್ತಾನೆ. ಆತನ ಲೈಂಗಿಕತೆಯ ಪರಮ ಸುಖದ ಕ್ಷಣ ಅದೇ ಆಗಿರುತ್ತದೆ. ಈ ವೇಳೆ ಆತನಲ್ಲಿ ಡೋಪಮೈನ್ ಎಂಬ ಆನಂದದ ಹಾರ್ಮೋನ್ ಸೇರಿದಂತೆ ಅನೇಕ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ. ಆತನ ದೇಹದ ಕಣಕಣವೂ ಆನಂದವನ್ನು ಹೊಂದುತ್ತದೆ. ಇದು ಪುರುಷನ ಪರಾಕಾಷ್ಠೆಯ ಕ್ಷಣ.
ಇದರ ನಂತರದ ಅವಧಿಯೇ ವಕ್ರೀಭವನದ ಅವಧಿ. ಈ ಅವಧಿಯಲ್ಲಿ ಪುರುಷ ಮತ್ತೊಮ್ಮೆ ನಿಮಿರುವಿಕೆ ಹೊಂದಲು ಸಾಧ್ಯವಿಲ್ಲ.
ಆದರೆ ಸ್ತ್ರೀಗೆ ಹಾಗಲ್ಲ. ಆಕೆಯು ಮಿಲನಕ್ಕೆ ಸಿದ್ಧಳಾಗದೆ ಹೋದರೂ ಪುರುಷನು ಆಕೆಯನ್ನು ಬಳಸಿಕೊಳ್ಳಲು ಸಾಧ್ಯವಿದೆ. ಆದರೆ ಪುರುಷನನ್ನು ಹೀಗೆ ತಯಾರು ಮಾಡುವುದು ಸಾಧ್ಯವಿಲ್ಲ.
ಸ್ತ್ರೀಯ ಪರಾಕಾಷ್ಠೆಯೂ ಪುರುಷನಿಗಿಂತ ಭಿನ್ನ. ಆಕೆ ಒಂದೇ ಸಲದ ಮಿಲನದಲ್ಲಿ ಅನೇಕ ಸಲ ಪರಾಕಾಷ್ಠೆ ಹೊಂದಬಹುದು. ಅಂದರೆ ಪುರುಷನು ದೀರ್ಘಕಾಲ ಸಂಭೋಗ ಮುಂದುವರಿಸಬಲ್ಲವನಾದರೆ ಆತ ಸ್ಖಲನ ಹೊಂದುವ ಮೊದಲು ಆಕೆ ಹಲವು ಪರಾಕಾಷ್ಠೆಗಳನ್ನು ಅನುಭವಿಸಬಹುದು. ಆಕೆಗೆ ಗಂಡಸಿನ ಹಾಗೆ ರಿಫ್ರಾಕ್ಟರಿ ಪೀರಿಯಡ್ ಇರುವುದೇ ಇಲ್ಲ.
ಹೆಣ್ಣಿನ ಜನನಾಂಗಗಳು ಲೈಂಗಿಕ ಚಟುವಟಿಕೆಯ ವೇಳೆ ಒದ್ದೆಯಾಗಿರುವುದರಿಂದ, ಆಕೆ ನಂತರ ಮಾನಸಿಕವಾಗಿ ಸೆಕ್ಸ್ಗೆ ಇಷ್ಟಪಡದಿದ್ದರೂ ಆಕೆಯ ದೇಹ ಅದನ್ನು ಸ್ವೀಕರಿಸಬಹುದು.
ಗಂಡಸು ಸ್ಖಲನದೊಂದಿಗೆ ತೃಪ್ತಿ ಹೊಂದುತ್ತಾನೆ. ಆಗ ಅವನಿಗೆ ಆಯಾಸ ಉಂಟಾಗುತ್ತದೆ. ಆತನ ದೇಹ ಮತ್ತೊಂದು ಆಯಾಸದ ಚಟುವಟಿಕೆಯನ್ನು ಮಾಡಲು ಇಷ್ಟಪಡುವುದಿಲ್ಲ.
ಪುರುಷನಲ್ಲಿ ಈ ಅವಧಿಯಲ್ಲಿ ಗರಿಷ್ಠ ಟೆಸ್ಟೋಸ್ಟಿರಾನ್ ಹಾರ್ಮೋನ್ ಸ್ರವಿಸಿರುತ್ತದೆ. ತನ್ನ ಕೆಲಸವನ್ನೂ ಮುಗಿಸಿರುತ್ತದೆ. ಇನ್ನೊಮ್ಮೆ ಟೆಸ್ಟೋಸ್ಟಿರಾನ್ ಸ್ರವಿಸಲು ಒಂದಷ್ಟು ಕಾಲ ಬೇಕು. ಹೀಗಾಗಿ ಈ ಅವಧಿಯಲ್ಲಿ ಆತನ ಜನನಾಂಗ ನಿಮಿರುವಿಕೆ ಸಾಧ್ಯವಿಲ್ಲ.
ವಕ್ರೀಭವನದ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕೆಲವರಿಗೆ ಅದು ಕೆಲವೇ ನಿಮಿಷಗಳಿದ್ದರೆ, ಇನ್ನು ಕೆಲವರಿಗೆ ಅದು 24 ಗಂಟೆಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಬೇಕಾಗಬಹುದು.
ಸ್ಖಲನದ ಬಳಿಕ ಪುರುಷನ ದೇಹದಲ್ಲಿ ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನ್ ಸ್ರವಿಸುತ್ತದೆ. ಇದು ದೇಹವನ್ನು ಶಾಂತಗೊಳಿಸುತ್ತದೆ. ಈ ಹಾರ್ಮೋನ್ನ ಸ್ರಾವ ವಯಸ್ಸಾದಂತೆ ಹೆಚ್ಚು. ಹೀಗಾಗಿ, ವಯಸ್ಸಾದ ಗಂಡಸರಲ್ಲಿ ರಿಫ್ರಾಕ್ಟರಿ ಪೀರಿಯಡ್ ಅಧಿಕ.
ಅದೇ ತರುಣರು ಅಥವಾ ಹೊಸದಾಗಿ ಸೆಕ್ಸ್ ಮಾಡುತ್ತಿರುವವರು, ಉತ್ಸಾಹದಿಂದ ಒಂದೇ ಸಲಕ್ಕೆ ಎರಡು- ಮೂರು ಬಾರಿ ಸೆಕ್ಸ್ನಲ್ಲಿ ಪಾಲ್ಗೊಳ್ಳಬಲ್ಲರು.
ವಕ್ರೀಭವನದ ಅವಧಿಯನ್ನು ಕಡಿಮೆ ಮಾಡಲು ಅಥವಾ ಒಂದೇ ರಾತ್ರಿಯಲ್ಲಿ ಹೆಚ್ಚು ಬಾರಿ ಸುಖ ಹೊಂದಲು ಸಾಧ್ಯ.
ಉತ್ತಮ ಲೈಂಗಿಕ ಆರೋಗ್ಯಕ್ಕೆ ಮೂಲ ಉತ್ತಮ ದೇಹಾರೋಗ್ಯ. ಹೃದಯ ರಕ್ತನಾಳದ ಆರೋಗ್ಯ.
ವಾಕಿಂಗ್, ಓಟ ಅಥವಾ ಏರೋಬಿಕ್ಸ್ನಂತಹ ಹೃದಯ ರಕ್ತನಾಳದ ವ್ಯಾಯಾಮವನ್ನು ಸದಾ ಮಾಡುವುದು.
ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು. ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು.
ಮಧುಮೇಹದಂತಹ ಕಾಯಿಲೆಗಳು ಬರದಂತೆ, ಬಂದರೂ ಹಿಡಿತದಲ್ಲಿರುವಂತೆ ನೋಡಿಕೊಳ್ಳುವುದು. ಕೆಗೆಲ್ ವ್ಯಾಯಾಮವನ್ನು ಪ್ರಯತ್ನಿಸಬಹುದು.