newsics.com
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರ ಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಸಂಬಂಧ ಹೈಕೋರ್ಟ್‌ಗೆ ದರ್ಶನ್ ಪರ ವಕೀಲರು ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.
ಕಳೆದೊಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲರುವ ದರ್ಶನ್ ಮನೆ ಊಟವಿಲ್ಲದೆ ಸುಮಾರು ಹತ್ತು ಕೆಜಿ ತೂಕ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ ಮನೆ ಊಟಕ್ಕಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್ ಪರ ವಕೀಲರು ಇಂದು ಹೈಕೋರ್ಟ್ ಮೊರೆ ಹೋಗಿದ್ದು ದರ್ಶನ್‌ಗೆ ಮನೆ ಊಟ, ದಿಂಬು ಹಾಸಿಗೆ ಮತ್ತು ಪುಸ್ತಕ ನೀಡುವಂತೆ ಮನವಿ ಮಾಡಿದ್ದಾರೆ.
ಜೈಲಿನ ಊಟ ನಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ಮಾಡುತ್ತಿರುವುದರಿಂದ ಅವರಿಗೆ ವಾಂತಿ, ಭೇದಿ ಆಗುತ್ತಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಆದ್ದರಿಂದ ಮನೆಯ ಊಟ ಸೇವಿಸಲು ಅನುಮತಿ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.
ಜೈಲು ಅಧಿಕಾರಿಗಳಿಗೆ ಈ ಸಂಬಂಧ ನಿರ್ದೇಶಿಸುವಂತೆ ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.
ಮನೆಗಾಗಿ ಯುವತಿಯ ಪ್ರೇಮದ ನಾಟಕ! 20 ಯುವಕರ ಜತೆ ಡೇಟಿಂಗ್, ಗಿಫ್ಟ್ ಪಡೆದ ಐಫೋನ್ ಮಾರಿ ಸ್ವಂತ ಮನೆ ಖರೀದಿ!
ರಷ್ಯಾ ಸೇನೆಯಲ್ಲಿನ ಭಾರತೀಯರ ಶೀಘ್ರ ಬಿಡುಗಡೆಗೆ ಪುಟಿನ್ ಭರವಸೆ: ಭಾರತಕ್ಕೆ ರಾಜತಾಂತ್ರಿಕ ಗೆಲುವು