Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Young generation ಯುವಜನರೇ ಎಚ್ಚರ; ಎಐ ಕಲಿಯದಿದ್ದರೆ ಇನ್ನು ಮುಂದೆ ಕೆಲಸ ಸಿಗಲ್ಲ
ದೇಶಪ್ರಮುಖ

Young generation ಯುವಜನರೇ ಎಚ್ಚರ; ಎಐ ಕಲಿಯದಿದ್ದರೆ ಇನ್ನು ಮುಂದೆ ಕೆಲಸ ಸಿಗಲ್ಲ

Share
5 Min Read
SHARE

newsics.com

ನವದೆಹಲಿ: ನೀವು ಎಐ ಕಲಿಯದೇ ಇದ್ದಲ್ಲಿ ಇನ್ನು ಮುಂದೆ ನೀವು ಬಯಸಿದ ಕೆಲಸ ಸಿಗೋದು ಕಷ್ಟ ಎಂದು ಸ್ವತಃ ಗೂಗಲ್‌ನ ಕೃತಕ ಬುದ್ಧಿಮತ್ತೆ ಬೆಳವಣಿಗೆಗಳ ಹಿಂದಿನ ಸಂಶೋಧನಾ ಪ್ರಯೋಗಾಲಯ ‘ಡೀಪ್‌ಮೈಂಡ್‌’ನ ಸಿಇಒ ಡೆಮಿಸ್ ಹಸ್ಸಾಬಿಸ್ ಯುವ ಸಮೂಹವನ್ನು ಎಚ್ಚರಿಸಿದ್ದಾರೆ.

ಇಂದು ಕೃತಕ ಬುದ್ಧಿಮತ್ತೆ(ಎಐ) ಹೊಸ ತಂತ್ರಜ್ಞಾನವಾಗಿ ಉಳಿದಿಲ್ಲ. ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿರುವ ಅದು, ಉದ್ಯೋಗಗಳನ್ನು ನುಂಗಲು ಕಚೇರಿಗಳೆದುರು ಬಾಯ್ತೆರೆದು ನಿಂತಾಗಿದೆ ಹಾಗೂ ಈಗಾಗಲೇ ಹಲವರ ಕೆಲಸವನ್ನು ಆಪೋಶನ ತೆಗೆದುಕೊಂಡು ಆತಂಕ ಸೃಷ್ಟಿಸಿದೆ. ಇದು ಆರಂಭವಷ್ಟೇ. ಕೆಲ ವರ್ಷಗಳಲ್ಲಿ ಎಐ ಯುಗವೇ ನಮ್ಮೆದುರು ತೆರೆದುಕೊಳ್ಳಲಿದೆ. ಇದಕ್ಕಾಗಿ ಡಬಲ್‌ ಡಿಗ್ರಿ ಪಡೆದು ಕುಳಿತರೂ ಸಾಲದು. ಉದ್ಯೋಗಿಗಳು, ಉದ್ಯೋಗಾಕಾಂಕ್ಷಿಗಳೆಲ್ಲರೂ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕುತ್ತ, ಹೊಸಹೊಸ ಆವಿಷ್ಕಾರಗಳಿಗೆ ಒಡ್ಡಿಕೊಂಡು ಒಗ್ಗಿಕೊಳ್ಳುತ್ತ, ಎಐ ಹರಿವಿನೊಂದಿಗೆ ಸಾಗುವುದು ಅತ್ಯಗತ್ಯ ಎಂಬ ರೀತಿಯಲ್ಲಿ ‘ಹಾರ್ಡ್‌ ಫೋರ್ಕ್‌’ ಎಂಬ ಟೆಕ್‌ ಸಂಬಂಧಿತ ಪಾಡ್‌ಕಾಸ್ಟ್‌ನಲ್ಲಿ ಡೆಮಿಸ್ ಹಸ್ಸಾಬಿಸ್ ವಿವರಿಸಿದ್ದಾರೆ.

ಎಐ ಯುಗಕ್ಕೆ ಸಿದ್ಧರಾಗಿ: ಮುಂದಿನ 5-10 ವರ್ಷಗಳಲ್ಲಿ ಎಐ ಕ್ರಾಂತಿ ಖಚಿತ. ಆಗ ಹಲವು ಕೆಲಸಗಳು ಕಾಣೆಯಾಗುವುದು ನಿಶ್ಚಿತ. ಅತ್ತ ಹೊಸ, ಕುತೂಹಲಕಾರಿ ಮತ್ತು ಮೌಲ್ಯಯುತ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಇದರ ಲಾಭ ಪಡೆಯಲು, ನಾವು ಎಐನಲ್ಲಿ ಪರಿಣಿತರಾಗುವುದು ಅವಶ್ಯಕ. ಆದ್ದರಿಂದ ಎಐ ಟೂಲ್‌ಗಳ ಬಳಕೆಯನ್ನು ಇಂದಿನಿಂದಲೇ ಆರಂಭಿಸಿ. ಆಗ ಅನುದಿನ ಆಗುವ ಅನ್ವೇಷಣೆಗಳನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಲು ಸುಲಭವಾಗುತ್ತದೆ. ‘ಮೊದಲು ಕಲಿಯಲು ಕಲಿಯಬೇಕು’ ಎಂಬುದು ಹಸ್ಸಾಬಿಸ್ ಕಿವಿಮಾತು.

ಕೋಡಿಂಗ್‌ ಕಲಿಕೆ ಅತ್ಯಗತ್ಯ: ತಂತ್ರಜ್ಞಾನವೇ ಭವಿಷ್ಯವೆಂಬುದು ಹೌದಾದರೂ, ಕೇವಲ ಅದರ ಜ್ಞಾನ ಸಾಲದು. ಜೊತೆಗೆ ಸದೃಢ ‘ಸ್ಟೆಂ’ (STEM- ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಜ್ಞಾನವೂ ಇರಬೇಕು. ಇದರಲ್ಲಿ ಕೋಡಿಂಗ್‌ ಕಲಿಕೆಗೆ ಆದ್ಯತೆ ನೀಡಬೇಕು. ಕೋಡಿಂಗ್‌ ಎಂದರೆ, ನಿರ್ದಿಷ್ಟ ಕೆಲಸ ಮಾಡುವಂತೆ ಕಂಪ್ಯೂಟರ್‌ಗೆ ಸೂಚನೆ ನೀಡುವುದು. ಎಐ ಜಗತ್ತನ್ನು ಪ್ರವೇಶಿಸಲು ಕೋಡಿಂಗ್‌ ಕೀಲಿಕೈ ಇದ್ದಂತೆ. ಸೃಜನಶೀಲತೆ, ಹೊಂದಿಕೊಳ್ಳುವಿಕೆಯಂಥ ‘ಮೆಟಾ ಕೌಶಲ್ಯ’ಗಳನ್ನು ಬೆಳೆಸಿಕೊಂಡು, ನಿರಂತರ ಬದಲಾವಣೆಗೆ ಒಗ್ಗಿಕೊಂಡು ಅಳವಡಿಸಿಕೊಳ್ಳಬೇಕು. ಏಕೆಂದರೆ ಎಐ ಎಂಬುದು ಭವಿಷ್ಯವಲ್ಲ, ಅದು ವರ್ತಮಾನ.

ಶಿಕ್ಷಣದೊಂದಿಗೆ ಎಐ ಕಲಿಕೆ, ಬಳಕೆ: ಕೃತಕ ಬುದ್ಧಿಮತ್ತೆಯು ಉದ್ಯೋಗ ಕ್ಷೇತ್ರ ಆವರಿಸಿಕೊಂಡಿರುವ ಕಾರಣ, ಯುವಕರು, ಅದರಲ್ಲೂ ವಿದ್ಯಾರ್ಥಿಗಳು ಅದಕ್ಕೆ ಈಗಿಂದಲೇ ಸಿದ್ಧರಾಗುವುದು ಅಗತ್ಯ. ಪಠ್ಯಕ್ರಮದ ಹೊರತಾಗಿಯೂ ಕಲಿಯುವ ಮತ್ತು ಎಐ ಕ್ರಾಂತಿಯ ಕುರಿತ ಕುತೂಹಲವನ್ನು ಸದಾ ಜೀವಂತವಾಗಿರಿಸಿಕೊಳ್ಳಿ. ನಿರ್ದಿಷ್ಟ ವಿಷಯಗಳಲ್ಲಿ ಪರಿಣಿತರಾಗಿರುವುದು ಅಗತ್ಯವಾದರೂ, ಆ ಕೆಲಸಗಳನ್ನೀಗ ಯಂತ್ರಗಳೂ ಮಾಡತೊಡಗಿವೆ. ಆದ್ದರಿಂದ ಎಐ ನಕಲಿಸಲಾಗದಂತಹ ವಿದ್ಯೆಗಳಲ್ಲಿ ಪರಿಣಿತರಾಗಿ. ಇದು ದೀರ್ಘಾವಧಿಗೆ ಕೆಲಸಕ್ಕೆ ಬರುತ್ತದೆ ಹಾಗೂ ನಿಮಗೆ ಬದಲಾಗುವ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಸಹಕಾರಿಯಾಗುತ್ತವೆ.

ಐಟಿಯನ್ನೂ ಬಿಟ್ಟಿಲ್ಲ ಎಐ: ‘ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಕಡಿತ: ಇನ್ನು ಎಐ ಉದ್ಯೋಗಿ’ ಎಂಬ ತಲೆಬರಹಗಳನ್ನು ಹೊತ್ತ ಸುದ್ದಿಗಳು ಸದ್ದುಮಾಡತೊಡಗಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಲಿದೆ. ಕಾರಣ, ಎಐ ಮೊದಲು ಕಾಲಿಟ್ಟದ್ದೇ ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರಕ್ಕೆ. ಈಗ ಕುತ್ತು ಬಂದಿರುವುದು ಐಟಿ ಕ್ಷೇತ್ರದ ಮೂಲಭೂತ ಉದ್ಯೋಗಗಳಿಗೆ. ಒಮ್ಮೆ ಈ ಕೆಲಸವನ್ನು ಮಾಡಲು ಎಐಗೆ ತರಬೇತಿ ನೀಡಿದರೆ, ಮತ್ತೆ ಮಾನವನ ಹಸ್ತಕ್ಷೇಪದ ಅಗತ್ಯವಿಲ್ಲ. ಇದರಿಂದ ಕಂಪನಿಗಳ ಖರ್ಚು ಕಡಿತವಾಗುವುದಷ್ಟೇ ಅಲ್ಲದೆ, ಕೆಲಸವೂ ತ್ವರಿತವಾಗಿ ಆಗುತ್ತದೆ. ಓಪನ್‌ಎಐನ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ಕೂಡ, ‘ಸಾಫ್ಟ್‌ವೇರ್‌ ಕೆಲಸದ ಭವಿಷ್ಯವಿರುವುದು ಕೆಲ ವರ್ಷಗಳು ಮಾತ್ರ. ಒಂದು ಹಂತದ ಬಳಿಕ ಅವರ ಅಗತ್ಯತೆ ಕ್ಷೀಣಿಸಬಹುದು’ ಎಂದಿದ್ದರು. ಇದಕ್ಕಿರುವ ಮಾರ್ಗ ಒಂದೇ. ಎಐ ಮಾಡಬಹುದಾದ ಕೆಲಸಗಳನ್ನು ಬಿಟ್ಟು, ಎಐನಿಂದ ಕೆಲಸ ಮಾಡಿಸುವ ಕೆಲಸ ಕಲಿಯಿರಿ!

ಎಐಗೂ ಬರುತ್ತಿದೆ ನಿಮ್ಮಷ್ಟೇ ಬುದ್ಧಿ: ಕೆಲ ವರ್ಷಗಳ ಹಿಂದೆ, ಹಲವರ ಬೌದ್ಧಿಕ ಶ್ರಮದಿಂದಾಗಿ, ನಮ್ಮ ದೈಹಿಕ ಶ್ರಮವನ್ನು ತಗ್ಗಿಸುವ ರೋಬೋಟ್‌ಗಳ ಜನನವಾಯಿತು. ಆಗ, ಒಂದು ಕಡೆ ಅವುಗಳು ನಮ್ಮ ಜೀವನವನ್ನು ಸುಲಭವಾಗಿಸುತ್ತವೆ ಎಂಬ ನಿರೀಕ್ಷೆಯಿದ್ದರೆ, ಇನ್ನೊಂದು ಕಡೆ ಕೆಲಸವನ್ನು ಕಸಿಯಬಹುದೆಂಬ ಆತಂಕವೂ ಇತ್ತು. ಆದರೆ ಕೆಲಸ ಕಸಿಯುವ ಸ್ಪರ್ಧೆಯಲ್ಲಿ ರೋಬೋಟ್‌ಗಳಿಗಿಂತ ಎಐ ಹತ್ತುಪಟ್ಟು ಮುಂದಿವೆ. ಕಾರಣ, ಕೃತಕ ಬುದ್ಧಿಮತ್ತೆಗೆ ಮಾನವರ ಬುದ್ಧಿಯಂತೆ ಕೆಲಸ ಮಾಡುವ ಸಾಮರ್ಥ್ಯ ಕೊಂಚ ಮಟ್ಟಿಗೆ ಬಂದಾಗಿದೆ ಹಾಗೂ ಅದು ವೃದ್ಧಿಸುತ್ತಲೇ ಇದೆ.

ಕೆಲಸ ಕಳೆದುಕೊಳ್ತೀರಿ, ಹುಷಾರ್‌: 2030ರ ವೇಳೆಗೆ ವಿಶ್ವದಲ್ಲಿ ಸರಿಸುಮಾರು 30-80 ಕೋಟಿ ಜನ ಈಗಿರುವ ಕೆಲಸ ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ನಿಜವಾಗಿಯೂ ಆತಂಕ ಪಡಬೇಕಾಗಿರುವವರು, ಬದಲಾವಣೆಯನ್ನು ತಿರಸ್ಕರಿಸುವವರು. ಕಾರಣ, ಎಐನಿಂದ ಕೆಲ ಕೆಲಸಗಳು ಕಣ್ಮರೆಯಾದರೆ, ಇದರ ಎರಡುಪಟ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಆದರೆ ಅವುಗಳಿಗೆ ನಾವು ಅರ್ಹರಾಗಿರಬೇಕಷ್ಟೇ.

ಮಹಿಳೆಯರಿಗೇ ಹೆಚ್ಚು ತೊಂದರೆ: ಪ್ರಸ್ತುತ ಎಐಗೆ ಸೃಜನಶೀಲತೆ, ಭಾವುಕತೆ, ಅಧಿಕ ಕೌಶಲ್ಯಗಳು ಅಷ್ಟಾಗಿ ಬೇಕಿರದ ಕೆಲಸಗಳನ್ನಷ್ಟೇ ನೀಡಲಾಗಿದೆ. ಉದಾಹರಣೆಗೆ ಕಚೇರಿಗಳಲ್ಲಿ ಕರೆಗಳಿಗೆ ಉತ್ತರಿಸುವುದು, ಸಮಯ ನಿಗದಿ (ಅಪಾಯಿಂಟ್‌ಮೆಂಟ್‌), ದಾಖಲೆ ನಿರ್ವಹಣೆ, ಸ್ವಾಗತಕಾರ (ರಿಸೆಪ್ಷನಿಸ್ಟ್‌), ಸಹಾಯಕರ ಕೆಲಸಗಳನ್ನು ಮಾಡುತ್ತಿರುವವರಲ್ಲಿ ಬಹುತೇಕರು ಮಹಿಳೆಯರು ಎಂದು ಅಂತಾರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯ ವರದಿ ತಿಳಿಸಿದೆ. ಇದರಿಂದಾಗಿ, ಇಂತಹ ಕೆಲಸಗಳಲ್ಲಿರುವ ಸ್ತ್ರೀಯರು ನಿರುದ್ಯೋಗಿಗಳಾಗಿದ್ದಾರೆ, ಆಗುತ್ತಾರೆ.

ಆತಂಕ ಅನಗತ್ಯ, ಬದಲಾವಣೆ ಅತ್ಯಗತ್ಯ: ಕೆಲ ವರ್ಷಗಳ ಹಿಂದೆ ಕೆಲಸಗಾರರು ಕೈಗಳಿಂದ ಮಾಡುತ್ತಿದ್ದ ಕೆಲಸಗಳನ್ನೀಗ ಯಂತ್ರಗಳು ಮಾಡುತ್ತಿವೆ. ಆದರೆ ಅವುಗಳನ್ನು ನಿಯಂತ್ರಿಸಲು ಮಾನವರು ಅಗತ್ಯ. ಅಂತೆಯೇ, ಎಐ ಟೂಲ್‌ಗಳು ಮನುಷ್ಯರಂತೆ ಕೆಲ ಕೆಲಸಗಳನ್ನು ಮಾಡಲು ಶಕ್ತವಾಗಿದ್ದರೂ, ಅವುಗಳನ್ನು ಸಿದ್ಧಪಡಿಸುವುದು ಮತ್ತು ಬಳಸಿಕೊಳ್ಳುವುದು ಸೃಷ್ಟಿಕರ್ತರಾದ ನಮ್ಮ ಕೈಗಳಲ್ಲೇ ಇದೆ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ. ಬದಲಿಗೆ, ಆಧುನಿಕ ಅಗತ್ಯತೆಗಳಿಗೆ ತಕ್ಕಂತೆ ಅಪ್‌ಗ್ರೇಡ್‌ ಆಗಬೇಕಷ್ಟೇ.

ಕೆಲಸ ಕಡಿತ ತಪ್ಪಿಸಲು ಕೆಲ ಕ್ರಮಗಳು:
-ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಎಐ ತರಬೇತಿ ನೀಡಲು ಸರ್ಕಾರಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
-ಮಾನವರ ಬದಲಿಗೆ ಕೃತಕ ಬುದ್ಧಿಮತ್ತೆ ಬಳಸುವ ಬದಲು, ಉದ್ಯೋಗಿಗಳಿಗೆ ಪೂರಕವಾಗಿ ಕೆಲಸ ಮಾಡುವ ಎಐ ಸಾಧನಗಳನ್ನು ಬಳಕೆಗೆ ತರಬೇಕು.
-ಕಂಪನಿಗಳು ಒಮ್ಮೆಲೆ ಎಐಗೆ ಶಿಫ್ಟ್‌ ಆಗುವ ಬದಲು, ಕ್ರಮೇಣ ಅದನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಉದ್ಯೋಗಿಗಳಿಗೆ ಹೊಸ ಕಲೆಗಳನ್ನು ಕಲಿಯುವ ಅಥವಾ ಪರ್ಯಾಯ ಕೆಲಸಕ್ಕೆ ಸೇರಲು ಸಮಯ ಸಿಗುತ್ತದೆ.
-ಎಐ ಕಸಿಯಬಹುದಾದ ಕೆಲಸಗಳಲ್ಲಿರುವವರಿಗೆ ಅಗತ್ಯ ತರಬೇತಿ ನೀಡಿ ಬೇರೆ ಉದ್ಯೋಗ ಒದಗಿಸಬಹುದು.
-ನಿರುದ್ಯೋಗಿಗಳಿಗೂ ಆರ್ಥಿಕ ನೆರವು, ಬೆಂಬಲ ನೀಡುವಂತಹ ಯೋಜನೆಗಳನ್ನು ರೂಪಿಸಬೇಕು.

ಎಐ ಮಾಡಲಾಗದ ಕೆಲಸಗಳು: ಮನುಷ್ಯರು ಮತ್ತು ಯಂತ್ರಗಳನ್ನು ಪ್ರತ್ಯೇಕಿಸುವ ಕೆಲ ಅಂಶಗಳಲ್ಲಿ ಪ್ರಮುಖವಾದವು ಭಾವನಾತ್ಮಕತೆ, ನೈಜತೆ, ನೈತಿಕತೆ, ಸೃಜನಶೀಲತೆ, ಕಲ್ಪನಾಶಕ್ತಿ, ಅನುಭವ, ಅಂತಃಪ್ರಜ್ಞೆ, ಹೊಂದಿಕೊಳ್ಳುವಿಕೆ, ನಂಬಿಕೆ, ಕೌತುಕತೆ, ನಾಯಕತ್ವ ಇತ್ಯಾದಿಗಳು. ಹೃದಯ, ಮೆದುಳುಳ್ಳ ಮಾನವರ ಜಾಗವನ್ನು, ಚಿಪ್‌, ಸಾಫ್ಟ್‌ವೇರ್‌ ಬಳಸಿ ಕೆಲಸ ಮಾಡುವ ಎಐ ಎಲ್ಲಾ ಕ್ಷೇತ್ರಗಳಲ್ಲಿ ತುಂಬಲು ಸಾಧ್ಯವಿಲ್ಲ. ಆದ್ದರಿಂದ, ಕಲಾವಿದರು, ಬರಹಗಾರರು, ಆಪ್ತ ಸಮಾಲೋಚಕರು, ಭಾಷಣಕಾರರು, ಸಾಮಾಜಿಕ ಕಾರ್ಯಕರ್ತರು, ಶಿಶುಪಾಲಕರು, ರಕ್ಷಣಾ ಸಿಬ್ಬಂದಿ, ವಿಶ್ಲೇಷಕರು, ಶಿಕ್ಷಕರು, ಮಾರ್ಗದರ್ಶಕರು, ಸಂಶೋಧನಕಾರರ ಜಾಗವನ್ನು ಎಐ ಎಂದೂ ಕಬಳಿಸಲಾಗದು.

ಡೀಪ್‌ಮೈಂಡ್ ಸಿಇಒ ಸಲಹೆಗಳೇನು?
-ಮುಂದಿನ 5-10 ವರ್ಷಗಳಲ್ಲಿ ಎಐ ಕ್ರಾಂತಿ ಖಚಿತ. ಆಗ ಹಲವು ರೀತಿಯ ಕೆಲಸ ಕಾಣೆಯಾಗುವುದು ನಿಶ್ಚಿತ
-ಹಳೆ ಕೆಲಸ ನಶಿಸಿದಂತೆ ಇನ್ನೊಂದೆಡೆ ಹೊಸ, ಕುತೂಹಲಕಾರಿ, ಮೌಲ್ಯಯುತ ಉದ್ಯೋಗ ಸೃಷ್ಟಿಯಾಗುತ್ತವೆ
-ಇದರ ಲಾಭಕ್ಕೆ ನಾವು ಎಐನಲ್ಲಿ ಪರಿಣಿತರಾಗುವುದು ಅವಶ್ಯಕ. ಆದ್ದರಿಂದ ಎಐ ಟೂಲ್‌ ಬಳಕೆ ಕಲಿಯಬೇಕು
-ತಂತ್ರಜ್ಞಾನವೇ ಭವಿಷ್ಯವಾದರೂ, ಕೇವಲ ಅದರ ಜ್ಞಾನ ಸಾಲದು. ಜೊತೆಗೆ ಸದೃಢ ‘ಸ್ಟೆಂ’ ಜ್ಞಾನವೂ ಬೇಕು
-ಎಐ ಜಗತ್ತಿಗೆ ಕೋಡಿಂಗ್‌ ಕೀಲಿಕೈ. ಇದರ ಜೊತೆಗೆ ಸೃಜನಶೀಲತೆ, ಹೊಂದಿಕೊಳ್ಳುವಿಕೆ ಗುಣ ನಮ್ಮದಾಗಬೇಕು
-ಎಐ ನಕಲಿಸಲಾಗದ ವಿದ್ಯೆ ಕಲಿಯಿರಿ. ಅದರಿಂದ ಹೊಸ ಉದ್ಯೋಗ ಆಕಾಂಕ್ಷಿಗಳಿಗೆ ದೀರ್ಘಾವಧಿ ಲಾಭವಿದೆ.

Life style ಅಡುಗೆ ಮನೆಯಲ್ಲಿನ ಬಟ್ಟೆ ಜಿಡ್ಡಾಗಿದೆಯಾ? : ಜಸ್ಟ್ ಈ ರೀತಿ ಮಾಡಿ

TAGGED:beware; if you don't learn AIyou won't get a job anymore.Young generation
Share This Article
Facebook Twitter Copy Link Print
Previous Article Life style ಅಡುಗೆ ಮನೆಯಲ್ಲಿನ ಬಟ್ಟೆ ಜಿಡ್ಡಾಗಿದೆಯಾ? : ಜಸ್ಟ್ ಈ ರೀತಿ ಮಾಡಿ
Next Article Canara Bank New Rules: ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಗುಡ್‌ನ್ಯೂಸ್‌

Popular Posts

ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ!

2 Min Read

ನಗರಾಭಿವೃದ್ಧಿ ಖಾತೆಯೇ ಬೇಡ, ಬೇಕಾದವರಿಗೆ ಕೊಟ್ಕೊಳಿ – ಕೃಷ್ಣ ಬೈರೇಗೌಡ ಅಸಮಾಧಾನ!

1 Min Read

Warned to Indians ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಅಲರ್ಟ್, ತಕ್ಷಣ ದೇಶ ತೊರೆಯಲು ಸೂಚನೆ

1 Min Read

2 ನಿಮಿಷದ ವಿಡಿಯೋದಿಂದ ಬ್ಯಾಂಕ್ ಅಕೌಂಟ್ ಖಾಲಿ : ಇದು ಹೊಸ ಸ್ಕ್ಯಾಮ್

2 Min Read

You Might Also Like

ಕರ್ನಾಟಕಪ್ರಮುಖ

Rice Price Hike ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ : ಪೆಟ್ರೋಲ್, ಗ್ಯಾಸ್ ಬೆನ್ನಲ್ಲೇ ಅಕ್ಕಿ ದರವೂ ಭಾರಿ ಏರಿಕೆ!

1 Min Read
ದೇಶಪ್ರಮುಖ

ಗರ್ಭಿಣಿಗೆ ನೀಡಿದ್ದ ಅಂಗನವಾಡಿ ಪೌಷ್ಟಿಕ ಆಹಾರದಲ್ಲಿ ಸತ್ತ ಹಾವಿನ ಮರಿ ಪತ್ತೆ

1 Min Read
ಕರ್ನಾಟಕದೇಶಪ್ರಮುಖ

Gold Rate ವಾರದ ಆರಂಭದಲ್ಲಿ ಚಿನ್ನದ ಬೆಳ್ಳಿ ಬೆಲೆ ಕುಸಿತ

1 Min Read
ಪ್ರಮುಖವಿದೇಶ

ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪ : ಐವರು ಬಲಿ , 200 ಕ್ಕೂ ಹೆಚ್ಚು ಮಂದಿಗೆ ಗಾಯ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?