Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Canara Bank New Rules: ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಗುಡ್‌ನ್ಯೂಸ್‌
ಕರ್ನಾಟಕಪ್ರಮುಖ

Canara Bank New Rules: ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಗುಡ್‌ನ್ಯೂಸ್‌

Share
2 Min Read
SHARE

newsics.com

ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ ತನ್ನ ನಿಯಮದಲ್ಲಿ ಪ್ರಮುಖ ಬದಲಾವಣೆಯೊಂದನ್ನ ಮಾಡಿದೆ.

ಬ್ಯಾಂಕ್‌ಗಳಲ್ಲಿ ಉಳಿತಾಯ ಅಕೌಂಟ್‌ ಹೊಂದಿರುವ ಪ್ರತಿಯೊಬ್ಬರೂ, ಆಯಾ ಬ್ಯಾಂಕ್‌ಗಳು ನಿಗದಿಪಡಿಸಿರುವ ಕನಿಷ್ಠ ಮೊತ್ತದ ಹಣವನ್ನ ಅಕೌಂಟ್‌ನಲ್ಲಿ ಇಡಲೇಬೇಕು. ಇಲ್ಲದೆ ಇದ್ದರೆ ತಿಂಗಳ ಕೊನೆಯಲ್ಲಿ ದಂಡದ ಶುಲ್ಕ ಕಟ್‌ ಆಗುತ್ತದೆ. ಈ ನಿಯಮದಲ್ಲಿ ಕೆನರಾ ಬ್ಯಾಂಕ್‌ ಬದಲಾವಣೆ ತಂದಿದೆ.

ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನ ಕಾಯ್ದುಕೊಳ್ಳದೆ ಇದ್ದರೆ ವಿಧಿಸುತ್ತಿದ್ದ ದಂಡವನ್ನ ಮನ್ನಾ ಮಾಡಿದೆ. ಅಂದರೆ ನೀವು ಕೆನರಾ ಬ್ಯಾಂಕ್‌ನಲ್ಲಿ ಯಾವುದೇ ರೀತಿಯ ಉಳಿತಾಯ ಖಾತೆ ಹೊಂದಿದ್ದು, ಅದರಲ್ಲಿ ನಿಗದಿತ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಹಣ ಅಂದರೆ 100, 200 ರೂಪಾಯಿ ಹೊಂದಿದ್ದರೆ ಅಥವಾ ಶೂನ್ಯ ಮೊತ್ತವನ್ನೇ ಹೊಂದಿದ್ದರೂ ದಂಡ ಕಟ್ಟುವ ಅಗತ್ಯ ಇರೋದಿಲ್ಲ.ಅಂದಹಾಗೇ, ಕೆನರಾ ಬ್ಯಾಂಕ್‌ನಲ್ಲಿ ನೀವು ಯಾವುದೇ ಬಗೆಯ ಸೇವಿಂಗ್ಸ್‌ ಅಕೌಂಟ್‌, ಸ್ಯಾಲರಿ ಅಕೌಂಟ್‌ ಅಥವಾ NRI ಸೇವಿಂಗ್ಸ್‌ ಅಕೌಂಟ್ಸ್‌ ಹೊಂದಿದ್ದರೆ ನಿಮಗೆ ಈ ನಿಯಮ ಅನ್ವಯ ಆಗುತ್ತದೆ.

ಅನೇಕರಿಗೆ ತಿಂಗಳು ಪೂರ್ತಿ ನಿಗದಿತ ಕನಿಷ್ಠ ಮೊತ್ತವನ್ನ ಅಕೌಂಟ್‌ನಲ್ಲಿ ಇಡಲು ಆಗೋದಿಲ್ಲ. ಹಾಗಾದಾಗ ಬ್ಯಾಂಕ್‌ಗಳು ದಂಡದ ಹೆಸರಲ್ಲಿ ಇಂತಿಷ್ಟು ಹಣ ಕಟ್‌ ಮಾಡಿದಾಗ ನಿಜಕ್ಕೂ ಹೊರೆಯಾಗುತ್ತದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೆನರಾ ಬ್ಯಾಂಕ್‌ ʼನಮ್ಮ ಹೊಸ ನೀತಿ-ನಿಯಮದ ಪ್ರಕಾರ ಕೆನರಾ ಬ್ಯಾಂಕ್‌ನಲ್ಲಿ ಯಾರೆಲ್ಲ SB ಖಾತೆ ಹೊಂದಿದ್ದಾರೋ ಅವರೆಲ್ಲ ಇನ್ಮುಂದೆ ಕನಿಷ್ಠ ಮೊತ್ತದ ಹಣಕ್ಕೆ ಸಂಬಂಧಪಟ್ಟಂತೆ ದಂಡ ಕಟ್ಟುವ ಅವಶ್ಯಕತೆ ಇಲ್ಲ.

ಕೆನರಾ ಬ್ಯಾಂಕ್‌ Q4 2025 ಲಾಭ

ಮಾರ್ಚ್ 31, 2025ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಕೆನರಾ ಬ್ಯಾಂಕ್ ತನ್ನ ಸ್ವತಂತ್ರ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ (YoY) ಶೇ. 33.15 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2024 ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಲಾಭ ₹3,757.23 ಕೋಟಿಗಳಷ್ಟಿತ್ತು. ಮಾರ್ಚ್ 31, 2025ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಬಡ್ಡಿ ಆದಾಯ ₹31,002.04 ಕೋಟಿಗಳಾಗಿದ್ದು, ಇದು ₹28,807.35 ಕೋಟಿಗಳಿಗೆ ಹೋಲಿಸಿದರೆ ಶೇ. 7.62 ರಷ್ಟು ಹೆಚ್ಚಾಗಿದೆ. 1906 ರಲ್ಲಿ ಸ್ಥಾಪನೆಯಾದ ಕೆನರಾ ಬ್ಯಾಂಕ್ ದೇಶಾದ್ಯಂತ 9849 ಶಾಖೆಗಳನ್ನು ಹೊಂದಿದೆ, ಇದರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 3139, ಅರೆ ನಗರ ಪ್ರದೇಶಗಳಲ್ಲಿ 2900, ನಗರ ಪ್ರದೇಶಗಳಲ್ಲಿ 1944 ಮತ್ತು ಮೆಟ್ರೋ ನಗರಗಳಲ್ಲಿ 1866 ಶಾಖೆಗಳಿವೆ.

Young generation ಯುವಜನರೇ ಎಚ್ಚರ; ಎಐ ಕಲಿಯದಿದ್ದರೆ ಇನ್ನು ಮುಂದೆ ಕೆಲಸ ಸಿಗಲ್ಲ

TAGGED:Canara Bank New Rules: Good news for customers having accounts in Canara Bank
Share This Article
Facebook Twitter Copy Link Print
Previous Article Young generation ಯುವಜನರೇ ಎಚ್ಚರ; ಎಐ ಕಲಿಯದಿದ್ದರೆ ಇನ್ನು ಮುಂದೆ ಕೆಲಸ ಸಿಗಲ್ಲ
Next Article Kamal Haasan ಕರ್ನಾಟಕದಲ್ಲಿ ಥಗ್ ಲೈಫ್ ಗೆ ವಿರೋಧ; ತಮಿಳುನಾಡಿಗೆ ಮನವಿ ಮಾಡಿದ ಕಮಲ್ ಹಾಸನ್

Popular Posts

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

You Might Also Like

ಕರ್ನಾಟಕಪ್ರಮುಖ

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read
ಕರ್ನಾಟಕದೇಶಪ್ರಮುಖ

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read
ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?