newsics.com
ಬಣ್ಣಕ್ಕೆ ಸೋಲದ ಮನಸು ಇಲ್ಲ. ಕೆಲವರಿಗೆ ಕೆಲವು ಬಣ್ಣ ಇಷ್ಟವಾಗುವುದೇ ಇಲ್ಲ. ಮತ್ತೆ ಕೆಲವರಿಗೆ ಕೆಲವು ಬಣ್ಣಗಳು ಬಹಳ ಇಷ್ಟ. ಹಲವು ಬಣ್ಣಗಳು ನಮಗೆ ಖುಷಿ ಕೊಟ್ಟರೂ ‘ನಮ್ಮ ಮೊದಲ ಮತ್ತು ಕೊನೆಯ ಆಯ್ಕೆ’ ಎಂಬುದೊಂದು ಇದ್ದೇ ಇರುತ್ತದೆ. ಆದರೆ ಬದುಕಿನಲ್ಲಿ ಬಣ್ಣಗಳು ಎಷ್ಟೆಲ್ಲಾ ಮಹತ್ವ ಪಡೆದಿದೆ. ಅವು ಮನುಷ್ಯನ ಜೀವನದ ಪ್ರಮುಖ ಗುರುತುಗಳೂ ಹೌದು. ಪ್ರತಿಯೊಬ್ಬರಿಗೂ ಒಂದು ಬಣ್ಣ ಇಷ್ಟ. ಕೆಲವರಿಗೆ ತಿಳಿ ಬಣ್ಣ ಇಷ್ಟವಾದರೆ, ಕೆಲವರಿಗೆ ಗಡಸು ಬಣ್ಣ ಎಂದರೆ ಪ್ರಾಣ. ಅಂದಹಾಗೆ ನೀವು ಇಷ್ಟ ಪಡುವ ಬಣ್ಣ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ.
ರೆಡ್ ಕಲರ್ ಇಷ್ಟಪಡುವವರಲ್ಲಿ ಎರಡು ಬಗೆಯ ಜನರಿರುತ್ತಾರೆ. ಕೆಲವರಲ್ಲಿ ಪ್ರೀತಿ, ಉತ್ಸಾಹ, ಲೈಂಗಿಕ ಆಸಕ್ತಿ ಹೆಚ್ಚು ಇದ್ದರೆ, ಇನ್ನು ಕೆಲವರಲ್ಲಿ ಕೋಪ ಮತ್ತು ಆಕ್ರಮಣಶೀಲತೆ ಹೆಚ್ಚಿರುತ್ತದೆ. ಬಲವಾದ ವ್ಯಕ್ತಿತ್ವ ಮತ್ತು ಬಲವಾದ ಭಾವನೆ ಇವರದ್ದಾಗಿರುತ್ತದೆ. .
ಕಪ್ಪು ಬಣ್ಣವನ್ನು ಇಷ್ಟಪಡುವವರು ಗಂಭೀರ ಸ್ವರೂಪದವರಾಗಿರುತ್ತಾರೆ. ಇದು ನಮ್ಮ ಸಾಮರ್ಥ್ಯ, ಬುದ್ಧಿವಂತಿಕೆಯನ್ನು ಸಹ ಪ್ರತಿನಿಧಿಸುತ್ತದೆ. ಇವರು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಆದರೆ ಕಪ್ಪು ಬಣ್ಣವನ್ನು ಇಷ್ಟಪಡುವ ಕೆಲವರು ತುಂಬಾ ಸೂಕ್ಷ್ಮ ಮತ್ತು ಎಮೋಶನಲ್ ಕೂಡ ಆಗಿರುತ್ತಾರೆ. ನಿಗೂಢ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಅವರು ಒಳಗಡೆಯಿಂದ ಹೇಗೆ ಎನ್ನುವುದು ಹೊರಗಡೆಯಿಂದ ಗೊತ್ತಾಗುವುದಿಲ್ಲ. ತಮ್ಮ ವ್ಯಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಅಷ್ಟು ಸುಲಭವಾಗಿ ಹೇಳಿಕೊಳ್ಳುವುದಿಲ್ಲ.
ಗುಲಾಬಿ ಬಣ್ಣವನ್ನು ಇಷ್ಟಪಡುವವರು ಯಾವಾಗಲೂ ಆಕರ್ಷಕವಾಗಿರುತ್ತಾರೆ. ಅವರು ಭಾವನೆಗಳಿಂದ ಕೂಡ ಪ್ರಭಾವಿತರಾಗುತ್ತಾರೆ. ಅವರು ಯಾವಾಗಲೂ ಸ್ವತಂತ್ರ ಆಲೋಚನೆಗಳನ್ನು ಹೊಂದಿರುತ್ತಾರೆ. ಹಾಗೆಯೇ ಹಸಿರು ಬಣ್ಣವನ್ನು ಇಷ್ಟಪಡುವವರು ಸದಾ ಲವಲವಿಕೆಯಿಂದ ಇರುತ್ತಾರೆ. ಅವರಿಗೆ ಯಾವಾಗಲೂ ಸ್ವಾತಂತ್ರ್ಯ ಇರುತ್ತದೆ.
ಹಳದಿ ಬಣ್ಣವನ್ನು ಇಷ್ಟಪಡುವವರು ಯಾವಾಗಲೂ ಆಶಾವಾದಿಗಳಾಗಿರುತ್ತಾರೆ. ಲವಲವಿಕೆಯೂ ಇರುತ್ತದೆ. ಪ್ರತಿ ಕ್ಷಣವನ್ನು ಆನಂದಿಸಿ. ಕಾಂತಿಯುತ ಮೈಬಣ್ಣದಿಂದ ಇತರರನ್ನು ಆಕರ್ಷಿಸುತ್ತಾರೆ. ಕಪ್ಪು ಬಣ್ಣವನ್ನು ಇಷ್ಟಪಡುವವರು ಗುಪ್ತ್ ಗುಪ್ತಾಗಿದ್ದು, ಸ್ವತಂತ್ರವಾಗಿರುತ್ತಾರೆ. ಸಾಕಷ್ಟು ಖಾಸಗಿತನ ಇರುತ್ತದೆ. ಅವರು ಸೂಕ್ಷ್ಮವೂ ಆಗಿರುತ್ತಾರೆ.
ನೀಲಿ ಬಣ್ಣವನ್ನು ಇಷ್ಟಪಡುವ ಜನರು ಶಾಂತ ಮತ್ತು ಸಮತೋಲಿತವಾಗಿರುತ್ತಾರೆ. ಅವರು ಇತರರ ಅಗತ್ಯಗಳನ್ನು ಸಹ ನೋಡಿಕೊಳ್ಳುತ್ತಾರೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧ ಇರುತ್ತದೆ. ಬಿಳಿ ಬಣ್ಣವನ್ನು ಇಷ್ಟಪಡುವವರು ಯಾವಾಗಲೂ ಶಿಸ್ತುಬದ್ಧವಾಗಿರುತ್ತಾರೆ. ದಯಾಪರರಾಗಿದ್ದು, ಹೆಚ್ಚು ವಿಶ್ವಾಸಾರ್ಹವಾಗಿರುತ್ತಾರೆ. ವೃತ್ತಿ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತಾರೆ.