newsics.com
ಬೆಂಗಳೂರು: ಸದ್ಯ ಪೆನ್ಡ್ರೈವ್ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ‘ಪೆನ್ಡ್ರೈವ್’ ಶೀರ್ಷಿಕೆ ಅಡಿಯಲ್ಲೇ ಇದೀಗ ಸಿನಿಮಾ ಮೂಡಿ ಬರುತ್ತಿದೆ. ‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಸೆಬಾಸ್ಟಿನ್ ಡೇವಿಡ್
ಪೆನ್ಡ್ರೈವ್ ಶೀರ್ಷಿಕೆ ಅಡಿಯಲ್ಲಿ ಸಿನಿಮಾ ಒಂದು ಬರುತ್ತಿದೆ. ಆದರೆ, ಈ ಚಿತ್ರಕ್ಕೂ ಪ್ರಜ್ವಲ್ ರೇವಣ್ಣ ಅವರ ಕಥೆಗೂ ಯಾವುದೇ ಲಿಂಕ್ ಇಲ್ಲ ಎಂಬುದನ್ನು ಹೇಳಿದ್ದಾರೆ.
ಪೆನ್ಡ್ರೈವ್’ ಚಿತ್ರವನ್ನು ಲಯನ್ ಆರ್. ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ
ರಾಧಿಕಾ, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಭಾಗ್ಯ, ಗೀತಪ್ರಿಯಾ, ಗೀತಾ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಬಿಗ್ ಬಾಸ್ ಬಳಿಕ ತನಿಷಾ ಕುಪ್ಪಂಡ ತಮ್ಮದೇ ಆದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಈ ಕಾರಣದಿಂದಲೇ ಅವರಿಗೆ ಈ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಸಿಕ್ಕಿದೆ ಎನ್ನಲಾಗಿದೆ.
‘ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಮಾಡಬೇಕು ಎನ್ನುವ ಆಲೋಚನೆ ಮೊದಲೇ ಇತ್ತು. ಆದರೆ, ಟೈಟಲ್ ರಿಜಿಸ್ಟರ್ ಮಾಡಿರಲಿಲ್ಲ. ಈಗ ಪೆನ್ಡ್ರೈವ್ ವಿಚಾರ ಚರ್ಚೆಯಲ್ಲಿರುವುದರಿಂದ ಸ್ವಲ್ಪ ಬೇಗ ಸಿನಿಮಾ ಮಾಡಬೇಕು ಎನಿಸಿತು ಅಷ್ಟೇ’ ಎಂದು ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ತಿಳಿಸಿದ್ದಾರೆ.
ದರ್ಶನ್, ಪವಿತ್ರಾ ಗೌಡ ಟೀಮ್ ನ್ಯಾಯಾಂಗ ಬಂಧನ ಜುಲೈ 18ರವರೆಗೆ ವಿಸ್ತರಣೆ