Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health | Be careful, it can be dangerous ಮುಟ್ಟಿನ ವೇಳೆ ನೀವು ತಲೆಸ್ನಾನ ಮಾಡ್ತೀರಾ? ಅಪಾಯವಾದೀತು ಎಚ್ಚರ
ಆರೋಗ್ಯಪ್ರಮುಖ

Health | Be careful, it can be dangerous ಮುಟ್ಟಿನ ವೇಳೆ ನೀವು ತಲೆಸ್ನಾನ ಮಾಡ್ತೀರಾ? ಅಪಾಯವಾದೀತು ಎಚ್ಚರ

Share
2 Min Read
SHARE

newsics.com

ತಿಂಗಳ ಮುಟ್ಟಿನ ಸಮಯದಲ್ಲಿ ಹೆಚ್ಚಿನವರು ಆರಂಭದ ದಿನ ಮತ್ತು ನಾಲ್ಕನೆಯ ದಿನ ತಲೆಸ್ನಾನ ಮಾಡುತ್ತಾರೆ.

ಇದು ಸಂಪ್ರದಾಯವೆನ್ನುವ ಕಾರಣಕ್ಕೆ ಕೆಲವರು ಮಾಡುತ್ತಿದ್ದರೂ, ಆ ಸಂದರ್ಭದಲ್ಲಿ ಆಗುವ ಕಿರಿಕಿರಿ ಮತ್ತು ದೇಹದಲ್ಲಿ ಏನೋ ಹಿಂಸೆ ಎನಿಸುವುದರಿಂದ ತಲೆಸ್ನಾನ ಮಾಡಿದರೆ ಉಲ್ಲಾಸ ಕಾಣಬಹುದು ಎನ್ನುವ ಕಾರಣಕ್ಕೂ ಹಲವರು ಮಾಡುವುದು ಇದೆ.

ಆದರೆ ಮಾಸಿಕ ಋತುಸ್ರಾವದ ಮೊದಲು ಮೂರು ದಿನ ತಲೆ ಸ್ನಾನ ಮಾಡಬಾರದು ಎನ್ನುವ ಮಾತು ಕೇಳಿ ಬರುತ್ತಿದೆ.

ಇದಕ್ಕೆ ಸೂಕ್ತ ವೈಜ್ಞಾನಿಕ ಆಧಾರಗಳು ಇಲ್ಲದಿದ್ದರೂ ಮೊದಲ ಮೂರು ದಿನ ತಲೆಸ್ನಾನ ಮಾಡಿದರೆ ಮಹಿಳೆಯರ ದೇಹದಲ್ಲಿ ಕೆಲ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ.

ಮೊದಲ ಮೂರು ದಿನ ಮುಟ್ಟಿನ ಸಮಯದಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಮೊದಲೇ ದೇಹದಲ್ಲಿ ಏರುಪೇರಾಗುತ್ತಿರುತ್ತದೆ. ಇಂಥ ಸಮಯದಲ್ಲಿ ತಲೆಸ್ನಾನ ಅದರಲ್ಲಿಯೂ ತಣ್ಣೀರಿನ ಸ್ನಾನ ಮಾಡಿದರೆ ದೇಹದ ಉಷ್ಣಾಂಶದಲ್ಲಿ ಏರುಪೇರಾಗುತ್ತದೆ. ಇದು ಅನಾರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು ಎನ್ನಲಾಗಿದೆ.

ಇದರಿಂದ ತಲೆನೋವು ಅಥವಾ ಸ್ನಾಯು ಸೆಳೆತ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದು ಕೇಳಿಬರುತ್ತಿರುವ ಮಾತು. ಬಿಸಿ ನೀರಿನಿಂದ ಸ್ನಾನ ಮಾಡಿದರೆ ಹಿತ ಎನ್ನಿಸುವುದು ನಿಜವಾದರೂ, ಕೂದಲನ್ನು ಹೆಚ್ಚು ಸಮಯದವರೆಗೆ ಹಸಿಯಾಗಿಯೇ ಬಿಟ್ಟುಕೊಳ್ಳುವ ಕಾರಣ ಮುಟ್ಟಿನ ಸಮಯದಲ್ಲಿ ಇದು ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎನ್ನಲಾಗಿದೆ.

ಈ ಸಮಯದಲ್ಲಿ ದೇಹದಲ್ಲಿ ವಿಶೇಷ ಶಕ್ತಿ ಇರುವ ಕಾರಣದಿಂದ ಆಯುರ್ವೇದದ ಪ್ರಕಾರ ಮೊದಲ ಮೂರು ದಿನ ಸ್ನಾನ ಏನನ್ನೂ ಮಾಡದೇ ಸಂಪೂರ್ಣವಾಗಿ ರೆಸ್ಟ್‌ ತೆಗೆದುಕೊಳ್ಳಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಮುಟ್ಟಿನ ದಿನಗಳಲ್ಲಿ ಕೂದಲಿನ ಬುಡ ತುಂಬಾ ಸೂಕ್ಷ್ಮವಾಗಿರುತ್ತವೆ. ಆ ಸಮಯದಲ್ಲಿ ತಲೆಸ್ನಾನ ಮಾಡಿದರೆ ಕೂದಲು ಉದುರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈ ಸಮಯದಲ್ಲಿ ದೇಹ ಕೂಡ ಸೂಕ್ಷ್ಮವಾಗಿರುವ ಕಾರಣ, ತಲೆಸ್ನಾನದ ನೆಪದಲ್ಲಿ ಬಾತ್‌ರೂಮ್‌ನಲ್ಲಿ ಬಹಳ ಹೊತ್ತು ನೀರಿನ ಬಳಿ ನಿಂತರೆ ಶೀತ, ನೆಗಡಿ, ತಲೆನೋವಿನ ಸಮಸ್ಯೆ ಬರುವ ಸಾಧ್ಯತೆ ಇದೆ.

ಇನ್ನು ಕೆಲವರು ಶಾಸ್ತ್ರದಲ್ಲಿಯೇ ಹೀಗೆ ಹೇಳಲಾಗಿದೆ ಎನ್ನುವುದೂ ಉಂಟು. ಹಿಂದೂ ಶಾಸ್ತ್ರದ ಪ್ರಕಾರ, ಮುಟ್ಟಾದ ಮೂರು ದಿನಗಳವರೆಗೆ ಮಹಿಳೆಯರು ತಲೆ ಸ್ನಾನ ಮಾಡಬಾರದು. ಹೀಗಾದಲ್ಲಿ ಮಾತ್ರ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ. ಒಂದು ವೇಳೆ ಅವರು ಈ ನಿಯಮವನ್ನು ಅನುಸರಿಸದಿದ್ದರೆ ಕುಟುಂಬದ ಸದಸ್ಯರೆಲ್ಲರೂ ಅರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಮುಟ್ಟಿನ ಸಮಯದಲ್ಲಿ, ಪೂಜೆ ಇತ್ಯಾದಿ ಚಟುವಟಿಕೆಗಳಿಗೆ ಮಹಿಳೆಯರು ಪಾಲ್ಗೊಳ್ಳಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅದನ್ನು ಅಪವಿತ್ರವೆನ್ನುವ ನಂಬಿಕೆಯಿದೆ. ಮುಟ್ಟಿನ ಅಂತ್ಯದ ನಂತರ ಅಥವಾ ಕನಿಷ್ಠ ಮೂರು ದಿನಗಳ ನಂತರ ಮಾತ್ರ ಕೂದಲನ್ನು ತೊಳೆಯುವುದು ಸೂಕ್ತವಾಗಿದೆ‌. ಇದರಿಂದ ದೇಹವು ಸಂಪೂರ್ಣವಾಗಿ ಶುದ್ಧವಾಗಿರುತ್ತದೆ.

Viral ಹೃದಯ ವಿದ್ರಾವಕ ಘಟನೆ: ಕಾರು ಡಿಕ್ಕಿಯಾಗಿ ಹಾರಿಬಿದ್ದ ಪ್ರಜ್ಞಾಹೀನ ತಾಯಿಯ ಎಬ್ಬಿಸಲು ಯತ್ನಿಸಿದ ಮಗ – ವೈರಲ್ ವಿಡಿಯೋ ನೋಡಿ

TAGGED:#shower #during #menstruation #Becareful #dangerous #ತಿಂಗಳಮುಟ್ಟು #ತಲೆಸ್ನಾನ #newsics #news #health
Share This Article
Facebook Twitter Copy Link Print
Previous Article IPL 2025 RCB wins thrilling match ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಆರ್‌ಸಿಬಿ, ಸೋತು ಮುಖಭಂಗ ಅನುಭವಿಸಿದ ಚೆನ್ನೈ
Next Article ಪಹಲ್ಗಾಮ್‌ ಉಗ್ರ ದಾಳಿ, ಸುಹಾಸ್‌ ಹತ್ಯೆ ಖಂಡಿಸಿ ನಾಳೆ ಚಿಕ್ಕಮಗಳೂರು ಜಿಲ್ಲಾ ಬಂದ್‌ ಗೆ ಕರೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?