newsics.com
ಪಹಲ್ಗಾಮ್ನಲ್ಲಿ ದಾಳಿಯಿಂದ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿ ಹಿಂದೆ ಇರುವವರ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ. ಸದ್ಯ ಈ ರೇಖಾ ಚಿತ್ರ ನೋಡಿದ ಬಳಿಕ ನಟಿ ಏಕ್ತಾ ತಿವಾರಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಈ ಕುರಿತು ಮತಾನಾಡಿದ ಅವರು, ಏಪ್ರಿಲ್ 20ರಂದು ನಾವು ಪಹಲ್ಗಾಮ್ಗೆ ತೆರಳಿದ್ದೆವು. ಅಧಿಕಾರಿಗಳು ಬಿಡುಗಡೆ ಮಾಡಿದ ರೇಖಾ ಚಿತ್ರ ನೋಡಿದ ಬಳಿಕ ನಾನು ಕೂಡ ಸಾವಿನ ಹತ್ತಿರ ಹೋಗಿ ಬಂದಿದ್ದೆ ಎಂಬುದು ಗೊತ್ತಾಯಿತು’ ಎಂದು ಹೇಳಿದ್ದಾರೆ. ಅಲ್ಲದೆ, ಆ ದಿನ ಏನಾಗಿತ್ತು ಎಂಬುದನ್ನು ವಿವರಿಸಿದ್ದಾರೆ.
ನಾನು ಕಾಶ್ಮೀರದಲ್ಲಿ ಇದ್ದಾಗ ಕೆಲವರು ಬಂದು ಅಜ್ಮೇರ್ (ಮುಸ್ಲಿಮರ ಪವಿತ್ರ ಸ್ಥಳ) ಬಗ್ಗೆ ಕೇಳಿದರು. ನಾನು ಅಲ್ಲಿಗೆ ಹೋಗಿಲ್ಲ ಎಂದೆ. ಆ ಬಳಿಕ ಅವರು ಅಮರನಾಥ ಯಾತ್ರೆ ಬಗ್ಗೆ ಕೇಳಿದರು. ಎಷ್ಟು ಜನ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದರು. ನಮ್ಮ ಧರ್ಮದ ಬಗ್ಗೆ ಕೇಳಿದರು. ನನಗೆ ಭಯ ಆಯಿತು. ನಾನು ನಿಜ ಹೇಳಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆಯೂ ಕೇಳಿದರು. ವಿವಾಹ ಆಗಿ ಎಷ್ಟು ಸಮಯ ಆಯಿತು ಎಂದು ಪ್ರಶ್ನೆ ಮಾಡಿದರು’ ಎಂದು ಏಕ್ತಾ ತಿವಾರಿ ವಿವರಿಸಿದ್ದಾರೆ.
ನಾನು ರುದ್ರಾಕ್ಷಿ ಮಾಲೆ ಹಾಕಿಕೊಂಡಿದ್ದೇನೆ, ಕುರಾನ್ ಓದಲ್ಲ ಅನ್ನೋದು ಅವರಿಗೆ ಸಮಸ್ಯೆ ಆಗಿತ್ತು. ಹೀಗಾಗಿ, ನಮ್ಮ ಜೊತೆ ಅವರು ತಪ್ಪಾಗಿ ನಡೆದುಕೊಂಡರು. ಅವರ ಬಳಿ ಶೂ ಒಳಗೆ ಕೀ ಪ್ಯಾಡ್’ ಮೊಬೈಲ್ ಕೂಡ ಇತ್ತು ಎಂದು ಅವರು ಹೇಳಿದ್ದಾರೆ.