newsics.com
ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ನೋಡಲು ಅವರ ತಾಯಿ ಭವಾನಿ ರೇವಣ್ಣ ಅವರನ್ನು ಆಗಮಿಸಿದ್ದಾರೆ.
ಜೈಲಿನಲ್ಲಿರುವ ಮಗ ಭೇಟಿಗೆ ಕಾರ್ ಡ್ರೈವರ್ ಮತ್ತು ಪಿಎ ಜೊತೆಗೆ ಆಗಮಿಸಿದ್ದಾರೆ. ಭವಾನಿ ರೇವಣ್ಣ ಅವರನ್ನು ನೋಡಿದರೆ ಮಕ್ಕಳ ಪ್ರಕರಣಗಳಿಂದ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿರುವಂತೆ ಕಂಡುಬಂದಿದೆ.
ಕಾಲಿಗೆ ಪೆಟ್ಟಾಗಿ ಕುಂಟುತ್ತಲೇ ಮಗನನ್ನ ನೋಡಲು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಬಂದಿದ್ದಾರೆ. ಕಾಲಿಗೆ ಪೆಟ್ಟಾಗಿದ್ದರಿಂದ ಓಡಾಡಲು ಆಗದೆ ಇದ್ದರೂ ಸಹ ಸ್ಟಿಕ್ ಆಸರೆಯೊಂದಿಗೆ ಮಗನ ನೋಡಲು ಬಂದಿದ್ದಾರೆ.