newsics.com
ಬಿಹಾರ: ಪ್ರಣಯ ಹಕ್ಕಿಗಳಿಗೆ ಸರಸ ಸಲ್ಲಾಪ ಹೊಸದಾಗಿರಲಿಲ್ಲ. ಆದರೆ ಸಮ್ಮಿಲನ ಬಂದವನ ಮರ್ಮಾಂಗ ಕತ್ತರಿಸಿದ ಗೆಳತಿ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿದ್ದಾಳೆ. ಈ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.
ಕಾರಣ ಕೇಳಿದ ಪೊಲೀಸರು ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸಿದ್ದಾರೆ. ಬಾಯ್‌ಫ್ರೆಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಗೆಳತಿ ಜೈಲು ಪಾಲಾಗಿದ್ದಾಳೆ.
ಮಧೌರದ 12ನೇ ವಾರ್ಡ್‌ನ ಕೌನ್ಸಿಲರ್ ವೇದಪ್ರಕಾಶ್‌ಗೆ ಅದೇ ವಲಯದ ನರ್ಸಿಂಗ್ ಹೋಮ್ ಮಾಲಕಿ ಜೊತೆಗೆ ಪ್ರೀತಿ ಶುರುವಾಗಿದೆ. ಆಕೆಯ ಹಿಂದೆ ಬಿದ್ದು ಪ್ರೀತಿ ನಿವೇದನೆ ಮಾಡಿದ್ದಾನೆ. ಆಕೆಯೂ ಒಪ್ಪಿಕೊಂಡಿದ್ದಾಳೆ. ಬಳಿಕ ಪ್ರೀತಿ ಗಾಢವಾಗಿದೆ. ಆತ್ಮೀಯರಾಗಿದ್ದಾರೆ. ಇದರ ನಡುವೆ ದೈಹಿಕ ಸಂಪರ್ಕವೂ ಬೆಳೆದಿದೆ. ಮದುವೆ ಗೆಳತಿಯ ಒತ್ತಾಯ ಹೆಚ್ಚಾಗಿದೆ. ಹಲವು ಬಾರಿ ಒತ್ತಾಯಿಸಿದ ಕಾರಣ ಮದುವೆಗೆ ಒಪ್ಪಿಕೊಂಡಿದ್ದಾನೆ.
ಇತ್ತ ತಯಾರಿಗಳು ಆರಂಭಗೊಂಡಿದೆ. ಮದುವೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಮಂಟಪ ಬುಕ್ ಮಾಡಲಾಗಿದೆ. ಮನೆಯಲ್ಲಿ ಸಂಭ್ರಮ ಶುರುವಾಗಿದೆ. ಮದುವೆ ದಿನಾಂಕ ಹತ್ತಿರಬರುತ್ತಿದ್ದಂತೆ ನಾನು ಮದುವೆಯಾಗಲ್ಲ ಎಂದು ಹೇಳತೊಡಗಿದೆ. ನಾವು ಹೀಗೆ ಇರೋಣ, ಮದುವೆ ಯಾಕೆ ಎಂದು ಪ್ರಶ್ನಿಸಲು ಆರಂಭಿಸಿದ್ದ.ತಾಳ್ಮೆಯಿಂದಲೇ ಇದ್ದ ಗೆಳತಿ, ವೇದಪ್ರಕಾಶ್ ಮರ್ಮಾಂಗ ಕತ್ತರಿಸಿದ್ದಾಳೆ. ಬಳಿಕ ಟಾಯ್ಲಟ್ ಹಾಕಿ ಫ್ಲಶ್ ಮಾಡಿದ್ದಾಳೆ. ಇತ್ತ ಚೀರಾಡುತ್ತಾ ಪೊಲೀಸರಿಗೆ ಫೋನ್ ಮಾಡಿ ವೇದಪ್ರಕಾಶ್ ಅಸ್ವಸ್ಥಗೊಂಡು ಕುಸಿದು ಬಿದಿದ್ದಾನೆ.