newsics.com
ಬಳ್ಳಾರಿ: ದಲ್ಲಾಳಿಗಳ ಕಾಟಕ್ಕೆ ಬೇಸತ್ತ ನಾಲ್ವರು ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಡೆದಿದೆ.
ರುದ್ರೇಶ್, ಶೇಖರಪ್ಪ, ಹನುಮಂತ, ಕೋಣೇರಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತರು. ಸದ್ಯ ಈ ನಾಲ್ವರು ರೈತರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಗ್ರಿಗ್ರೇಡ್ ಕಂಪನಿಯ ದಲ್ಲಾಳಿಗಳಾದ ವಿರೂಪಾಕ್ಷಪ್ಪ, ಸುದರ್ಶನ, ರಾಯರೆಡ್ಡಿ ಮೂಲಕ ಕಳೆದ ವರ್ಷ ರೈತರು ಮೆಣಸಿನಕಾಯಿ ಮಾರಾಟ ಮಾಡಿದ್ದರು. ಆದರೆ 1 ಕೋಟಿ 93 ಲಕ್ಷ ರೂಪಾಯಿ ಹಣವನ್ನು ದಲ್ಲಾಳಿಗಳು ಬಾಕಿ ಉಳಿಸಿಕೊಂಡಿದ್ದಾರೆ. ಹಣ ನೀಡದೆ ದಲ್ಲಾಳಿಗಳು ಸತಾಯಿಸುತ್ತಿದ್ದು ಇದರಿಂದ ಮನನೊಂದ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಕಳೆದ 18 ತಿಂಗಳಿಂದ ಹಣ ನೀಡದೆ ಸತಾಯಿಸುತ್ತಿದ್ದಾರೆ. ಹೀಗಾಗಿ ದಲ್ಲಾಳಿಗಳ ಕಳ್ಳಾಟಕ್ಕೆ ಮನನೊಂದು ವಿಷ ಸೇವಿಸಿದ್ದರು. ಬಾಕಿ ಹಣ ನೀಡದಿದ್ದರೆ ಸಾಮೂಹಿಕವಾಗಿ ವಿಷ ಸೇವಿಸುವುದಾಗಿ ಇದೀಗ ರೈತರು ಎಚ್ಚರಿಕೆ ನೀಡಿದ್ದಾರೆ.
ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದ ಹಿಂದೂ ಧರ್ಮದರ್ಶಿ ಪಂಡಿತ್: ಕಾರಣವೇನು ಗೊತ್ತಾ?