newsics.com
ಬೇಸಿಗೆ ಕಾಲ ಪ್ರಾರಂಭವಾಗಿದೆ.ಚರ್ಮ ಮತ್ತು ಆರೋಗ್ಯದ ಕಾಳಜಿ ವಹಿಸುವುದು ಬಹಳ ಮುಖ್ಯ. ಸೌಂದರ್ಯದ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ಹೆಚ್ಚು ಜಾಗರೂಕರಾಗುತ್ತಾರೆ.ತ್ವಚೆ ಯಾವಾಗ್ಲೂ ಹೊಳೆಯುವಂತೆ ಮಾಡುವುದು ತುಂಬಾ ಈಝಿ. ಇದಕ್ಕೆ ಮನೆಯಲ್ಲಿ ಸ್ಪಲ್ಪ ಐಸ್ ಕ್ಯೂಬ್ ಗಳಿದ್ದರೆ ಅಷ್ಟೇ ಸಾಕು
ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ.
ಸೂಕ್ಷ್ಮ ಸಂವೇದಿ ತ್ವಚೆ ಎಂದರೆ, ಮುಖದ ಚರ್ಮದಲ್ಲಿ ಸಾಮಾನ್ಯಕ್ಕಿಂತಲೂ ಕೊಂಚ ಹೆಚ್ಚೇ ಸಂಖ್ಯೆಯ ನರಾಗ್ರಗಳು ಅಥವಾ ನರಗಳ ತುದಿಗಳಿರುತ್ತವೆ ಹಾಗೂ ಈ ವ್ಯಕ್ತಿಗಳಿಗೆ ಭಾವನಾತ್ಮಕ ಪರಿಣಾಮಗಳು ತಕ್ಷಣವೇ ಮುಖದಲ್ಲಿ ಗೋಚರಿಸುತ್ತದೆ
ಐಸ್, ಕೂಲಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ. ಹಾಗಾಗಿ ನಾಲ್ಕರಿಂದ ಐದು ಐಸ್ ಕ್ಯೂಬನ್ನು ಮೃದುವಾದ ಕಾಟನ್ ಬಟ್ಟೆಯಲ್ಲಿಟ್ಟು ಅಥವಾ ಹ್ಯಾಂಡ್ ಕರ್ಚಿಫ್ ಬಳಸಿ ಮುಖದ ಮೇಲಿಡಿ. ವೃತ್ತಾಕಾರದಲ್ಲಿ ಎರಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು.
ಹಣೆ, ಕೆನ್ನೆ, ಮೂಗು, ಗಲ್ಲ ಮತ್ತು ತುಟಿಯ ಸುತ್ತ ಪುನರಾವರ್ತಿಸಿ. ಮಂಜುಗಡ್ಡೆ ಚರ್ಮದ ಒಳಭಾಗದ ರಕ್ತ ಹರಿಯುವಿಕೆಗೆ ನೆರವು ನೀಡುತ್ತದೆ. ಐಸ್ ಇಟ್ಟ ಭಾಗ ಶೀತ ಚಿಕಿತ್ಸೆಗೆ ಸ್ಪಂದಿಸುತ್ತದೆ ಹಾಗೂ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ.
ಬಿಸಿ ಬಿಸಿಯಾದ ನೀರಿಗಿಂತ ತಣ್ಣೀರಿನ ಸ್ನಾನವು ದೇಹ ಮತ್ತು ಚರ್ಮ ಎರಡಕ್ಕೂ ಉತ್ತಮ ಎಂದು ಹೇಳುತ್ತದೆ. ಬಿಸಿ ನೀರು ಚರ್ಮದಲ್ಲಿರುವ ನೈಸರ್ಗಿಕ ತೈಲವನ್ನು ತೆಗೆದು ಹಾಕಬಹುದು. ಅಲ್ಲದೆ, ಚರ್ಮವನ್ನು ಮತ್ತಷ್ಟು ಒಣಗುವಂತೆ ಮಾಡುತ್ತದೆ.
ಮೊಡವೆ ಗಳ ಮೇಲೆ ಐಸ್‌ನ್ನು ಬಳಸುವುದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಈ ಮೂಲಕ ಮುಖದ ಮೇಲಿರುವ ರಂಧ್ರಗಳು ಕಡಿಮೆಯಾಗುತ್ತವೆ. ಮುಖದಲ್ಲಿ ಅತಿಯಾದ ತೈಲ ಉತ್ಪಾದನೆಯಾಗುವ ಸಮಸ್ಯೆಯೂ ನಿವಾರಣೆಗೊಳ್ಳುತ್ತದೆ.
ನಿಯಮಿತವಾಗಿ ನಿಮ್ಮ ಮುಖದ ಮೇಲೆ ಐಸ್ ಅನ್ನು ಅನ್ವಯಿಸುವುದರಿಂದ ಹಿಗ್ಗಿದ ರಕ್ತನಾಳಗಳನ್ನು ಕುಗ್ಗಿಸುವ ಮೂಲಕ ಊತವನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಕಣ್ಣುಗಳ ಕೆಳಗಿರುವ ಊತವನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.