newsics.com/ನ್ಯೂಸಿಕ್ಸ್
ಇತ್ತೀಚಿನ ದಿನಗಳಲ್ಲಿ ಕೇವಲ ಮದುಮಕ್ಕಳು ಮಾತ್ರವಲ್ಲ, ಪಾರ್ಟಿ, ಹಬ್ಬ-ಹರಿದಿನಗಳು ಮತ್ತು ಇಂಡೋ-ವೆಸ್ಟರ್ನ್ ಲುಕ್‌ಗಳಿಗೂ ಮಾಡರ್ನ್ ಸಿಲ್ವರ್ ಕಮರ್‌ಬಂದ್ ಡಿಸೈನ್‌ಗಳು ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಇವು ಸೊಂಟದ ಅಂದವನ್ನು ಹೆಚ್ಚಿಸುವುದಲ್ಲದೆ, ಸಿಂಪಲ್ ಆದ ಉಡುಗೆಗೂ ಒಂದು ರಾಯಲ್ ಲುಕ್ ಕೊಡುತ್ತವೆ. ನೀವೂ ಕೂಡ ಸ್ಟೈಲಿಶ್ ಮತ್ತು ಟ್ರೆಂಡಿ ಡಿಸೈನ್‌ಗಳನ್ನು ಹುಡುಕುತ್ತಿದ್ದರೆ, ಈ 8 ಸಿಲ್ವರ್ ಕಮರ್‌ಬಂದ್ ಡಿಸೈನ್‌ಗಳನ್ನು ಟ್ರೈ ಮಾಡಬಹುದು.
https://www.instagram.com/reel/DYrMG5SRxIn/?igsh=dWRpYmFkaXh6Yndo
ನಿಮಗೆ ಹಗುರವಾದ ಮತ್ತು ಕ್ಲಾಸಿ ಲುಕ್ ಇಷ್ಟವಾದರೆ, ಮಿನಿಮಲ್ ಸಿಲ್ವರ್ ಚೈನ್ ಕಮರ್‌ಬಂದ್ ಸೂಪರ್ ಆಗಿ ಕಾಣುತ್ತೆ. ತೆಳುವಾದ ಚೈನ್ ಮತ್ತು ಸಣ್ಣ ಚಾರ್ಮ್‌ಗಳನ್ನು ಹೊಂದಿರುವ ಈ ಡಿಸೈನ್ ಸೀರೆ, ಕ್ರಾಪ್ ಟಾಪ್ ಸ್ಕರ್ಟ್ ಮತ್ತು ಇಂಡೋ-ವೆಸ್ಟರ್ನ್ ಡ್ರೆಸ್‌ಗಳ ಜೊತೆ ತುಂಬಾ ಸುಂದರವಾಗಿ ಕಾಣುತ್ತದೆ. ತೆಳ್ಳಗಿನ ಸೊಂಟವನ್ನು ಹೈಲೈಟ್ ಮಾಡಲು ಇದು ಪರ್ಫೆಕ್ಟ್ ಆಯ್ಕೆ.
ನೀವು ಹಬ್ಬ ಅಥವಾ ಮದುವೆ ಸಮಾರಂಭಗಳಿಗೆ ವಿಶೇಷ ಲುಕ್ ಬಯಸಿದರೆ, ಗೆಜ್ಜೆ ವರ್ಕ್ ಇರುವ ಕಮರ್‌ಬಂದ್ ಅದ್ಭುತವಾಗಿ ಕಾಣುತ್ತದೆ. ಇದರಲ್ಲಿರುವ ಸಣ್ಣ ಸಣ್ಣ ಗೆಜ್ಜೆಗಳು ನಡೆಯುವಾಗ ಸುಂದರವಾದ ಎಥ್ನಿಕ್ ವೈಬ್ ನೀಡುತ್ತವೆ. ಶರಾರಾ, ಲೆಹೆಂಗಾ ಮತ್ತು ರೇಷ್ಮೆ ಸೀರೆಗಳ ಜೊತೆ ಈ ಡಿಸೈನ್ ರಾಯಲ್ ಟಚ್ ಕೊಡುತ್ತದೆ.
ನೀವು ಬೋಹೊ ಅಥವಾ ಫ್ಯೂಷನ್ ಫ್ಯಾಷನ್ ಇಷ್ಟಪಡುವವರಾಗಿದ್ದರೆ, ಆಕ್ಸಿಡೈಸ್ಡ್ ಸಿಲ್ವರ್ ಕಮರ್‌ಬಂದ್ ಉತ್ತಮ ಆಯ್ಕೆ. ಇದರಲ್ಲಿ ಟ್ರೈಬಲ್ ಡಿಸೈನ್ ಮತ್ತು ಹೆವಿ ಪ್ಯಾಟರ್ನ್ ವರ್ಕ್ ಇರುವುದರಿಂದ, ಡ್ರೆಸ್‌ಗೂ ಒಂದು ಸ್ಟೇಟ್‌ಮೆಂಟ್ ಲುಕ್ ನೀಡುತ್ತದೆ.
ನೀವು ಬೋಹೊ ಅಥವಾ ಫ್ಯೂಷನ್ ಫ್ಯಾಷನ್ ಇಷ್ಟಪಡುವವರಾಗಿದ್ದರೆ, ಆಕ್ಸಿಡೈಸ್ಡ್ ಸಿಲ್ವರ್ ಕಮರ್‌ಬಂದ್ ಉತ್ತಮ ಆಯ್ಕೆ. ಇದರಲ್ಲಿ ಟ್ರೈಬಲ್ ಡಿಸೈನ್ ಮತ್ತು ಹೆವಿ ಪ್ಯಾಟರ್ನ್ ವರ್ಕ್ ಇರುವುದರಿಂದ, ಡ್ರೆಸ್‌ಗೂ ಒಂದು ಸ್ಟೇಟ್‌ಮೆಂಟ್ ಲುಕ್ ನೀಡುತ್ತದೆ.
ನೀವು ಸ್ವಲ್ಪ ಹೆವಿ ಲುಕ್ ಬಯಸಿದರೆ, ಮಲ್ಟಿಲೇಯರ್ ವೇಸ್ಟ್ ಚೈನ್ ಉತ್ತಮ ಆಯ್ಕೆಯಾಗಬಹುದು. ಇದರಲ್ಲಿ 2-3 ಲೇಯರ್‌ಗಳ ಚೈನ್‌ಗಳಿದ್ದು, ಇದು ಸೊಂಟವನ್ನು ಇನ್ನಷ್ಟು ಡಿಫೈನ್ ಮಾಡಿ ತೋರಿಸುತ್ತದೆ ಮತ್ತು ಬ್ರೈಡಲ್ ಲುಕ್‌ಗೆ ತುಂಬಾ ಸುಂದರವಾಗಿ ಕಾಣುತ್ತದೆ.
ಹೂವಿನ ಡಿಸೈನ್ ಇರುವ ಫ್ಲೋರಲ್ ಮೋಟಿಫ್ ಕಮರ್‌ಬಂದ್ ಇತ್ತೀಚೆಗೆ ಬಹಳ ಟ್ರೆಂಡ್‌ನಲ್ಲಿದೆ. ಇದು ಹಗುರವಾಗಿದ್ದರೂ ಎಲಿಗೆಂಟ್ ಲುಕ್ ನೀಡುತ್ತದೆ ಮತ್ತು ಅನಾರ್ಕಲಿ ಅಥವಾ ಸಿಂಪಲ್ ಸೀರೆಗಳ ಜೊತೆ ಚೆನ್ನಾಗಿ ಹೊಂದುತ್ತದೆ.
ನಿಮಗೆ ವೆಸ್ಟರ್ನ್ ಟಚ್ ಬೇಕಿದ್ದರೆ, ಸಣ್ಣ ಸ್ಟಾರ್, ಮೂನ್ ಅಥವಾ ಇತರ ಚಾರ್ಮ್ ಪೆಂಡೆಂಟ್‌ಗಳಿರುವ ವೇಸ್ಟ್ ಚೈನ್ ಟ್ರೈ ಮಾಡಿ. ಇದು ಕ್ರಾಪ್ ಟಾಪ್, ಸ್ಕರ್ಟ್ ಮತ್ತು ಇಂಡೋ-ವೆಸ್ಟರ್ನ್ ಲುಕ್‌ಗಳ ಜೊತೆ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣುತ್ತದೆ.