newsics.com
ಬೀದರ್: ಗ್ರಾ.ಪಂ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ಹೊರ ವಲಯದ ಚಿಕ್ಕಪೇಟೆ ಬಳಿಯ ಎಸ್.ಕೆ ಡಾಬಾದ ಬಳಿ ನಡೆದಿದೆ.
ಗ್ರಾ.ಪಂ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಹೊನ್ನಿಕೇರಿ ಗ್ರಾಮದ ವೈಜನಾಥ್ ಬಿರಾದರ್(49) ಕೊಲೆಯಾದ ದುರ್ದೈವಿ. ಇಬ್ಬರು ಆರೋಪಿಗಳು, ವೈಜನಾಥ್‌ರನ್ನ ಅಟ್ಟಾಡಿಸಿಕೊಂಡು ಹೋಗಿ, ಮುಖದ ಗುರುತು ಸಿಗದಂತೆ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ.