newsics.com
ಬಾರ್ಬಡೋಸ್/ ನವದೆಹಲಿ: ಇಲ್ಲಿನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ 2024ರ ಟಿ 20 ವಿಶ್ವಕಪ್‌ನ ಅಂತಿಮ ಪಂದ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಮಾನ ಏರುವ ಮುನ್ನವೂ ಕುತೂಹಲದಿಂದ ವೀಕ್ಷಿಸಿದರು.
ಭಾರತ (India) ಮತ್ತು ದಕ್ಷಿಣ ಆಫ್ರಿಕಾ (South Africa) ನಡುವಿನ ಕ್ರಿಕೆಟ್ ಪಂದ್ಯಾವಳಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಏರುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕ್ಷಿಸಿದರು.

ಈ ವಿಡಿಯೋ ವೈರಲ್ ಆಗಿದ್ದು, ಭಾರತವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಗಳಿಸಿತು. ಇದು ಪುರುಷರ T20 ವಿಶ್ವಕಪ್‌ನ ಫೈನಲ್‌ನ ಇತರ ತಂಡಗಳಿಗಿಂತ ಗರಿಷ್ಠ ಮೊತ್ತವಾಗಿದೆ.
ಭಾರತ 4.3 ಓವರ್‌ಗಳಲ್ಲಿ 3 ವಿಕೆಟ್‌ಗೆ 34 ರನ್ ಗಳಿಸಿತು. ಆದರೆ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ನಡುವಿನ ನಿರ್ಣಾಯಕ 72 ರನ್‌ಗಳ ಜೊತೆಯಾಟವು ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು.
ಅಕ್ಷರ್ 31 ಎಸೆತಗಳಲ್ಲಿ 47 ರನ್ ಗಳಿಸಿದರೆ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿದರು. ಕೇಶವ್ ಮಹಾರಾಜ್ ಮತ್ತು ಅನ್ರಿಚ್ ನಾರ್ಟ್ಜೆ ಕ್ರಮವಾಗಿ 23 ಮತ್ತು 26 ರನ್‌ಗಳಿಗೆ ತಲಾ ಎರಡು ವಿಕೆಟ್ ಪಡೆದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಮರಳುವ ವೇಳೆ ವಿಮಾನ ನಿಲ್ದಾಣದಲ್ಲೇ ಟಿ-20 ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಟ್ಯಾಬ್‌ನಲ್ಲಿ ಸಿದ್ದರಾಮಯ್ಯ ವೀಕ್ಷಿಸಿದ್ದು ಗಮನ ಸೆಳೆಯಿತು.
ಟಿ-20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಭಾರತ 177 ರನ್‌ಗಳ ಗುರಿ ನೀಡಿದೆ.
https://x.com/siddaramaiah/status/1807096174928658699?t=OJ2ntvACsIKRxzSAcfOq6g&s=19
Cow Dung Soup! ಈ ದೇಶದಲ್ಲಿ ಹಸುವಿನ ಸಗಣಿಯಿಂದ ತಯಾರಾಗುತ್ತೆ ವಿಶೇಷ್ ಸೂಪ್
ದರ್ಶನ್ ಭೇಟಿಗೆ ಮುಂದಾದ ನಟ, ನಟಿಯರು: ಬದಲಾಯ್ತಾ ಸ್ಯಾಂಡಲ್‌ವುಡ್ ಮಂದಿಯ ಧೋರಣೆ?
ದರ್ಶನ್ ಫ್ಯಾನ್ಸ್‌ಗಳಿಂದ ಬ್ಯಾಡ್ ಕಮೆಂಟ್ಸ್ ಟಾರ್ಚರ್; ಅಳಲು ತೋಡಿಕೊಂಡ ಸೋನು ಗೌಡ