newsics.com
ಬೇಸಗೆಯ ಬಿರು ಬಿಸಿಲಿಗೆ ದೇಹವು ಸಂಪೂರ್ಣವಾಗಿ ಬೆಂದು ಹೋಗುವುದು. ಬೆಂಕಿಗೆ ಹಾಕಿದಾಗ ಸುಡುವಂತೆ ದೇಹವು ಸುಡುವುದು. ಹಿಂಗತೂ ಎಲ್ಲರ ಬಾಯಲ್ಲೂ ಬಿಸಿಲಿನ ಸುದ್ದಿ. ಬಿಸಿಲಿನ ಶಾಖಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಇಲ್ಲೊಬ್ಬ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಹೊಸ ಉಪಯೋಗವನ್ನು ಕಂಡಿಕೊಂಡಿದ್ದಾನೆ. ಹೌದು ಆಯುರ್ವೇದಿಕ್ ಡಾಕ್ಟರ್ ಬಿಸಿಲ ಶಾಖದಿಂದ ತಪ್ಪಿಸಲು ತನ್ನ ಐಷಾರಾಮಿ ಕಾರಿಗೆ ಹಸುವಿನ ಸಗಣಿ ಲೇಪಿಸಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಹಾರಾಷ್ಟ್ರದ ಪಂಢಪುರದ ಆಯುರ್ವೇದಿಕ್ ವೈದ್ಯ ಡಾ. ರಾಮ್ ಹರಿ ಕದಮ್ ಎಂಬವರು ಮಹೀಂದ್ರಾ XUV 300 ಕಾರಿಗೆ ಸಗಣಿಗೆ ಗೋಮೂತ್ರವನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಕಾರಿಗೆ ಹಚ್ಚಿದ್ದಾರೆ. ಇದರಿಂದ ಅರ್ಧದಷ್ಟು ತಾಪಮಾನ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಹಸುವಿನ ಸಗಣಿ ವಿಕಿರಣವನ್ನು ವಿರೋಧಿ ಗುಣವನ್ನು ಹೊಂದಿದೆ, ಇದರಿಂದಾಗಿ ಕಾರಿನ ಬಣ್ಣ ಕೂಡಾ ಮಸುಕಾಗುವುದಿಲ್ಲ, ಜೊತೆಗೆ ಕಾರಿಗೆ ಯಾವುದೇ ಹಾನಿಯಾಗುವುದಿಲ್ಲ. ಕಾರಿನ ಒಳಗಿನ ತಾಪಮಾನವು 50% ನಷ್ಟು ತಂಪಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಈ ವಿಡಿಯೋವನ್ನು ರಾಹುಲ್ ಕುಲಕರ್ಣಿ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ https://x.com/RahulAsks/status/1905507993128427649 ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.