newsics.com
ರಂಜಾನ್ ಸಮಯದಲ್ಲಿ ಆಲ್ಕೋಹಾಲ್-ಮುಕ್ತ ಸುಗಂಧ ದ್ರವ್ಯಗಳನ್ನು ಬಳಸುವ ಅತ್ತರ್ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ರಂಜಾನ್ ಉಪವಾಸದ ನಂತರ ಆಚರಿಸುವ ಈದ್ ಹಬ್ಬದಂದು ಮುಸ್ಲಿಮರು ಅತ್ತರ್ ಹಚ್ಚಿ ಸಂಭ್ರಮಿಸುತ್ತಾರೆ. ಹಾಗಿದ್ರೆ ಅತ್ತರ್ ಅಂದರೆ ಏನು? ಮುಸ್ಲಿಮರು ಅತ್ತರ್ ಗೆ ಇಷ್ಟು ಪ್ರಾಮುಖ್ಯತೆ ಕೊಡ್ತಾರೆ.
ಮುಸ್ಲಿಮರು ಒಂದು ತಿಂಗಳು ಉಪವಾಸ ಮಾಡಿ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಕ್ಕೆ ಪ್ರತಿಯೊಬ್ಬ ಮುಸ್ಲಿಮರೂ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಜೊತೆಗೆ ಅತ್ತರ್ ಹಚ್ಚಿ, ಮಸೀದಿಗೆ ತೆರಳಿ ನಮಾಜ್ ಸಲ್ಲಿಸಿ ಹಬ್ಬ ಆಚರಿಸುತ್ತಾರೆ. ಉಪವಾಸದ ಸಮಯದಲ್ಲಿ ಅತ್ತರ್ ದೇಹಕ್ಕೆ ಅಥವಾ ಬಟ್ಟೆಗೆ ಹಚ್ಚಬಾರದು. ಆದರೆ ಉಪವಾಸ ಮುಗಿದು ಈದ್ ಹಬ್ಬಕ್ಕೆ ಅತ್ತರ್ ಅನ್ನು ಎಲ್ಲರೂ ಹಚ್ಚುತ್ತಾರೆ.ಪವಿತ್ರ ಮಾಸದಲ್ಲಿ, ಅನೇಕರು ಆಲ್ಕೋಹಾಲ್ ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುವ ಸ್ಪ್ರೇಗಳು ಮತ್ತು ಸುಗಂಧ ದ್ರವ್ಯಗಳಿಗಿಂತ ಸಾಂಪ್ರದಾಯಿಕ ಅತ್ತರ್ ಅನ್ನು ಬಯಸುತ್ತಾರೆ.
ಆದರೆ ಈ ಆಟ ಮಂಗಳೂರಿನ ಅಸ್ಗರ್ ಅಲಿ ಅತ್ತರ್ ವಾಲ ಅಂಗಡಿಯಲ್ಲಿ 200 ಬಗೆಯ ಅತ್ತರ್ ಸುಗಂಧ ದ್ಯವ್ಯ ಲಭ್ಯವಿದೆ.. ಖರೀದಿಗೆ ಬರುವವರು ತಮ್ಮ ಮನೆಗೆ ಅಗತ್ಯಕ್ಕೆ ತಕ್ಕಂತೆ ಅತ್ತರ್ ಖರೀದಿಸುತ್ತಾರೆ. 3ML ಅತ್ತರ್ಗೆ ಕಡಿಮೆ ದರ ರೂ. 30 ಇದ್ದರೆ ಹೆಚ್ಚು ದರ ರೂ 200 ಇದೆ. ಅತ್ತರ್ನ ಸುವಾಸನೆ, ಬ್ರಾಂಡ್ ಮೇಲೆ ದರ ಭಿನ್ನವಾಗಿರುತ್ತದೆ. ಇಲ್ಲಿಗೆ ಅಸ್ಸಾಮ್ನಿಂದ ಈ ಅತ್ತರ್ ತರಿಸಲಾಗುತ್ತದೆ. ಅತ್ತರ್ ಸುಗಂಧ ದ್ರವ್ಯಗಳಿಗೆ ಭಾರಿ ಬೇಡಿಕೆಯಿದೆ.