newsics.com
ನೇಪಿಟಾವ್: ಮ್ಯಾನ್ಮಾರ್‌ನಲ್ಲಿ ಸತತ ಎರಡು ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆ ದಾಖಲಾಗಿತ್ತು
ಈ ಪ್ರಬಲ ಭೂಕಂಪಕ್ಕೆ 60 ಮಂದಿ ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದುವು ಮಧ್ಯ ಮ್ಯಾನ್ಮಾರ್‌ನಲ್ಲಿದ್ದು, ಮೋನಿವಾ ನಗರದಿಂದ ಸುಮಾರು 50 ಕಿಲೋಮೀಟರ್ ಪೂರ್ವಕ್ಕೆ ಇದೆ.
ಮ್ಯಾನ್ಮಾರ್‌ನ ಮಂಡಲೇಯಲ್ಲಿರುವ ಐಕಾನಿಕ್ ಅವಾ ಸೇತುವೆ ಭೂಕಂಪದಲ್ಲಿ ಕುಸಿದು ಬಿದಿದ್ದೆ. ಒಂದು ಮಸೀದಿ ಭಾಗಶಃ ಕುಸಿದು ಕನಿಷ್ಠ ಮೂರು ಜನರು ಮೃತಪಟ್ಟಿದ್ದಾರೆ. ಹಲವಾರು ಕಟ್ಟಡಗಳು ಕುಸಿದು ರಸ್ತೆಗಳು ಬಿರುಕು ಬಿಟ್ಟಿದೆ.