newsics.com
ಈಗಿನ ಜನರೇಷನ್ ಯುವಕ ಯುವತಿಯರು ಕಣ್ಣು ಮುಚ್ಚಿ ಕಣ್ಣು ತೆಗೆಯುವಷ್ಟರಲ್ಲಿ ಪ್ರೀತಿ ಹುಟ್ಟಿ ಇನ್ನೊಂದು ಮತ್ತೊಂದು ಆಗಿ ಬ್ರೇಕಪ್ ಕೂಡ ಮಾಡಿಕೊಂಡಿರುತ್ತಾರೆ. ಕೆಲವರು ಲವ್ ಬ್ರೇಕಪ್ ಅಂತ ಸುಮ್ಮನಿದ್ದರೆ ಇನ್ನೂ ಕೆಲವರು ಲಿವ್ ಇನ್ ರಿಲೇಷನ್‌ಶಿಪ್ ಅಂತ ಶುರು ಮಾಡಿಕೊಂಡಿದ್ದಾರೆ. ಈ ರೀತಿ ಇರುವಾಗ ಯಾರು ವರ್ಜಿನ್ ಯಾರು ವರ್ಜಿನ್ ಅಲ್ಲ ಎಂದು ಕಂಡು ಹಿಡಿಯುವುದು ತುಂಬಾನೇ ಕಷ್ಟ. ಅದರಲ್ಲೂ ಲೈಂಗಿಕ ಶಿಕ್ಷಣ ಪಡೆಯದ ಅನೇಕ ಯುವತಿಯರಲ್ಲಿ ತಮ್ಮ ಲೈಂಗಿಕ ಅನುಭವಗಳು ಮತ್ತು ಕನ್ಯಾಪೊರೆಯ ಬಗ್ಗೆ ಗೊಂದಲ, ಆತಂಕ, ಹೆದರಿಕೆ ಇರುವುದನ್ನು ಲೈಂಗಿಕ ತಜ್ಞರು ಗಮನಿಸುತ್ತಾರೆ. ಈ ಆತಂಕಕ್ಕೆ ವೈದ್ಯರು ಇಲ್ಲಿ ಉತ್ತರಿಸಿದ್ದಾರೆ.
ಪ್ರಶ್ನೆ: ನಾನು ಇಪ್ಪತ್ತೈದು ವರ್ಷದ ಯುವತಿ. ಇತ್ತೀಚೆಗೆ ನನ್ನ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಒಳ್ಳೆಯ ಸ್ಥಾನಮಾನ ಇರುವ, ಫ್ರೆಂಡ್ಲೀ ಆಗಿರುವ ಗಂಡು ಕೂಡ ದೊರಕಿದ್ದಾನೆ. ನನಗೀಗ ಸಮಸ್ಯೆ ಅದಲ್ಲ. ನನಗೆ ಮೊದಲು ಒಬ್ಬ ಬಾಯ್‌ಫ್ರೆಂಡ್ ಇದ್ದ. ನಾವಿಬ್ಬರೂ ಎರಡು ಬಾರಿ ಸಂಭೋಗ ನಡೆಸಿದ್ದೇವೆ. ಅದೇ ನನ್ನ ಮೊದಲ ಸಂಭೋಗ. ಆ ಲೈಂಗಿಕ ಕ್ರಿಯೆಯ ವೇಳೆಗೆ ನನ್ನ ಕನ್ಯಾಪೊರೆ ಹರಿದುಹೋಗಿದೆ. ಇವಾಗ ನನ್ನ ಸಮಸ್ಯೆ ಏನೆಂದರೆ, ಮದುವೆಯಾದ ಮೊದಲ ರಾತ್ರಿ, ನಾನು ವರ್ಜಿನ್ ಅಲ್ಲ ಅಂತ ನನ್ನ ಪತಿಗೆ ಗೊತ್ತಾಗಬಹುದಾ? ಅಂತಾ
ಉತ್ತರ: ಗೊತ್ತಾಗುವ ಯಾವುದೇ ಸಾಧ್ಯತೆ ಇಲ್ಲ. ಒಂದು ವೇಳೆ ನಿಮ್ಮ ಹಳೆಯ ಚರಿತ್ರೆ ಗೊತ್ತಾಗುವಂತೆ ನೀವು ನಡೆದುಕೊಂಡರೆ ಮಾತ್ರ ಗೊತ್ತಾಗಬಹುದು. ನಿಮ್ಮ ಭಾವಿ ಗಂಡ ಆಧುನಿಕ ಮನಸ್ಥಿತಿಯವರಾಗಿದ್ದರೆ, ನೀವು ಮೊದಲೇ ಕನ್ಯಾಪೊರೆ ಹರಿದುಕೊಂಡಿದ್ದರೂ ಅವರಿಗೆ ಅದೇನೂ ಸಮಸ್ಯೆ ಅನಿಸಲಾರದು. ಸಾಮಾನ್ಯವಾಗಿ ಕನ್ಯಾಪೊರೆ ಸಂಭೋಗದಿಂದಲೇ ಹರಿಯಬೇಕೆಂದೇನೂ ಇಲ್ಲ. ಅದು ಕಠಿಣ ವ್ಯಾಯಾಮದ ವೇಳೆ, ಬೈಸಿಕಲ್ ಚಲಾಯಿಸುವ ಸಂದರ್ಭದಲ್ಲಿಯೂ ಹರಿದುಹೋಗಬಹುದು. ಒಂದುವೇಳೆ ಅವರು ಸಾಂಪ್ರದಾಯಿಕ ಮನಸ್ಥಿತಿಯವರಾಗಿದ್ದರೆ, ಆಗ ಕನ್ಯಾಪೊರೆಯ ಬಗ್ಗೆ ಯೋಚಿಸಬಹುದು. ಆದರೆ ಆಧುನಿಕ ಶಿಕ್ಷಣ ಪಡೆದ ಯಾರೂ ಇಂದು ಕನ್ಯಾಪೊರೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ.
ಪ್ರಶ್ನೆ: ನಾನು ಇಪ್ಪತ್ತಮೂರು ವರ್ಷದ ಯುವತಿ. ಮುಂದಿನ ತಿಂಗಳು ಮದುವೆಯಾಗುತ್ತಿದ್ದೇನೆ. ಆರು ತಿಂಗಳ ಹಿಂದೆ ಅವರ ಪರಿಚಯವಾಯಿತು. ಮದುವೆ ಫಿಕ್ಸ್ ಆದ ಬಳಿಕ ಒಮ್ಮೆ ಅವರ ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆ. ಬೇರೆ ಯಾರೂ ಇರಲಿಲ್ಲ. ಆಗ ಅವರು ನನ್ನನ್ನು ಸೆಕ್ಸ್‌ಗೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ನಾನು ಅದೆಲ್ಲಾ ಮದುವೆಯ ನಂತರ ಎಂದು ತಿರಸ್ಕರಿಸಿದೆ. ಆಗ ಅವರು ಒಪ್ಪಿದರು. ಅಂದಿನಿಂದ ನಂತರ ಭಾವಿ ಗಂಡ ನನ್ನ ಬಳಿ ಮಾತನಾಡುವುದು ಮೊದಲಿಗಿಂತ ಕಡಿಮೆ ಮಾಡಿದ್ದಾರೆ. ಅವರು ಈ ವಿಷಯದಲ್ಲಿ ತುಂಬಾ ಹರ್ಟ್ ಆಗಿರಬಹುದೇ? ಅದರಿಂದ ಮುಂದೆ ನನ್ನ ಲೈಂಗಿಕ ಜೀವನದಲ್ಲಿ ಸಮಸ್ಯೆ ಉಂಟಾಗಬಹುದೇ? ನನಗೆ ಕಾಮದ ಬಗ್ಗೆ ಯಾವುದೇ ಕೀಳರಿಮೆ ಇಲ್ಲ.
ಉತ್ತರ: ನಿಮ್ಮ ನಿಲುವು ಸರಿಯಾಗಿಯೇ ಇದೆ. ವಿವಾಹಕ್ಕೆ ಮೊದಲೇ ಲೈಂಗಿಕ ಸಂಪರ್ಕ ಬೇಡ ಎಂದು ನೀವು ನಿರ್ಧರಿಸಿದ್ದರೆ, ಅದನ್ನು ಗಂಡ ಗೌರವದಿಂದ ಕಾಣಬೇಕು. ನಿಮ್ಮ ಈ ನಿರ್ಧಾರವನ್ನು ಅವರು ಗೌರವಿಸಿದ್ದಾರೆ ಅನಿಸುತ್ತದೆ. ನಿಮ್ಮನ್ನು ಅವರು ಇನ್ನಷ್ಟು ಬಲಾತ್ಕಾರಪಡಿಸದೆ ಇರುವುದನ್ನು ಗಮನಿಸಿ. ಒಂದು ವೇಳೆ ನೀವು ಸೆಕ್ಸ್‌ಗೆ ಕೂಡಲೇ ಒಪ್ಪಿಕೊಂಡಿದ್ದರೆ ಏನಾಗುತ್ತಿತ್ತು? ‘ಈಕೆ ಸುಲಭದಲ್ಲಿ ಸೆಕ್ಸ್‌ಗೆ ಒಪ್ಪುತ್ತಾಳೆ’ ಎಂಬ ಭಾವನೆ ಅವರಲ್ಲಿ ಮೂಡುತ್ತಿರಲಿಲ್ಲವೇ? ನಿಮ್ಮ ಭಾವಿ ಗಂಡ ಅಂಥ ಭಾವನೆ ಹೊಂದಿದವರು ಎಂದು ನಾನು ಹೇಳುವುದಿಲ್ಲ. ಆದರೆ ತುಂಬಾ ಮಂದಿ ಪುರುಷರನ್ನು ಈ ಚಿಕಿತ್ಸಾ ವಲಯದಲ್ಲಿ ನಾನು ನೋಡಿರುವುದರಿಂದ, ಪುರುಷರು ಸಾಮಾನ್ಯವಾಗಿ ಏನು ಯೋಚಿಸುತ್ತಾರೆ ಎಂಬುದನ್ನು ಊಹಿಸಬಲ್ಲೆ. ಆದ್ದರಿಂದ ನಿಮ್ಮ ನಿಲುವು ಸರಿಯಾಗಿಯೇ ಇದೆ. ಈ ಘಟನೆ ನಿಮ್ಮ ಭಾವಿ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಯಾಕೆಂದರೆ ಮದುವೆಯ ಬಳಿಕ ಲೈಂಗಿಕ ಜೀವನವನ್ನು ಸೂಪರ್ ಆಗಿ ನಡೆಸಿಕೊಂಡು ಹೋಗುವ ರೀತಿ ನಿಮ್ಮ ಕೈಯಲ್ಲೇ ಇದೆ. ಈ ಅಸಮಾಧಾನ ಹೊರಟುಹೋಗುವ ಹಾಗೆ ನೀವು ನಡೆದುಕೊಂಡು ಅವರನ್ನು ಖುಷಿಪಡಿಸಬಹುದು.