newsics.com
ಶ್ರೀನಗರ : ಕಾಶ್ಮೀರಕ್ಕೆ ಸಂಚರಿಸಲಿರುವ ಬಹುನಿರೀಕ್ಷಿತ ಮೊದಲ ರೈಲನ್ನು ಏಪ್ರಿಲ್ 19 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಕಟ್ರಾ ದಿಂದ ಶ್ರೀನಗರದವರೆಗೆ ಪ್ರಯಾಣಿಸಲಿರುವ ಕಾಶ್ಮೀರದ ಮೊದಲ ರೈಲು ಇದ್ದಾಗಿದೆ. ಹಲವು ವರ್ಷಗಳಿಂದ ಕಾಯುತ್ತಿರುವ ರೈಲು ಬಂಡಿ ಓಡುವ ಕಾಲ ಬಂದಿದೆ. ಏಪ್ರಿಲ್ 19 ರಂದು ಪ್ರಧಾನಿ ನರೇಂದ್ರ ಮೋದಿ ಕಟ್ರಾ ದಿಂದ ಶ್ರೀನಗರದವರೆಗೆ ಪ್ರಯಾಣಿಸಲಿರುವ ಕಾಶ್ಮೀರದ ಮೊದಲ ರೈಲಿಗೆ ಬಾವುಟ ಬೀಸಿ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಎತ್ತರದ ಚೀನಾಬ್ ಸೇತುವೆಗೆ ಭೇಟಿ ನೀಡಿ ಸಾರ್ವಜನಿಕ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.