newsics.com
ಬೆಂಗಳೂರು: ಕೆಎಂಎಫ್ ತನ್ನ ಮಾರಾಟ ಜಾಲವನ್ನು ವಿಸ್ತರಣೆ ಮಾಡಿದ್ದು, ನಂದಿನಿ ಉತ್ಪನ್ನಗಳ ಮಾರಾಟದಲ್ಲಿ
ಕೆಎಂಎಫ್ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ನಂದಿನಿ ಇ-ಕಾಮರ್ಸ್ ಆ್ಯಪ್‌ಗಳಲ್ಲೂ ಮಾರಾಟ ಮಾಡಲು ಸಜ್ಜಾಗಿದೆ.
ಕೆಎಂಎಫ್ ತನ್ನ ಮಾರಟ ಜಾಲವನ್ನು ವಿಸ್ತರಣೆ ಮಾಡಿದ್ದು, ಇನ್ನು ಮುಂದೆ ನಂದಿನಿ ಉತ್ಪನ್ನಗಳು ಎಲ್ಲಾ ಚಿಲ್ಲರೆ ಮಳಿಗೆ, ಆಪ್‌ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರವಲ್ಲದೇ ಮಾಲ್‌ಗಳಲ್ಲೂ ಸಿಗಲಿದೆ.
ಏ.1 ರಿಂದ ನಂದಿನಿ ಉತ್ಪನ್ನಗಳು ಜನರ ಮನೆ ಬಾಗಿಲಿದೆ ಇಡ್ಲಿ, ದೋಸೆ ಹಿಟ್ಟು ಸೇರಿ ನಂದಿನಿಯ ಹಲವು ಉತ್ಪನ್ನಗಳು ಸ್ವಿಗ್ಗಿ ಇನ್ಸ್ಟಾಮಾರ್ಟ್, ಬ್ಲಿಂಕಿಟ್, ಬಿಗ್‌ಬಾಸ್ಕೆಟ್, ಜೆಪ್ಟೋದಂತಹ ಇ-ಕಾಮರ್ಸ್ ಫ್ಲಾಟ್‌ಫಾರ್ಮ್‌ಗಳಲ್ಲಿ ಸಿಗಲಿವೆ.