
ಈ ರಾಜ್ಯದಲ್ಲಿ ವಾಹನದ ಚಾಲಕರು ಯಾವುದೇ ರೀತಿಯ ಹಾರ್ನ್ ಮಾಡುಂತಿಲ್ಲ. ‘ನೋ-ಹಾಂಕಿಂಗ್ ಪಾಲಿಸಿ’ಯನ್ನು ಜಾರಿ ಮಾಡಿದ ಭಾರತದ ಮೊದಲ ಮತ್ತು ಏಕೈಕ ನಗರ ಹೆಗ್ಗಳಿಕೆಯೂ ಇದೆ. ಹೌದು ಭಾರತದ ಈಶಾನ್ಯ ಭಾಗದಲ್ಲಿರುವ ಮಿಜೋರಾಂ ರಾಜ್ಯದ ಐಜ್ವಾಲ್ ನಲ್ಲಿ ಚಾಲಕರು ಯಾವುದೇ ರೀತಿಯ ಹಾರ್ನ್ ಮಾಡುವುದಿಲ್ಲ.
ಯಾವುದೇ ಕಾನೂನು ಅಥವಾ ಅಧಿಕಾರಿಗಳ ಸಹಾಯವಿಲ್ಲದೆ ಈ ನೀತಿಯನ್ನು ಜಾರಿಗೆ ತಂದಿರುವುದು ಗಮನಾರ್ಹ ಸಂಗತಿಯಾಗಿದೆ. ಖಾಸಗಿ ಮಾತ್ರವಲ್ಲದೆ ಸರ್ಕಾರಿ ವಾಹನಗಳು ಸಹ ಇಲ್ಲಿ ಹಾರ್ನ್ ಮಾಡುವಂತಿಲ್ಲ. 3.5 ಲಕ್ಷ ಜನರಿರುವ ಈ ನಗರದಲ್ಲಿ 1.25 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗಿವೆ. ಕಾರಿನ ಹಾರ್ನ್‌ನ ಸರಾಸರಿ ಡೆಸಿಬಲ್ ಮಟ್ಟವು ಸುಮಾರು 110dB ಆಗಿದೆ.
ಇದು ಆರೋಗ್ಯ ಮೇಲೆ ಪರಿಣಾಮ ಬೀರಬಹುದು. ನಗರಗಳಲ್ಲಿ ಶಬ್ದ ಮಾಲಿನ್ಯವು ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ, ಹೆಚ್ಚಿನ ನಗರಗಳ ಜನ 20dB ಶ್ರವಣ ಹಾನಿಯಿಂದ ಬಳಲುತ್ತಿದ್ದಾರೆ ಎಂದು ENT ತಜ್ಞರು ಹೇಳುತ್ತಾರೆ. ಹಾರ್ನಿಂಗ್ ಅನ್ನು ಶಬ್ದ ಮಾಲಿನ್ಯದ ಮೂಲವೆಂದು ಹೇಳಿದ್ದಾರೆ.