newsics.com
ಬೆಂಗಳೂರು: ಬುರ್ಕ ಧರಿಸಿ ಹುಡುಗಿಯರ ಹಾಸ್ಟೆಲ್ ಗೆ ಯುವಕನೋರ್ವ ನುಗ್ಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ್ಞಾನಭಾರತಿ ಕ್ಯಾಂಪಸ್ ನ ಒಳಗಡೆ ಇರುವ ರಮಬಾಯಿ ಹಾಸ್ಟೆಲ್ ಗೆ ಯುವಕ ನುಗ್ಗಿದ್ದಾನೆ.
ನಿನ್ನೆ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಯುವಕ ಒಳಗಡೆ ಹೋಗಿದ್ದಾನೆ. ಇದನ್ನ ಗಮನಿಸಿದ ವಿದ್ಯಾರ್ಥಿನಿಯರು,ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಪೊಲೀಸರು ಬಂದು ಯುವಕ ನನ್ನು ವಶಕ್ಕೆ ಪಡೆದಿದ್ದಾರೆ.
ಇಷ್ಟು ಸಮಯದಲ್ಲಿ ಯಾಕೆ ಒಳಗಡೆ ಬಂದ ಅನ್ನೋ ಅನುಮಾನ ಹೊರ ಹಾಕಿದ್ದಾರೆ. ಅಲ್ಲದೇ ಹುಡುಗಿಯರು ಇರುವ ಹಾಸ್ಟೆಲ್ ಗೆ ಸೆಕ್ಯೂರಿಟಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ.