Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Good Morning… Today’s almanac ಶುಭೋದಯ, ಫಾಲ್ಗುಣ ಮಾಸ ಕೃಷ್ಣ ಪಕ್ಷ, ಪಂಚಮಿ 19-03-2025, ಬುಧವಾರ
ಈ ದಿನಪಂಚಾಂಗಪ್ರಮುಖ

Good Morning… Today’s almanac ಶುಭೋದಯ, ಫಾಲ್ಗುಣ ಮಾಸ ಕೃಷ್ಣ ಪಕ್ಷ, ಪಂಚಮಿ 19-03-2025, ಬುಧವಾರ

Share
4 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭೋದಯ

ಇಂದಿನ ಪಂಚಾಂಗ

ಫಾಲ್ಗುಣ ಮಾಸ ಕೃಷ್ಣ ಪಕ್ಷ ಪಂಚಮಿ

19-03-2025, ಬುಧವಾರ

# ರಂಗಪಂಚಮಿ

# ಯಲ್ಲಮ್ಮ ದೇವಿ ಜಾತ್ರೆ, ಸೌಂದಲಗಾ, ಬೆಳಗಾವಿ

—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 19/03/2025
ತಿಂಗಳು – ಮಾರ್ಚ್
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಪಂಚಮಿ 24:36:25*
ಪಕ್ಷ – ಕೃಷ್ಣ
ನಕ್ಷತ್ರ – ವಿಶಾಖ 20:49:07
ಯೋಗ – ಹರ್ಷಣ 17:36:34
ಕರಣ – ಕೌಳವ 11:24:18
ಕರಣ – ತೈತುಲ 24:36:25*

ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಚೈತ್ರ
ಚಂದ್ರ ರಾಶಿ – ತುಲಾ till 14:05:42
ಚಂದ್ರ ರಾಶಿ – ವೃಷ್ಚಿಕ from 14:05:42
ಸೂರ್ಯ ರಾಶಿ – ಮೀನ
ಋತು – ಶಿಶಿರ

ರಾಹು ಕಾಲ – 12:27 – 13:58 ಅಶುಭ
ಯಮಘಂಡ ಕಾಲ – 07:56 – 09:26 ಅಶುಭ
ಗುಳಿಕ ಕಾಲ – 10:57 – 12:27
ಅಭಿಜಿತ್ – 12:03 – 12:51 ಅಶುಭ
ದುರ್ಮುಹೂರ್ತ – 12:03 – 12:51 ಅಶುಭ

ರಾಹು ಕಾಲ 12:29 – 13:59 ಅಶುಭ
ಯಮಘಂಡ ಕಾಲ 07:59 – 09:30 ಅಶುಭ
ಗುಳಿಕ ಕಾಲ 10:59 – 12:29
ಅಭಿಜಿತ್ 12:05 – 12:53 ಅಶುಭ
ದುರ್ಮುಹೂರ್ತ 12:05 – 12:53 ಅಶುಭ

—

ಇಂದಿನ ಮಾತು

ಬಣ್ಣದ ಮಾತುಗಳು ಮುತ್ತುಗಳಾಗುತ್ತವೆ. ಸತ್ಯದ ಮಾತುಗಳು ಮುಳ್ಳುಗಳಾಗುತ್ತವೆ. ಇದೇ ಈ ಜಗದ ವಿಪರ್ಯಾಸ.

—

ಇಂದಿನ‌ ಸುಭಾಷಿತ

ಯಾಚಿತೋ ಯಃ ಪ್ರಹೃಷ್ಯೇತ
ದತ್ವಾ ಚ ಪ್ರೀತಿಮಾನ್ ಭವೇತ್ |
ತಂ ದೃಷ್ಟ್ವಾ ಹ್ಯಥವಾ ಶ್ರುತ್ವಾ
ನರಃ ಸ್ವರ್ಗಮವಾಪ್ನುಯಾತ್ ||
(ಭೋಜ ಚರಿತ್ರೆ)

ಯಾವನು ಯಾರಾದರೂ ತನ್ನನ್ನು ಬೇಡಿದರೆ, ಕೊಡುವ ಅವಕಾಶ ಸಿಕ್ಕಿತೆಂದು ಸಂತೋಷಪಡುತ್ತಾನೆಯೋ, ಅಂತಹವರಿಗೆ ಕೊಟ್ಟ ಮೇಲೂ ಸಂತೋಷಪಡುತ್ತಾನೋ, ಅಂತಹವನನ್ನು ನೋಡಿದರೂ, ಅಂತಹವನ ಬಗೆಗೆ ಕೇಳಿದರೂ ಸದ್ಗತಿಯುಂಟಾಗುತ್ತದೆ.

—

ಇಂದಿನ ಪದಾರ್ಥ

ಅನ್ಯೋನ್ಯ = Mutual , one another ಪರಸ್ಪರ ಸ್ನೇಹ
ಅನ್ಯರ್ಥ = Having the meaning obvious

—

ಇಂದಿನ ಓದು

ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ || 7 ||

58) ಲೋಹಿತಾಕ್ಷಃ

ಲೋಕ+ಹಿತ+ಅಕ್ಷ – ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳು ಕಣ್ಣು ಉಳ್ಳವನು ಎಂದರ್ಥ.
59) ಪ್ರತರ್ದನಃ
1) ಪ್ರ+ತರ್ದನ 2) ಪ್ರ+ತರ್ದ+ನಯತಿ
ಪ್ರ+ತರ್ದನ- ಇಲ್ಲಿ ‘ಪ್ರ’ ಎನ್ನುವುದು ಪ್ರಕ್ರುಷ್ಟರು ಎನ್ನುವ ಪೂರ್ಣ ಪದದ ಸಂಕ್ಷಿಪ್ತ ರೂಪ. ಪ್ರತರ್ದನಃ ಅಂದರೆ ಪ್ರಕ್ರುಷ್ಟರಿಗೆ ಹಿಂಸೆ ಕೊಡುವ ದುಷ್ಟ ಶಕ್ತಿಯನ್ನು ನಿರ್ಮೂಲ ಮಾಡುವವನು ಎಂದರ್ಥ.
ಪ್ರ+ತರ್ದ+ನಯತಿ- ಇಲ್ಲಿ ‘ಪ್ರ’ ಎನ್ನುವುದು ಪ್ರಹ್ಲಾದ ಎನ್ನುವ ಪೂರ್ಣ ಪದದ ಸಂಕ್ಷಿಪ್ತ ರೂಪ. ತರ್ದ ಎಂದರೆ ಹಿಂಸೆ. ನಯತಿ ಎಂದರೆ ಹೋಗಲಾಡಿಸಿದವನು. ಅದ್ದರಿಂದ ಪ್ರತರ್ದನಃ ಎಂದರೆ ಪ್ರಹ್ಲಾದನಿಗೆ ಹಿಂಸೆ ಕೊಟ್ಟಂತಹ ಹಿರಣ್ಯಕಶಿಪುವನ್ನು ಮರ್ದಿಸಿ ಆತನ ಕಷ್ಟವನ್ನು ಪರಿಹರಿಸಿ ಲೋಕವನ್ನು ಹಿಂಸೆಯಿಂದ ಪಾರುಮಾಡಿದವನು.
60) ಪ್ರಭೂತಃ
ಭೂಮ ಎಂದರೆ ಪರಿಪೂರ್ಣತೆ. ಪ್ರಭೂತಿ ಎಂದರೆ ಭೂತಿಗಲ್ಲಿ ಪ್ರಕ್ರುಷ್ಟವಾದ ಸ್ಥಿತಿ. ಪ್ರಭೂತ ಎಂದರೆ ಪರಿಪೂರ್ಣವಾದ ಆನಂದಸ್ವರೂಪನಾದ, ಗುಣಗಳಿಂದ ತುಂಬಿ ತುಳುಕುವ ಭಗವಂತ.

—-

ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ || 7 ||
61) ತ್ರಿಕಕುಬ್ಧಾಮ

ತ್ರಿ+ ಕಕುತ್+ ಧಾಮ= ತ್ರಿಕಕುಬ್ಧಾಮ ; ಇಲ್ಲಿ ‘ತ್ರಿ’ ಅಂದರೆ ಮೂರು, ‘ಕಕುತ್’ ಅಂದರೆ ಶಿಖೆ ಅಥವಾ ತುತ್ತ-ತುದಿ, ಧಾಮ ಎಂದರೆ ನೆಲೆಸಿರುವವನು. ತ್ರಿಕಕುಬ್ಧಾಮ ಎಂದರೆ ಮೂರು ಶಿಖೆಗಳಲ್ಲಿ ನೆಲೆಸಿರುವವನು.
ಮೂರು ಶಿಖೆಗಳು ಯಾವುವು?

ಮೂರು ಲೋಕಗಳು – ಭೂಮಿ , ಅಂತರಿಕ್ಷ ಮತ್ತು ಸ್ವರ್ಗ. ಈ ಮೂರು ಲೋಕಗಳ ತುದಿಯಲ್ಲಿ ಮೂರು ಸ್ಥಾನಗಳು. ಭೂಮಿಯಲ್ಲಿ ‘ಶ್ವೇತದ್ವೀಪ’, ಅಂತರಿಕ್ಷದಲ್ಲಿ ‘ಅನಂತಾಸನ’, ಸ್ವರ್ಗದಲ್ಲಿ ‘ವೈಕುಂಠ’. ಮೂರು ತೇಜೋಮಯ ಮೂರ್ತಿಗಳು-ಬ್ರಹ್ಮ, ವಿಷ್ಣು, ಮಹೇಶ್ವರ. ಓಂಕಾರದ ಮೂರು ಅಕ್ಷರಗಳು -ಅ, ಉ, ಮ್.

ಈ ಮೇಲಿನ ಮೂರು ಅಕ್ಷರದಿಂದಾದ ಮೂರು ಪದಗಳು ‘ಭೂಃ, ಭುವಃ ಸ್ವಃ (ಭೂರ್ಭುವಃ ಸ್ವಃ )’, ಈ ಪದಗಳಿಂದಾದ ಮೂರು ಪಾದಗಳು- “ತತ್ಸರ್ವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್”. ಮೂರು ಪಾದಗಳಿಂದಾದ ಮೂರು ವರ್ಗ (ಸೂಕ್ತಗಳಲ್ಲಿ ಶ್ರೇಷ್ಠವಾದ ಪುರುಷ ಸೂಕ್ತದಲ್ಲಿ ಮೂರು ವರ್ಗಗಳಿವೆ. ಒಂದರಿಂದ-ಐದು ಮೊದಲ ವರ್ಗ, ಆರರಿಂದ-ಹತ್ತು ಎರಡನೇ ವರ್ಗ, ಹನ್ನೊಂದರಿಂದ-ಹದಿನಾರು ಮೂರನೇ ವರ್ಗ). ಸೂಕ್ತಗಳಿಂದಾದ ಅತ್ಯಂತ ಶ್ರೇಷ್ಠವಾದ ಮೂರು ವೇದಗಳು “ಋಗ್ವೇದ, ಯಜುರ್ವೇದ ಮತ್ತು ಸಾಮವೇದ”.

ಅದ್ದರಿಂದ ತ್ರಿಕಕುಬ್ಧಾಮ ಅಂದರೆ: ಮೂರು ಲೋಕದಲ್ಲಿ ನೆಲೆಸಿರುವವನು, ಮೂರು ಲೋಕದಲ್ಲಿರುವ ಮೂರು ನಿತ್ಯ ಸ್ಥಾನದಲ್ಲಿ ನೆಲೆಸಿರುವವನು, ಅಲ್ಲಿ ನೆಲೆಸಿರುವ ಮೂರು ತೇಜೋಮಯ ಮೂರ್ತಿಗಳಲ್ಲಿ ನೆಲೆಸಿರುವವನು.
ಮೂರು ಅಕ್ಷರಗಳಿಂದಾದ ಓಂಕಾರದಲ್ಲಿ ಪ್ರತಿಪಾದ್ಯನಾದವನು, ಮೂರು ವ್ಯಾಹುತಿಗಳಿಂದ ವಾಚ್ಯನಾದವನು, ಗಾಯತ್ರಿಯ ಮೂರು ಪಾದಗಳಲ್ಲಿ ವಾಚ್ಯನಾದವನು, ಪುರುಷ ಸೂಕ್ತದ ಮೂರು ವರ್ಗದಿಂದ ವಾಚ್ಯನಾದವನು
ಮೂರು ವೇದದಿಂದ ವಾಚ್ಯನಾದವನು.

ಒಟ್ಟಾರೆ ತ್ರಿಕಕುಬ್ಧಾಮ ಎಂದರೆ ಮೂರು ಲೋಕದಲ್ಲಿ, ತ್ರಿಮೂರ್ತಿ ರೂಪನಾಗಿ, ಸಮಸ್ತ ಶಬ್ದ ಭಂಡಾರ ಮತ್ತು ಸಮಸ್ತ ಶಾಸ್ತ್ರದಿಂದ ವಾಚ್ಯನಾದವನು.

***

TAGGED:Good morningPanchami 19-03-2025Phalguna Masa Krishna PakshaWednesday
Share This Article
Facebook Twitter Copy Link Print
Previous Article ಸುನೀತಾ ವಿಲಿಯಮ್ಸ್ ಆಗಮನವನ್ನು ಇಲ್ಲಿ ವೀಕ್ಷಿಸಿ… ಇಲ್ಲಿದೆ ಲಿಂಕ್
Next Article Today’s prediction ಶುಭ ದಿನ, ರಾಶಿ ಭವಿಷ್ಯ 19-03-2025, ಬುಧವಾರ, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?