newsics.com
ಚಾಮರಾಜನಗರ: ತಲೆಯಲ್ಲಿ ಕೂದಲಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಪತಿಯನ್ನು ಹೀಯಾಳಿಸಿ ಕಿರುಕುಳ ನೀಡಿದ್ದರಿಂದ ಮನನೊಂದು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಗಂಡನ ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ ಕಿರುಕುಳ ನೀಡಿದ್ದಾಳೆ. ಇದರಿಂದ ಮನನೊಂದು ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಾಮರಾಜನಗರ ತಾಲೂಕಿನ ಗುಡಿಗಾಲದಲ್ಲಿ ಈ ಘಟನೆ ನಡೆದಿದೆ. ಪರಶಿವಮೂರ್ತಿ (30) ಅತ್ಮಹತ್ಯೆಗೆ ಶರಣಾದವ.
ಎರಡು ವರ್ಷದ ಹಿಂದೆ ಕಳಕಿಪುರದ ಮಮತಾ ಜತೆ ಮದುವೆ ಆಗಿತ್ತು. ಮದುವೆ ಬಳಿಕ ಪರಶಿವಮೂರ್ತಿ ತಲೆಕೂದಲು ಉದುರಿತ್ತು. ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ. ಎಲ್ಲರೂ ಅಪಹಾಸ್ಯ ಮಾಡುತ್ತಾರೆ. ನನ್ನ ಗಂಡ ಎಂದು ಹೇಳೋಕೆ ಮುಜುಗರ ಆಗುತ್ತದೆ ಎಂದು ಕಿರುಕುಳ ನೀಡಿದ್ದಳು.
ಇದೀಗ ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೂ ಮೊದಲು ಪತ್ನಿ ಮಮತಾ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಎಂದು ಸುಳ್ಳು ಕೇಸ್ ಕೂಡ ಹಾಕಿದ್ದಳು. ಈ ಕೇಸ್‌ನಲ್ಲಿ ಪತಿಯನ್ನು ಒಮ್ಮೆ ಜೈಲಿಗೆ ಕೂಡ ಕಳಿಸಿದ್ದಾಳೆ. ಸುಳ್ಳು ಕೇಸ್ ದಾಖಲಿಸಿ ಪತಿಯನ್ನು ಜೈಲಿಗೆ ಕಳಿಸಿದ್ದು, ಅಲ್ಲದೇ ತಾಳಿ ತೆಗೆದು ವಾಟ್ಸ್ಯಾಪ್ ಸ್ಟೇಟಸ್ ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಪದೇ ಪದೇ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ.
ರನ್ಯಾ ಚಿನ್ನ ಪ್ರಕರಣ: ಹಳೆ ಕೇಸ್‌ನಲ್ಲಿ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಸಿಬಿಐಗೆ ಪತ್ರ