newsics.com
ಬೆಂಗಳೂರು: ಬೀದಿ ನಾಯಿಗಳಿಗೆ ಆಹಾರ ಹಾಕುವುದಾಗಿ ಹೇಳುತ್ತಾ ಅವುಗಳನ್ನು ಹಿಡಿದುಕೊಂಡು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಗುಪ್ತಾಂಗ ಕತ್ತರಿಸಿ ಗುದ ಸಂಭೋಗ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶ್ವಾನದ ಮರ್ಮಾಂಗ ಕೊಯ್ದು ಸಂಭೋಗ ಮಾಡಿದ ಆರೋಪವನ್ನು ಜಯನಗರ ನಿವಾಸಿಗಳು ಮಾಡಿದ್ದಾರೆ. ಈ ಘಟನೆ ಬೆಂಗಳೂರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ನ ಬಳಿ ನಡೆದಿದೆ. ಜಯನಗರದ ಸುತ್ತಮುತ್ತ ವಿದ್ಯಾ ಎನ್ನುವ ಮಹಿಳೆ ಬೀದಿ ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ಇಂದು ಬೆಳಗ್ಗೆ ಅದೇ ರೀತಿ ಶ್ವಾನಕ್ಕೆ ಊಟ ನೀಡಲು ಹೋಗಿದ್ದಾರೆ. ಈ ವೇಳೆ ಶ್ವಾನದ ಜತೆ ಸಂಭೋಗ ಮಾಡುತ್ತಿದ್ದ ವ್ಯಕ್ತಿ ಇವರ ಕಣ್ಣಿಗೆ ಬಿದ್ದಿದ್ದಾನೆ. ಆಗ ಆತನನ್ನು ಕೂಗುತ್ತಿದ್ದಂತೆ ಅಲ್ಲಿ ನಾಯಿಯನ್ನು ಬಿಟ್ಟು ಓಡಿ ಹೋಗಿದ್ದಾನೆ.
ನಂತರ ಮಹಿಳೆ ವಾಯುವಿಹಾರ ಮಾಡುತ್ತಿದ್ದ ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾಳೆ. ನಂತರ, ವ್ಯಕ್ತಿಯ ದಾಳಿಗೆ ಒಳಗಾಗಿದ್ದ ನಾಯಿಯನ್ನು ಮಹಿಳೆ ರಕ್ಷಣೆ ಮಾಡಿ, ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ. ಇಂದು ಸಂಜೆ ಪುನಃ ಶಾಲಿನಿ ಎನ್ನುವ ಮಹಿಳೆ ಕೆಲವು ಶ್ವಾನಪ್ರಿಯರೊಂದಿಗೆ ಸೇರಿಕೊಂಡು ಇದೇ ಮೈದಾನದ ಬಳಿ ತೆರಳಿದ್ದಾರೆ. ಈ ವೇಳೆ ಬೆಳಗ್ಗೆ ನಾಯಿಯೊಂದಿಗೆ ಸಂಭೋಗ ಮಾಡುತ್ತಿದ್ದ ಅದೇ ವ್ಯಕ್ತಿಯನ್ನು ನೋಡಿದ್ದಾರೆ. ನಂತರ ಸ್ಥಳೀಯರೆಲ್ಲ ಸೇರಿ ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಜಯನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಆತನನ್ನು ವಿಚಾರಣೆ ಮಾಡುತ್ತಿದ್ದಾರೆ.
ಬೀದಿಯಲ್ಲಿ ಹೆಣ್ಣು ನಾಯಿಗಳ ಮೇಲೆ ಈತ ಕ್ರೌರ್ಯ ಮೆರೆದಿದ್ದಲ್ಲದೇ ಗಂಡು ನಾಯಿಗಳನ್ನೂ ಹಿಡಿದು ಸಂಭೋಗ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಈತ ಬೀದಿ ನಾಯಿಯ ಬಾಲ, ಕಾಲು ಹಾಗೂ ಮರ್ಮಾಂಗ ಸೇರಿದಂತೆ ವಿವಿಧ ಭಾಗಗಳನ್ನು ಕೊಯ್ದಿರುವುದು ಕಂಡುಬಂದಿದೆ. ನಾಯಿ ಗಾಯಗಳಿಂದ ಬಳಲುತ್ತಿದ್ದರೂ ಅದನ್ನು ಈತ ಲೆಕ್ಕಿಸದೇ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದಾನೆ ಎಂದು ಶ್ವಾನಪ್ರಿಯರು ಆರೋಪಿಸಿದ್ದಾರೆ.