newsics.com
ನವದೆಹಲಿ: ಮಂಗನಿಂದ ಮಾನವ ಎಂಬ ಪ್ರಸಿದ್ಧ ನಾಣುಡಿಯನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಅದಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ಕೂಡ ನಾವು ನೋಡಿದ್ದೇವೆ. ಇದೀಗ ಗಾಯಗೊಂಡಿರುವ ಮಂಗವೊಂದು ಮೆಡಿಕಲ್ ಸ್ಟೋರ್ಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದ್ದು, ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂಗ್ಲಾದೇಶದ ಮೆಹೆರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿದ್ದ ಮಂಗವೊಂದು (Monkey) ಮೆಡಿಕಲ್ ಸ್ಟೋರ್ಗೆ ಬಂದು ಪ್ರಥಮ ಚಿಕಿತ್ಸೆ ಪಡೆದಿದೆ. ಮೆಹೆರ್‌ಪುರದಲ್ಲಿರುವ ಅಲ್ಹೇರಾ ಫಾರ್ಮಸಿ ಈ ಘಟನೆ ನಡೆದಿದ್ದು, ಮಂಗನಿಂದ ಮಾನವ ಎಂಬ ಪ್ರಸಿದ್ಧ ನಾಣುಡಿಯನ್ನು ನೆನಪಿಸುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಮಂಗವೊಂದು (Monkey) ಮೆಡಿಕಲ್ ಸ್ಟೋರ್ನ ಕೌಂಟರ್ ಮೇಲೆ ಕುಳಿತುಕೊಂಡಿದ್ದು, ವ್ಯಕ್ತಿಯೊಬ್ಬರು ಅದರ ಗಾಯಕ್ಕೆ ಮುಲಾಮು ಹಚ್ಚುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ವ್ಯಕ್ತಿಯೊಬ್ಬರು ಅದಕ್ಕೆ ಸಹಾಯ ಮಾಡುತ್ತಿದ್ದು, ಮಂಗ ಸಹಕರಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
https://www.instagram.com/reel/DHCSmWQyTaE/?igsh=MWgyZmZ1cWZmaDM2OQ==