newsics.com
ಹಾವೇರಿ: ಕಿರುಕುಳ ತಪ್ಪಿಸುವ ಉದ್ದೇಶದಿಂದ ಸುಗ್ರೀವಾಜ್ಞೆ ತಂದಿದ್ದೇವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ ಬೆನ್ನಲ್ಲೇ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಎಗ್ಗಿಲ್ಲದೆ ಮುಂದುವರಿದಿದೆ.
ಮನೆಯಲ್ಲಿಟ್ಟಿದ್ದ 25 ಸಾವಿರ ರೂ ಹಣ ಮತ್ತು ಕಿವಿ ಓಲೆಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕೊಂಡೊಯ್ದ ಆರೋಪ ಮಾಡಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.
ಕಂತು ವಸೂಲಿಗೆ ಬಂದಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಯಲ್ಲಿದ್ದ ಚಿನ್ನದ ಓಲೆ, ಹಣ ತೆಗೆದುಕೊಂಡು ಹೋದ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಫೈನಾನ್ಸ್ ಸಿಬ್ಬಂದಿ ವಿರುದ್ಧ ಸಾಲ
ಮಾಡಿದ್ದ ಸಂಪವ್ವ ತಳಗಟ್ಟಿ ದೂರು ನೀಡಿದ್ದು, ರಟ್ಟಿಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಂಪವ್ವ ಕುಟುಂಬ ಫೈನಾನ್ಸ್ ಕಂಪನಿ ಬಳಿ 50 ಸಾವಿರ ರೂ. ಹಣ ಸಾಲ ಪಡೆದುಕೊಂಡಿದ್ದರು. ತಿಂಗಳಿಗೆ ಎರಡು ಕಂತುಗಳಂತೆ 1250 ರೂ. ಕಟ್ಟುತ್ತಿದ್ದರು. ಸಂಪವ್ವ ಮತ್ತು ಆಕೆಯ ಮಗಳು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಕಂತು ವಸೂಲಿಗೆ ಫೈನಾನ್ಸ್ ಸಿಬ್ಬಂದಿ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಇಟ್ಟಿದ್ದ 25 ಸಾವಿರ ರೂ ಹಣ, ಕಿವಿಯೋಲೆ ಕೊಂಡೊಯ್ದಿರುವುದಾಗಿ ಆರೋಪ ಮಾಡಲಾಗಿದೆ.
ಪ್ಲಾಸ್ಟಿಕ್ ಬಾಟಲ್‌ಗಳಲ್ಲಿನ ನೀರು ಕುಡಿದರೆ ರಕ್ತದೊತ್ತಡ ಗಣನೀಯ ಹೆಚ್ಚಳ!