newsics.com
ಪ್ರತಿಯೊಬ್ಬರ ವ್ಯಕ್ತಿತ್ವದಲ್ಲೂ ಸಾಕಷ್ಟು ಭಿನ್ನತೆಯಿರುತ್ತದೆ. ಕೆಲವರ ವ್ಯಕ್ತಿತ್ವ ಇಷ್ಟವಾದರೆ, ಇನ್ನು ಕೆಲವರು ಸನ್ನಿವೇಶಕ್ಕೆ ತಕ್ಕಂತೆ ವರ್ತಿಸುವ ರೀತಿಯಿಂದಲೇ ದೂರ ಉಳಿದುಬಿಡುತ್ತಾರೆ.
ಇತ್ತೀಚೆಗಿನ ದಿನಗಳಲ್ಲಿ ಕಣ್ಣು, ಕಿವಿ, ಮೂಗು ಹೀಗೆ ದೇಹದ ಅಂಗಗಳ ಆಕಾರ ನೋಡಿ ವ್ಯಕ್ತಿತ್ವ ನಿರ್ಣಯಿಸಬಹುದು. ವ್ಯಕ್ತಿತ್ವ ಪರೀಕ್ಷೆಗಳಿಗೆ ಸಂಬಂಧಪಟ್ಟ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ನೀವು ಮೊದಲು ಗಮನಿಸುವ ಅಥವಾ ಆಯ್ಕೆ ಮಾಡುವ ಚಿತ್ರಗಳನ್ನು ಅವಲಂಬಿಸಿ ನಿಮ್ಮ ಗುಣ ಸ್ವಭಾವ ಹಾಗೂ ವ್ಯಕ್ತಿತ್ವವನ್ನು ಹೇಳಬಹುದಾಗಿದೆ. ಇಲ್ಲಿರುವ ಚಿತ್ರದಲ್ಲಿ ಆರು ವಿಭಿನ್ನ ರೀತಿಯ ವೃತ್ತಗಳಿವೆ. ಪ್ರತಿ ವೃತ್ತದ ವಿನ್ಯಾಸವೂ ವಿಶಿಷ್ಟವಾಗಿದೆ. ಈ ವೃತ್ತಗಳಲ್ಲಿ ನಿಮಗೆ ಇಷ್ಟವಾಗುವ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಯ್ಕೆಯ ವೃತ್ತವೇ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ.
ಈ ವೃತ್ತಗಳು ನಿಮ್ಮ ಬಗೆಗಿನ ಯಾರಿಗೂ ಗೊತ್ತಿರದ ಕೆಲವು ರಹಸ್ಯಮಯ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ.
ವೃತ್ತ 1:
ಮೊದಲ ವೃತ್ತವನ್ನು ಆರಿಸಿಕೊಂಡರೆ, ಆ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಸ್ವತಂತ್ರವಾಗಿರಲು ಬಯಸುವ ವ್ಯಕ್ತಿಗಳಾಗಿದ್ದು ತಮ್ಮ ಜೀವನದ ಸಾಕಷ್ಟು ವಿಷಯಗಳನ್ನು ಖಾಸಗಿಯಾಗಿರಿಸಲು ಇಷ್ಟಪಡುತ್ತಾರೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹೀಗೆ ನಿಕಟ ವಲಯವನ್ನು ಹೊಂದಿದ್ದು, ಅವರೊಂದಿಗೆ ತಮ್ಮ ಸಮಯವನ್ನು ಕಳೆಯುತ್ತಾರೆ.
ವೃತ್ತ 2:
ಎರಡನೇ ವೃತ್ತವನ್ನು ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ತಮ್ಮನ್ನು ತಾವು ಎಲ್ಲಾ ವಿಷಯಗಳಿಗೂ ತೆರೆದುಕೊಳ್ಳುತ್ತಾರೆ. ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದು ತಮ್ಮ ಜೀವನದಲ್ಲಿ ಸ್ನೇಹಕ್ಕೆ ಹೆಚ್ಚಿನ ಮೌಲ್ಯ ನೀಡುತ್ತಾರೆ. ಸುತ್ತಲಿನ ಜನರು ಇವರನ್ನು ನಿರ್ಭೀತ ಮನೋಭಾವಕ್ಕಾಗಿ ಗೌರವಿಸುತ್ತಾರೆ.
ವೃತ್ತ 3:
ಮಧ್ಯದಲ್ಲಿ ಮರವನ್ನು ಹೊಂದಿರುವ ಮೂರನೇ ವೃತ್ತದ ಚಿತ್ರವನ್ನು ಆಯ್ಕೆ ಮಾಡಿಕೊಂಡರೆ ಅಂತಹ ಜನರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಆತ್ಮೀಯರಲ್ಲಿ ಪ್ರೀತಿ ಕಾಪಾಡಿಕೊಳ್ಳಲು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಾರೆ. ಈ ವ್ಯಕ್ತಿಗಳನ್ನು ಕಂಡರೆ ಮನೆಯವರೆಲ್ಲರಿಗೂ ಅಚ್ಚುಮೆಚ್ಚು, ಹೀಗಾಗಿ ಎಲ್ಲರ ಗೌರವಕ್ಕೆ ಇವರು ಪಾತ್ರರಾಗುತ್ತಾರೆ.
ವೃತ್ತ 4:
ನಾಲ್ಕನೇ ವೃತ್ತದ ಚಿತ್ರವನ್ನು ಆಯ್ಕೆ ಮಾಡಿಕೊಂಡ ವ್ಯಕ್ತಿಗಳ ವೃತ್ತವು ದೊಡ್ಡ ಸವಾಲುಗಳ ಸುಲಭವಾಗಿ ಸ್ವೀಕರಿಸುವ ಮನೋಭಾವವಿರುತ್ತದೆ. ಈ ಚಿತ್ರದಲ್ಲಿರುವ ಕಮಲವು ಶಕ್ತಿ ಮತ್ತು ಪರಿಶ್ರಮದ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ವೃತ್ತದಲ್ಲಿರುವ ಹಲವಾರು ಪದರಗಳು ನಿಮ್ಮ ಜೀವನದ ಸವಾಲುಗಳನ್ನು ಪ್ರತಿನಿಧಿಸುತ್ತವೆ. ಜೀವನದಲ್ಲಿ ಎಲ್ಲದ್ದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ವ್ಯಕ್ತಿಗಳಾಗಿದ್ದು, ದೃಢ ನಿರ್ಧಾರವು ಯಶಸ್ಸಿಗೆ ಕಾರಣವಾಗುತ್ತದೆ. ಶ್ರಮಜೀವಿಗಳಾಗಿದ್ದು ಗುರಿ ಸಾಧಿಸಲು ವಿಶ್ರಾಂತಿಯಿಲ್ಲದೆ ದುಡಿಯುತ್ತಾರೆ.
ವೃತ್ತ 5:
ಮುಚ್ಚಿದ ವೃತ್ತವನ್ನು ಆಯ್ಕೆ ಮಾಡಿಕೊಂಡರೆ ಅಂತಹವರು ಕ್ರಿಯಾಶೀಲ ವ್ಯಕ್ತಿ ಎನ್ನುವುದನ್ನು ಸೂಚಿಸುತ್ತದೆ. ಈ ಜನರು ನಿರ್ದಿಷ್ಟ ಸ್ಥಳ ಅಥವಾ ವ್ಯಕ್ತಿಗೆ ಬದ್ಧರಾಗಿರುವುದಿಲ್ಲ. ಸ್ವಾರ್ಥದ ನೆಲೆಯಲ್ಲಿ ಯೋಚಿಸುವ ಕಾರಣ ಈ ಜನರು ಬೇರೆಯವರನ್ನು ಬಳಸಿಕೊಳ್ಳುವುದೇ ಹೆಚ್ಚು. ಪ್ರಯಾಣ ಮಾಡುವುದೆಂದರೆ ಈ ವ್ಯಕ್ತಿಗಳಿಗೆ ತುಂಬಾನೇ ಇಷ್ಟ. ಅದಲ್ಲದೆ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟ ಪಡುವ ವ್ಯಕ್ತಿಗಳಾಗಿರುತ್ತಾರೆ.
ವೃತ್ತ 6:
ಕೊನೆಯ ವೃತ್ತವನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಶಿಸ್ತುಬದ್ಧ ಜೀವನಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ ಜೀವನದಲ್ಲಿ ಸಮತೋಲನ ಸಾಧಿಸುತ್ತಾರೆ. ಇವರಲ್ಲಿ ವಿಶಾಲವಾದ ಕಲ್ಪನೆಯೊಂದಿಗೆ ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ಜಗತ್ತನ್ನು ನೋಡಬಯಸುತ್ತಾರೆ.