newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಶುಕ್ಲ ಪಕ್ಷ ದ್ವಾದಶಿ
11-03-2025, ಮಂಗಳವಾರ
# ಭೌಮಪ್ರದೋಷ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 11/03/2025
ತಿಂಗಳು – ಮಾರ್ಚ್
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ದ್ವಾದಶಿ 08:13:22
ಪಕ್ಷ – ಶುಕ್ಲ
ನಕ್ಷತ್ರ – ಆಶ್ಲೇಷ 26:14:19*
ಯೋಗ – ಅತಿಗಂಡ 13:16:16
ಕರಣ – ಬಾಳವ 08:13:21
ಕರಣ – ಕೌಳವ 20:38:44
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ ಕರ್ಕಾಟಕ till 26:14:19*
ಚಂದ್ರ ರಾಶಿ ಸಿಂಹ from 26:14:19*
ಸೂರ್ಯ ರಾಶಿ ಕುಂಭ
ಋತು ಶಿಶಿರ
ಸೂರ್ಯೋದಯ 06:30:40
ಸೂರ್ಯಾಸ್ತ 18:28:34
ಹಗಲಿನ ಅವಧಿ 11:57:54
ರಾತ್ರಿಯ ಅವಧಿ 12:01:27
ಚಂದ್ರೋದಯ 16:14:46
ಚಂದ್ರಾಸ್ತ 29:10:40*
ರಾಹು ಕಾಲ 15:29 – 16:59ನಅಶುಭ
ಯಮಘಂಡ ಕಾಲ 09:30 – 10:59 ಅಶುಭ
ಗುಳಿಕ ಕಾಲ 12:30 – 13:59
ಅಭಿಜಿತ್ 12:06 – 12:54 ಶುಭ
ದುರ್ಮುಹೂರ್ತ 08:54 – 09:42 ಅಶುಭ
ದುರ್ಮುಹೂರ್ತ 23:17 – 24:05* ಅಶುಭ
—
ಇಂದಿನ ಮಾತು
ವರ್ಷವೆಲ್ಲ ಬರಡಾಗಿದ್ದ ಭೂಮಿಗೆ ಒಂದು ಮಳೆ ಸಾಕು, ಹಸಿರಾಗಲು. ಹಾಗೆ ನಮ್ಮ ಒಂದು ಒಳ್ಳೆಯ ನಿರ್ಧಾರ ಸಾಕು, ಜೀವನವನ್ನು ಸುಂದರವಾಗಿಸಲು.
—
People may forget what you said.
People may forget what you did.
But people never forget how you made them feel!
—
ಇಂದಿನ ಸುಭಾಷಿತ
ಸ್ಥಾನೇಷ್ಟೇವ ನಿಯೋಕ್ತವ್ಯಾ
ಭೃತ್ಯಾಶ್ಚಾಭರಣಾನಿ ಚ |
ನ ಹಿ ಚೂಡಾಮಣಿಃ ಪಾದೇ
ಪ್ರಭವಾಮೀತಿ ಬಧ್ಯತೇ ||
(ಪಂಚತಂತ್ರ, ಮಿತ್ರಭೇದ)
ಸೇವಕರನ್ನೂ, ಆಭರಣಗಳನ್ನೂ ಅವರವರಿಗೆ ತಕ್ಕ ಜಾಗದಲ್ಲಿ ಇಡಬೇಕು. ನನಗೆ ಸಾಮರ್ಥ್ಯವಿದೆಯೆಂದು ಯಾರೂ ಚೂಡಾಮಣಿಯನ್ನು ಕಾಲಿಗೆ ಕಟ್ಟಿಕೊಳ್ಳುವುದಿಲ್ಲವಷ್ಟೇ?
—
ಇಂದಿನ ಪದಾರ್ಥ
ಅಂತರೀಯ = An under or lower garment
ಅಂತರೀಪ = An Island
—
ಇಂದಿನ ಓದು
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || 6 ||
48) ಪದ್ಮನಾಭಃ
ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ, ಅವನು ಪದ್ಮನಾಭ. ಈ ಸೃಷ್ಟಿಯ ಕಾರಣಪುರುಷ.
49) ಅಮರಪ್ರಭುಃ
“ಮರರು” ಅಂದರೆ ಮರಣ ಹೊಂದುವವರು. “ಅಮರರು” ಅಂದರೆ ಮರಣವಿಲ್ಲದವರು ಎಂದರ್ಥ.
ಮರಣ ಕೇವಲ ಬೌದ್ಧಿಕ ಶರೀರಕ್ಕೆ ಹೊರತು ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ ಅಮರರೆನಿಸಿದ್ದರೂ ಕೂಡ, ಅವರಿಗೂ ಹಲವು ಕಲ್ಪಗಳ ನಂತರ ಮರಣ ಮತ್ತು ಮೋಕ್ಷವಿದೆ. ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು ದೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ. ಇಲ್ಲಿ ಅಮರಪ್ರಭು ಎಂದರೆ ಮುಕ್ತಿ ಪಡೆದ ಜೀವ ಹಾಗೂ ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.
***