newsics.com
ಮಧ್ಯಪ್ರದೇಶ: ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮಧ್ಯಪ್ರದೇಶದ ಛಿಂದ್ವಾಡ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಆದರೆ ಇದನ್ನು ತಳ್ಳಿಹಾಕಿರುವ ಪತಿ ಆಕೆಗೆ ಅಕ್ರಮ ಸಂಬಂಧಗಳಿದ್ದವು ಎಂದಿದ್ದಾನೆ. 8 ವರ್ಷಗಳ ಹಿಂದೆ ಅವರಿಬ್ಬರು ವಿವಾಹವಾಗಿದ್ದು ಮೊದಲ ಕೆಲ ಕಾಲ ಯಾವುದೇ ತೊಂದರೆಯಿರಲಿಲ್ಲ. ನಂತರ ಆಕೆಯ ಅತ್ತೆ ನಾದಿನಿಯರು ಹಿಂಸಿಸತೊಡಗಿದ್ದು ಒಂದೂವರೆ ವರ್ಷಗಳ ಕಾಲ ಮನೆಯಿಂದ ಹೊರಹಾಕಿದ್ದರು ಎಂದು ಕೋತ್ವಾಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆದರೆ ಇದನ್ನು ತಳ್ಳಿಹಾಕಿರುವ ಪತಿ ಆಕೆಗೆ ಅಕ್ರಮ ಸಂಬಂಧಗಳಿದ್ದವು ಎಂದಿದ್ದಾನೆ. 8 ವರ್ಷಗಳ ಹಿಂದೆ ಅವರಿಬ್ಬರು ವಿವಾಹವಾಗಿದ್ದು ಮೊದಲ ಕೆಲ ಕಾಲ ಯಾವುದೇ ತೊಂದರೆಯಿರಲಿಲ್ಲ. ನಂತರ ಆಕೆಯ ಅತ್ತೆ ನಾದಿನಿಯರು ಹಿಂಸಿಸತೊಡಗಿದ್ದು ಒಂದೂವರೆ ವರ್ಷಗಳ ಕಾಲ ಮನೆಯಿಂದ ಹೊರಹಾಕಿದ್ದರು ಎಂದು ಕೋತ್ವಾಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮಹಿಳೆ ದೂರಿನ ಪ್ರಕಾರ, ಬಿಜೆಪಿ ಬೆಂಬಲಿಸಿ ಮತ ಹಾಕಿದ್ದು ಪತಿಗೆ ಇಷ್ಟವಾಗದೆ ವಿಚ್ಛೇದನ ಕೋರಿದ್ದಾನೆ. ಇದರ ಆಧಾರದಲ್ಲಿ ಸಂತ್ರಸ್ತೆಯ ಪತಿ, ಅತ್ತೆ ಹಾಗೂ 4 ನಾದಿನಿಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲೂ ಪಾಲ್ಗೊಂಡಿದ್ದೂ ಪತಿಯ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ತಿಳಿಸಿದ್ದಾಳೆ.
ಕಳೆದ ಮೂರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆಕೆ ಅನ್ಯರೊಂದಿಗೆ ಸಂಬಂಧ ಹೊಂದಿದ್ದು ಮಕ್ಕಳ ಒಳಿತಿಗಾಗಿ ಸುಧಾರಿಸಿಕೊಳ್ಳಲು ಅವಕಾಶವನ್ನೂ ಕೊಟ್ಟಿದ್ದೆ. ನಂತರ ಮುಸ್ಮಿಂ ಕಾನೂನಿನ ಪ್ರಕಾರ 2022ರ ಮಾ.30ರಲ್ಲಿ ಮೊದಲ ಹಾಗೂ 2023ರ ಅಕ್ಟೋಬರ್ ಮತ್ತು ನವೆಂಬರ್ಗಳಲ್ಲಿ ಎರಡು ತಲಾಕ್ ನೀಡಿರುವುದಾಗಿ ಪತಿ ತಿಳಿಸಿದ್ದಾನೆ.
‘ಸಲಿಂಗ’ ದೌರ್ಜನ್ಯದ ಆರೋಪ ಮಾಡಿ ಆಪ್ತನಿಂದಲೇ ದೂರು:ಅಂದು ಬೆಂಬಲ, ಇಂದು ಸೂರಜ್ ವಿರುದ್ಧ ದೂರು…
ಕೋಲಿನಿಂದ ಹೊಡೆದು ಅಲ್ಲಾ ಹು ಅಕ್ಬರ್ ಹೇಳಿಸಿದ್ರು: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು