newsics.com
ಹಾಸನ : ಸೂರಜ್ ರೇವಣ್ಣ ಮೇಲೆ ಸಲಿಂಗ ಲೈಂಗಿಕ ದೌರ್ಜನ್ಯದ ಆರೋಪ ಬಂದಾಗ, ಬೆಂಬಲಕ್ಕೆ ನಿಂತು, ಸಂತ್ರಸ್ತನ ವಿರುದ್ಧವೇ ದೂರು ನೀಡಿದ್ದ ಸೂರಜ್ ರೇವಣ್ಣ ಆಪ್ತನೇ ಇದೀಗ ತಿರುಗಿ ಬಿದ್ದಿದ್ದಾನೆ. ನನ್ನ ಮೇಲೂ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಅಂತ ಆರೋಪಿಸಿದ್ದಾನೆ
ಸಲಿಂಗ ಕಾಮ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸೂರಜ್ ರೇವಣ್ಣ ಆಪ್ತ ಅಂತಾನೇ ಹೇಳಲಾದ ಹೊಳೆನರಸೀಪುರ ಮೂಲದ ಯುವಕ ಇದೀಗ ದೂರು ನೀಡಿದ್ದಾನೆ. ಅಸಹಜ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಬೆದರಿಕೆ ಆರೋಪದಡಿ ದೂರು ನೀಡಿದ್ದಾನೆ.
ಜೂನ್ 21ರಂದು ಮೊದಲ ಬಾರಿಗೆ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯದ ಆರೋಪ ಬಂದಾಗ ಇದೇ ಯುವಕ ಸೂರಜ್ ರೇವಣ್ಣ ಬೆಂಬಲಕ್ಕೆ ನಿಂತಿದ್ದ. ಇದೀಗ ಅದೇ ಹೊಳೆನರಸೀಪುರದ ಯುವಕ ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ್ದಾನೆ.
ಸಲಿಂಗ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ಯುವಕ ದೂರು ನೀಡಿದ್ದಾನೆ.