newsics.com
ಪಟನಾ: ಓರ್ವ ಅಪ್ರಾಪ್ತನನ್ನ ಕೋಣೆಯೊಂದರಲ್ಲಿ ಕೂಡಿ ಹಾಕಿ ಕೋಲಿನಿಂದ ಹೊಡೆದು ಬಲವಂತವಾಗಿ ಆತನಿಂದ ಅಲ್ಲಾ ಹು ಅಕ್ವರ್ ಎಂದು ಹೇಳಿಸಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ಯುವಕ ಕಾಲಿನ ಮೇಲೆ ಉಗುಳಿ ಅದನ್ನು ನಾಲಿಗೆಯಿಂದ ನೆಕ್ಕುತ್ತವೆ ಎಂದು ಅಮಾನವೀಯವಾಗಿ ಅಪ್ರಾಪ್ತನ ಜೊತೆ ನಡೆದುಕೊಳ್ಳಲಾಗಿದೆ. ಈ ಅಮಾನವೀಯ ಘಟನೆ ಬಿಹಾರ ರಾಜ್ಯದ ಮುಜಾಫುರ ಜಲ್ಲೆಯ ಮೋತಿಪುರ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೋರ್ವ ಅಪ್ರಾಪ್ತನನ್ನು ಥಳಿಸುತ್ತಿರೋದು ಸ್ಪಷ್ಟವಾಗಿ ಕಾಣುತ್ತದೆ. ಬಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ಮಧ್ಯೆದಲ್ಲಿ ಯುವಕ, ಅಲ್ಲಾ ಹು ಅಕ್ಬರ್ ಹೇಳು ಎಂದು ಆರ್ಡರ್ ಮಾಡುತ್ತಿರುತ್ತಾನೆ. ಇದರ ಜೊತೆಯಲ್ಲಿ ಮಿಯಾ ಸಾಹೇಬ್ ಜಿಂದಾಬಾದ್ ಎಂಬ ಘೋಷಣೆಯನ್ನು ಹೇಳುವಂತೆಯೂ ಬಾಲಕನ ಮೇಲೆ ಒತ್ತಡ ಹಾಕುತ್ತಾನೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಜಾಫುರ ಜಿಲ್ಲೆಯ ಮೋತಿಪುರ ವ್ಯಾಪ್ತಿಯ ಬತರೌಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.