newsics.com
ನ್ಯೂಸಿಕ್ಸ್. ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಶುಕ್ಲ ಪಕ್ಷ ದಶಮಿ
09-3-2025, ಭಾನುವಾರ
# ಶ್ರೀ ರಾಮಾನಂದ ಮಹಾರಾಜ್ ಪುಣ್ಯತಿಥಿ, ಇಂದೋರ್, ಮಧ್ಯಪ್ರದೇಶ
# ಶ್ರೀ ಹುಲಿಕುಂಟೆ ಪ್ರಾಣೇಶ ರಥ, ಬೊಮ್ಮಾಘಟ್ಟಿ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 09/03/2025
ತಿಂಗಳು – ಮಾರ್ಚ
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ದಶಮಿ 07:44:37
ಪಕ್ಷ – ಶುಕ್ಲ
ನಕ್ಷತ್ರ – ಪುನರ್ವಸು 23:54:14
ಯೋಗ – ಸೌಭಾಗ್ಯ 14:57:16
ಕರಣ – ಗರಜ 07:44:37
ಕರಣ – ವಾಣಿಜ 19:40:33
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ – ಮಿಥುನ till 17:44:45
ಚಂದ್ರ ರಾಶಿ – ಕರ್ಕಾಟಕ from 17:44:45
ಸೂರ್ಯ ರಾಶಿ – ಕುಂಭ
ಋತು – ಶಿಶಿರ
ಸೂರ್ಯೋದಯ 06:31:54
ಸೂರ್ಯಾಸ್ತ 18:28:22
ಹಗಲಿನ ಅವಧಿ 11:56:28
ರಾತ್ರಿಯ ಅವಧಿ 12:02:54
ಚಂದ್ರೋದಯ 14:24:28
ಚಂದ್ರಾಸ್ತ 27:43:37*
ರಾಹು ಕಾಲ 16:59 – 18:28 ಅಶುಭ
ಯಮಘಂಡ ಕಾಲ 12:30 – 13:59 ಅಶುಭ
ಗುಳಿಕ ಕಾಲ 15:29 – 16:59
ಅಭಿಜಿತ್ 12:06 – 12:54 ಶುಭ
ದುರ್ಮುಹೂರ್ತ 16:53 – 17:41 ಅಶುಭ
—
ಇಂದಿನ ಮಾತು
ಅವಶ್ಯಕತೆಗಳು ಬೇರೆಯಾದಂತೆ ವ್ಯಕ್ತಿಯು ಬದಲಾಗುತ್ತಾನೆ.
—
The ability to observe without judgement is the highest form of intelligence.
—
ಇಂದಿನ ಸುಭಾಷಿತ
ಏಷಾ ಹಿ ಪದಮೇಕತ್ರ
ನ ನಿಬಧ್ನಾತಿ ದುರ್ಭಗಾ |
ದಗ್ಧೇವಾನಿಯತಾಚಾರಂ
ಇತಶ್ಚೇತಶ್ಚ ಧಾವತಿ ||
(ಯೋಗವಾಸಿಷ್ಠ-ಲಕ್ಷ್ಮೀನಿರಾಕರಣ)
ಈ ಸಿರಿಯು ಬಹಳ ಕೆಟ್ಟವಳು. ಒಂದೆಡೆ ಕಾಲೂರಿ ನಿಲ್ಲುವುದಿಲ್ಲ. ನಿಯತವಾದ ಆಚಾರವಿಲ್ಲದೆ ಬೆಂಕಿಯ ಮೇಲೆ ಕಾಲಿಟ್ಟು ಸುಟ್ಟುಕೊಂಡವಳಂತೆ ಅಲ್ಲಿಂದಿಲ್ಲಿಗೆ ಓಡಾಡುತ್ತಿರುವಳು.
—
ಇಂದಿನ ಪದಾರ್ಥ
ಅತಿಕಾಟಕ = A very troublesome man
ಅತಿಕಾಯ = of extraordinary size, gigantic
—
ಇಂದಿನ ಓದು
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || 6 ||
46) ಅಪ್ರಮೇಯಃ
ಅಪ್ರಮೇಯ ಎಂದರೆ ಕೈಗೆಟುಕದ, ನಮ್ಮ ಬುದ್ಧಿಯಿಂದ ಅಳೆಯಲು ಅಸಾಧ್ಯವಾದ, ಆದರೂ ತಿಳಿಯಲು ಸಾಧ್ಯವಾದವ ಎಂದರ್ಥ! ಉದಾಹರಣೆಗೆ- ಸಮುದ್ರದ ನೀರು ಸಂಪೂರ್ಣ ನಮ್ಮ ಕೈಗೆಟಕದು. ಆದರೆ ನಮ್ಮಿಂದಾದಷ್ಟು ನಾವು ತಂದು ಮನೆಯಲ್ಲಿ ಶೇಖರಿಸಿಡಬಹುದು ಮತ್ತು ತಿಳಿಯಬಹುದು. ಒಂದು ಚಮಚ ಸಮುದ್ರದ ನೀರಿನ ರುಚಿ ಉಳಿದ ನೀರಿನ ರುಚಿಗಿಂತ ಭಿನ್ನ ಅಲ್ಲ. ಭಗವಂತ ಕೂಡ ಸಮುದ್ರದ ನೀರಿನಂತೆ ಅದ್ದರಿಂದ ಆತ ಅಪ್ರಮೇಯ.
***