newsics.com
ಇಬ್ಬರು ಪ್ರೇಮಿಗಳು ನಡು ರಸ್ತೆಯಲ್ಲೆ ತುಟಿಗೆ ತುಟಿಗೆ ಚುಂಬಿಸುತ್ತ ಹುಚ್ಚಾಟ ಮೆರೆದಿದ್ದಾರೆ. ಬೆಂಗಳೂರಿನ ರಾಗಿಗುಡ್ಡ ರಸ್ತೆಯಲ್ಲಿ ಮಾರ್ಚ್ 7 ರಂದು ರಾತ್ರಿವೇಳೆ ಬೈಕ್‌ನಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಹೋಗುತ್ತಿದ್ದ ವೇಳೆ, ಬೈಕ್‌ನ ಹಿಂಬದಿ ಕುಳಿತಿದ್ದ ಯುವಕ ಯುವತಿ ಇಬ್ಬರು ಎಲ್ಲವನ್ನು ಮರೆತು ಚುಂಬಿಸುವ ದೃಶ್ಯ ಹಿಂಬದಿ ಬರುತ್ತಿದ್ದ ಬೈಕ್ ಸವಾರನ ಹೆಲ್ಮೆಟ್ ಕ್ಯಾಮಾರದಲ್ಲಿ ಸೆರೆಯಾಗಿದೆ.
ಇಬ್ಬರು ಪ್ರೇಮಿಗಳ ಹುಚ್ಚಾಟವನ್ನು ಪ್ರಶ್ನಿಸಿದ ಬೈಕ್ ಸವಾರನಿಗೆ ಮಧ್ಯೆದ ಬೆರಳು ತೋರ್ಸಿ ಅಸಭ್ಯವಾಗಿ ವರ್ತಿಸಿ ಧಮ್ಕಿ ಹಾಕಿ, ಪ್ರೇಮದ ಅಮಲಿನಲ್ಲಿ ಹೊರಟಿದ್ದಾರೆ.. ಯುವಕ ಯುವತಿಯರ ಹುಚ್ಚಾಟ ಮೊಬೈಲ್ ನಲ್ಲಿ ಸೆರೆ ಹಿಡಿದ ಬೈಕ್ ಸವಾರ, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬೈಕ್ ಮಾಲಿಕನನ್ನು ಪತ್ತೆ ಮಾಡಿ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.