Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Man ki baath ಕರ್ನಾಟಕದ ಹುಲಿವೇಷ ನನಗಿಷ್ಟ ಎಂದ ಮೋದಿ, ಮನ್ ಕಿ‌ ಬಾತ್‌ನಲ್ಲಿ ಚಾಮರಾಜನಗರ ಸೋಲಿಗರ‌ ಬಣ್ಣನೆ
ಕರ್ನಾಟಕದೇಶಪ್ರಮುಖ

Man ki baath ಕರ್ನಾಟಕದ ಹುಲಿವೇಷ ನನಗಿಷ್ಟ ಎಂದ ಮೋದಿ, ಮನ್ ಕಿ‌ ಬಾತ್‌ನಲ್ಲಿ ಚಾಮರಾಜನಗರ ಸೋಲಿಗರ‌ ಬಣ್ಣನೆ

Share
2 Min Read
SHARE

newsics.com

ನವದೆಹಲಿ: ಕರ್ನಾಟಕದ ಹೆಮ್ಮೆಯ ಹುಲಿವೇಷದ ಕುರಿತು ತಮ್ಮ 119 ನೇ ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹುಲಿ ವೇಷ ತೊಟ್ಟು ಕುಣಿತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ವಿಶೇಷವಾಗಿ ಅತಿ ಹೆಚ್ಚು ಹುಲಿಗಳಿರುವ ಪ್ರದೇಶವಾಗಿರುವ ಚಾಮರಾಜನಗರದ ಬಿಆರ್‌ಟಿ ಅರಣ್ಯದಲ್ಲಿ ಹುಲಿಗಳನ್ನು ಉಳಿಸುವುದರಲ್ಲಿ ಸ್ಥಳೀಯ ಸೋಲಿಗರ ಪಾತ್ರ ದೊಡ್ಡದಿದೆ ಎಂದು ಬಣ್ಣಿಸಿದರು.

ಈಗಲೂ ಪ್ರಾಣಿ-ಮಾನವನ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ ಎಂದರೆ ಅದಕ್ಕೆ ಸೋಲಿಗರೆ ಕಾರಣವೆಂದು ಪ್ರಧಾನಿ ಮೋದಿ ಹೇಳಿದರು.

ತಮ್ಮ ಮನ್ ಕಿ ಬಾತ್ನಲ್ಲಿ ಮೋದಿ ಅವರು ಕ್ರಿಕೆಟ್ ಭಾಷೆಯಲ್ಲಿ ಮಾತನಾಡಿದರು. ಅದರಂತೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕ್ರಿಕೆಟ್ ವಾತಾವರಣವಿದೆ. ಆದರೆ ಭಾರತ ಬಾಹ್ಯಾಕಾಶದಲ್ಲಿ ಶತಕ ಗಳಿಸಿದೆ ಎನ್ನುವುದನ್ನು ಶ್ಲಾಘಿಸಿದರು.

ಇಸ್ರೋದ ಈ ಸಾಧನೆಯನ್ನು ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಒಂದು ಸ್ಮರಣೀಯ ಹೆಜ್ಜೆ ಎಂದು ಬಣ್ಣಿಸಿದ ಅವರು, ಇದರೊಂದಿಗೆ ಜನರು ಕನಿಷ್ಠ ಒಂದು ದಿನವಾದರೂ ವಿಜ್ಞಾನಿಗಳಾಗಿ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಕೇಂದ್ರಗಳಿಗೆ ಭೇಟಿ ನೀಡುವಂತೆ ಅವರು ಒತ್ತಾಯಿಸಿದರು.

ಕೃತಕ ಬುದ್ಧಿಮತ್ತೆಯ ಸಹಾಯದಿಂದ ಬುಡಕಟ್ಟು ಭಾಷೆಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿರುವ ತೆಲಂಗಾಣದ ಆದಿಲಾಬಾದ್‌ನ ಸರ್ಕಾರಿ ಶಾಲಾ ಶಿಕ್ಷಕ ತೋಡಸಮ್ ಕೈಲಾಶ್ ಅವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತನಾಡಿದರು.

ಡಿಜಿಟಲ್ ಹಾಡು ಮತ್ತು ಸಂಗೀತದಲ್ಲಿ ಅವರ ಆಸಕ್ತಿ ನಮ್ಮ ಬುಡಕಟ್ಟು ಭಾಷೆಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತಿದೆ. ಅವರು AI ಪರಿಕರಗಳನ್ನು ಬಳಸಿಕೊಂಡು ಕೊಲಾಮಿ ಭಾಷೆಯಲ್ಲಿ ಹಾಡನ್ನು ರಚಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಕೊಲಾಮಿ ಹೊರತುಪಡಿಸಿ ಇತರ ಹಲವು ಭಾಷೆಗಳಲ್ಲಿ ಹಾಡುಗಳನ್ನು ರಚಿಸಲು ಅವರು AI ಬಳಸುತ್ತಿದ್ದಾರೆ. ಅವರ ಹಾಡುಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ಬಹಳಷ್ಟು ಇಷ್ಟಪಡುತ್ತಿದ್ದಾರೆ ಎಂದರು.

ಇನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರನ್ನು ಗೌರವಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಿಶಿಷ್ಟ ಯೋಜನೆ ರೂಪಿಸಿದ್ದಾರೆ.

ಅದರಂತೆ ಅವರು ಈ ಬಾರಿಯೂ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಅವರ ಸಾಮಾಜಿಕ ಜಾಲತಾಣದ ಖಾತೆಗಳಾದ ಎಕ್ಸ್ (X), ಇನ್ಸ್ಟಾಗ್ರಾಮ್‌, ಫೇಸ್ಬುಕ್ ನಂತಹ ಇನ್ನಿತರ ಖಾತೆಗಳನ್ನು ದೇಶದ ಕೆಲವು ಸ್ಫೂರ್ತಿದಾಯಕ ಮಹಿಳೆಯರಿಗೆ ಹಸ್ತಾಂತರಿಸುವುದಾಗಿ ತಿಳಿಸಿದರು. ಅಂದು (ಮಾರ್ಚ್ 8) ಪ್ರಧಾನಿಯವರ ಸಾಮಾಜಿಕ‌ ಜಾಲತಾಣದ ಖಾತೆಗಳನ್ನು ಮಹಿಳೆಯರ ತಂಡವೇ ನಿರ್ವಹಿಸಲಿದೆ.

ಪ್ರಯಾಗ್‌ರಾಜ್‌ನಲ್ಲಿನ ಮಹಾ‌ಕುಂಭಮೇಳವನ್ನು ಟೀಕಿಸುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೋದಿ, ಇದು ಗುಲಾಮಿ‌ ಸಂಸ್ಕೃತಿಯ ಸಂಕೇತ ಎಂದರು.

Flying car ಸಿದ್ಧವಾಯ್ತು ಹಾರುವ ಕಾರು, ಮುಂಗಡ ಬುಕಿಂಗ್ ಶುರು, ಕಾರಿನ ಬೆಲೆ ಎಷ್ಟು? ವಿಡಿಯೋ ನೋಡಿ

Modi ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಳ: ಪ್ರಧಾನಿ ಮೋದಿ ಮಹತ್ವದ ಸಲಹೆ

ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹೊಸ ದಾಖಲೆ…team india kohli

sleeping tips:ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ವಾ? ಈ ಹಣ್ಣುಗಳನ್ನು ತಿನ್ನಿರಿ

Modi ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಡೇಕೇರ್ ಕೇಂದ್ರ ತೆರೆಯಲು ಸರ್ಕಾರ ನಿರ್ಧಾರ: ಮೋದಿ

TAGGED:Modi mentioned hulivesha in Man Ki Baat
Share This Article
Facebook Twitter Copy Link Print
Previous Article Expensive grape ಈ ದ್ರಾಕ್ಷಿ ಬಲು ದುಬಾರಿ, ಕೆ.ಜಿ.ಗೆ ಎಂಟು ಲಕ್ಷ ರೂಪಾಯಿ!
Next Article Reels craze ರೀಲ್ಸ್ ಹುಚ್ಚಾಟ: 100 ಅಡಿ ಬೆಟ್ಟದಿಂದ ಬಿದ್ದ ಯುವಕ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?