newsics.com
ಉತ್ತರ ಪ್ರದೇಶ: ಮದುವೆ ದಿನ ಸತ್ತಂತೆ ನಟಿಸಿ, ಸ್ನೇಹಿತೆ ಜೊತೆ ವಧು ಓಡಿಹೋದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.
ಹೋಮಿಯೋಪಥಿ ವೈದ್ಯೆಯಾಗಿರುವ ಮದುಮಗಳ ಮದುವೆ ಫಿಕ್ಸ್ ಆಗಿತ್ತು. ಮದುವೆಯ ದಿನದವರೆಗೂ ಆಕೆ ಏನೂ ಹೇಳಿರಲಿಲ್ಲ. ಆದ್ರೆ, ಮದುವೆಯ ದಿನ ಶೃಂಗಾರ ಮಾಡಿಕೊಂಡು ಬ್ಯೂಟಿ ಪಾರ್ಲರ್ಗೆ ಹೋಗುವೆ ಎಂದಳು. ಆಗ ಎಷ್ಟು ಹೊತ್ತಾದರೂ ಬರಲಿಲ್ಲ. ಮಗಳು ಬರದಾಗ ಎಲ್ಲರೂ ಹುಡುಕಾಟ ನಡೆಸಿದರು. ಆ ಸಮಯದಲ್ಲಿ ಅವರಿಗೆ ಬ್ಯೂಟಿ ಪಾರ್ಲರ್ನಲ್ಲಿ ಇದ್ದ ಆಕೆಯ ಸ್ನೇಹಿತರು, ಬ್ಯೂಟಿ ಪಾರ್ಲರ್ನಲ್ಲಿ ಆಕೆಗೆ ಹೃದಯಾಘಾತವಾಯ್ತು. ಮೀರತ್ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದಳು ಎಂದರು.
ಕುಟುಂಬಸ್ಥರು ಗಾಬರಿ ಬಿದ್ದು, ಪೊಲೀಸರಿಗೆ ದೂರು ನೀಡಿದ್ದರು. ಮಧ್ಯಪ್ರವೇಶಿಸಿದ ಪೊಲೀಸರು ತನಿಖೆ ಶುರು ಮಾಡಿದರು. ಸಿಸಿಟಿವಿ ದೃಶ್ಯ ನೋಡಿದಾಗ, ಮದುಮಗಳು ತನ್ನ ಸ್ನೇಹಿತೆಯ ಜೊತೆ ಓಡಿ ಹೋಗುತ್ತಿರುವುದು ಕಂಡುಬಂದಿದೆ. ಮಹಿಳೆಯ ತಂದೆ ಆಕೆಯ ಮಹಿಳಾ ಸ್ನೇಹಿತೆಯಿಂದ ಅಪಹರಿಸಲ್ಪಟ್ಟಿದ್ದಾಳೆ ಎಂದು ದೂರು ದಾಖಲಿಸಿದ ನಂತರ, ಎಫ್ಐಆರ್ ದಾಖಲಿಸಲಾಗಿದೆ.
ಕೊನೆಗೂ ಸ್ನೇಹಿತೆಯ ಜೊತೆ ಆಕೆ ಸಿಕ್ಕಿಬಿದ್ದಳು. ಅವಳನ್ನು ಅರೆಸ್ಟ್ ಮಾಡಿದಾಗ, ನನಗೆ ಮದುವೆ ಇಷ್ಟವಿರಲಿಲ್ಲ. ಸಾಕಷ್ಟು ವಿರೋಧಿಸಿದೆ. ಆದರೆ, ಬಲವಂತವಾಗಿ ನನ್ನನ್ನು ಮದುವೆಯ ಮನೆಯವರೆಗೆ ಕರೆತರಲಾಯಿತು ಎಂದು ವೈದ್ಯೆ ಹೇಳಿದ್ದಾಳೆ!. ಆದ್ದರಿಂದ ಸ್ನೇಹಿತೆಯ ನೆರವಿನೊಂದಿಗೆ ಈ ಪ್ಲ್ಯಾನ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.