newsics.com
ನವದೆಹಲಿ : ಮುಂಜಾನೆ ಶಾಲಾ ಅಂಗಳದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದಳು. ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡ ಬಾಲಕಿ ಬದುಕುಳಿಯಲಿಲ್ಲ.
ಈ ಘಟನೆ ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಶ್ರೀನಿಧಿ ಎಂಬ ಬಾಲಕ್ಕಿ ರಮಾರೆಡ್ಡಿ ಮಂಡಲ್ನ ಸಿಂಗಾರಪಲ್ಲಿ ಎಂಬ ಗ್ರಾಮದ ಹುಡುಗಿ. ಕಮಾರರೆಡ್ಡಿಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಗುರುವಾರ ಎಂದಿನಂತೆ ಶಾಲೆಗೆ ಬಂದ ಮಗು ಏಕಾಏಕಿ ಕುಸಿದು ಬಿದ್ದಿದ್ದಾಳೆ.
ಎದೆ ನೋವು ಕಾಣಿಸಿಕೊಂಡು ಶಾಲೆಯ ಅಂಗಳದಲ್ಲಿಯೇ ಬಿದ್ದುಬಿಟ್ಟಿದ್ದಾಳೆ. ಅದನ್ನು ನೋಡಿದ ಶಾಲಾ ಶಿಕ್ಷಕರು ತಡಮಾಡದೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಸಿಪಿಆರ್ ಮಾಡಿದ್ದಾರೆ, ಆದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಚೆಲ್ಲಿದ್ದಾಳೆ.