newsics.com
ಬೆಂಗಳೂರು: ಬೆಂಗಳೂರಿನ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಲಿದೆ. ಇದೇ ತಿಂಗಳಿನ ಅಂತ್ಯಕ್ಕೆ ಹೋಟೆಲ್‌ಗಳಲ್ಲಿ ಕಾಫಿ ದರ ಬರೋಬ್ಬರಿ 15% ಏರಿಕೆಯಾಗಲಿದೆ.
ಕಾಫಿಗೆ 800 ರಿಂದ 850 ರೂ. ಇದೆ. ಶೀಘ್ರದಲ್ಲಿಯೇ ಇದರ ಬೆಲೆ 1000 ದಿಂದ 1100ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳು ಸಭೆ ನಡೆಸಿದ್ದು, ಕಾಫಿ ರೇಟ್ ಕೂಡ 5 ರೂ. ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ.
ರೋಸ್ಟರ್ ಮಾರಾಟ ಮಾಡುವ ಹುರಿದ ಕಾಫಿ ಪುಡಿ ಬೆಲೆ 100 ಹೆಚ್ಚಾಗಲಿದ್ದು, ಮಾರ್ಚ್ ಅಂತ್ಯಕ್ಕೆ ಕೆಜಿಗೆ 100 ರೂ. ಹೆಚ್ಚಳವಾಗಲಿದೆ.
ಕರ್ನಾಟಕದಲ್ಲಿ ಸುಮಾರು 500 ರೋಸ್ಟರ್‌ಗಳಿದ್ದು, ಅವುಗಳಲ್ಲಿ 300 ಬೆಂಗಳೂರಿನಲ್ಲಿವೆ. ಕಾಫಿ ಪುಡಿ ಬೆಲೆ ಹೆಚ್ಚಾದರೆ ಹೋಟೆಲ್‌ಗಳಲ್ಲಿ ಕಾಫಿ ದರ ಹೆಚ್ಚಳ ಅನಿರ್ವಾಯ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.