newsics.com
ವಾಷಿಂಗ್ಟನ್: ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ತಮ್ಮ ಗೆಳತಿ ಶಿವೋನ್ ಝಿಲ್ಲಿಸ್ ಹಾಗೂ ಮೂವರು ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಾಷಿಂಗ್ಟನ್ ನಲ್ಲಿ ಭೇಟಿಯಾದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರ ನಾಥ್ ಟಾಗೋರ್ ರಚಿಸಿರುವ ‘ದಿ ಕ್ರೆಸೆಂಟ್ ಮೂನ್’, ಖ್ಯಾತ ಲೇಖಕ ಆರ್.ಕೆ.ನಾರಾಯಣ್ ಅವರ ಬರಹಗಳ ಸಂಗ್ರಹ ಹಾಗೂ ಪಂಡಿತ್ ವಿಷ್ಣು ಶರ್ಮರ ಪಂಚತಂತ್ರ ಕೃತಿಗಳನ್ನು ಎಲಾನ್ ಮಸ್ಕ್ ಅವರ ಮಕ್ಕಳಿಗೆ ಉಡುಗೊರೆ ನೀಡಿದರು.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಎಲಾನ್ ಮಸ್ಕ್ ಹಾಗೂ ಅವರ ಕುಟುಂಬವನ್ನು ಭೇಟಿಯಾಗಿದ್ದಕ್ಕೆ ಹಾಗೂ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಕ್ಕೆ ಸಂತೋಷವಾಯಿತು” ಎಂದು ಮೋದಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಎಲಾನ್ ಮಸ್ಕ್ ರ ಮಕ್ಕಳು ತಮಗೆ ನೀಡಿದ ಕೃತಿಗಳನ್ನು ಓದುತ್ತಿರುವುದು ಸೆರೆಯಾಗಿದೆ.