newsics.com
ಬೆಂಗಳೂರು: ಮೆಟ್ರೋ ರೈಲು ಪ್ರಯಾಣ ದರವನ್ನು ಶೇ. 100ರಷ್ಟು ಹೆಚ್ಚಳ ಮಾಡಿ ರಾಜಕೀಯ ಪಕ್ಷಗಳು ಹಾಗೂ ಪ್ರಯಾಣಿಕರಿಂದ ಕೆಂಗಣ್ಣಿಗೆ ಗುರಿಯಾದ ನಂತರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ( BMRCL)ಗರಿಷ್ಠ ಶೇ. 71 ರಷ್ಟು ಏರಿಕೆಗೆ ನಿರ್ಧರಿಸಿದ್ದು, ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವುದಾಗಿ ಗುರುವಾರ ಘೋಷಿಸಿದೆ.
ವಿಭಿನ್ನ ಸ್ಲ್ಯಾಬ್ಗಳ ಅಡಿಯಲ್ಲಿ ಸ್ಟೇಜ್ ಆಧಾರದಲ್ಲಿ ಪ್ರಯಾಣ ದರವನ್ನು ಪರಿಷ್ಕರಿಸಲಾಗುವುದು, ಶುಕ್ರವಾರದಿಂದ ಒಂದು ಕಡೆಯ ದರವನ್ನು ಕನಿಷ್ಠ 9 ರೂಪಾಯಿಯಷ್ಟು ಕಡಿಮೆಗೊಳಿಸಲಾಗುವುದು. ಇದರಿಂದ ಒಟ್ಟಾರೆ 2,91,418 ಪ್ರಯಾಣಿಕರಲ್ಲಿ ಶೇ.46 ರಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಮೆಟ್ರೋ ದರ ಇಳಿಕೆ ಸಂಬಂಧ ಸ್ವಲ್ಪ ಬದಲಾವಣೆ ಮಾಡಲಾಗುತ್ತದೆ. ಶೀಘ್ರದಲ್ಲೇ ಪರಿಷ್ಕೃತ ದರ ಪ್ರಕಟಿಸಲಾಗುವುದು ಎಂದು BMRCL ಎಂಡಿ ಮಹೇಶ್ವರ್ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ 90%, 100% ಜಂಪ್ ಆಗಿದೆಯೋ ಅಲ್ಲಿ ಬದಲಾವಣೆ ಮಾಡುತ್ತೇವೆ. ಸ್ವಲ್ಪ ರಿಲೀಫ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ನಿನ್ನೆ ರಾತ್ರಿಯಿಂದ ಈ ಬಗ್ಗೆ ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ಬೆಂಗಳೂರಿನಲ್ಲಿ ವಿಪರೀತ ದರ ಏರಿಕೆಯಾಗಿತ್ತು. ಸಾರ್ವಜನಿಕರಿಂದಲೂ ಬಿಎಂಆರ್ಸಿಎಲ್ ವಿರುದ್ಧ ಭಾರೀ ಅಕ್ರೋಶ ವ್ಯಕ್ತವಾಗಿತ್ತು. ವಿರೋಧ ಜಾಸ್ತಿ ಆಗುತ್ತಿದ್ದಂತೆ ಎಚ್ಚೆತ್ತ ಬಿಎಂಆರ್ಸಿಎಲ್ ದರವನ್ನು ಇಳಿಸಲು ಮುಂದಾಗಿದೆ.
Tulasi Gabbard ಅಮೆರಿಕ ಗುಪ್ತಚರ ವಿಭಾಗಕ್ಕೆ ಹಿಂದೂ ನಾಯಕಿ ತುಳಸಿ ಗಬ್ಬಾರ್ಡ್ ನಿರ್ದೇಶಕಿ